ಸುದ್ದಿಗಳು

ಸೆಟ್ಟೇರುತ್ತಿರುವ ‘ಕ್ರೇಜಿ ರಿಚ್ ಏಷ್ಯನ್’ ಸರಣಿಯ ಮುಂದುವರಿದ ಭಾಗ

‘ಕ್ರೇಜಿ ರಿಚ್ ಏಷ್ಯನ್’ ಜಾಗತಿಕವಾಗಿ ಈಗಾಗಲೇ ಸಾಕಷ್ಟು ಪರಿಣಾಮ ಬೀರಿದ್ದು, ಅದರ ಮುಂದುವರಿದ ಭಾಗದ ಚಿತ್ರೀಕರಣಕ್ಕೆ ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ.  ಚಿತ್ರಕಥೆಗಾರರಾದ ಪೀಟರ್ ಚಿಯಾರೆಲ್ಲಿ ಮತ್ತು ಅಡೆಲೆ ಲಿಮ್ ಮತ್ತು ನಿರ್ಮಾಪಕ ನೀನಾ ಜಾಕೋಬ್ಸನ್, ಬ್ರಾಡ್ ಸಿಂಪ್ಸನ್ ಮತ್ತು ಜಾನ್ ಪೆನೊಟ್ಟಿ ಮೊದಲಾದವರನ್ನು  ನಿರ್ದೇಶಕ ಜಾನ್ ಎಮ್. ಚು ಸೃಜನಾತ್ಮಕ ತಂಡದೊಂದಿಗೆ ಮತ್ತೆ ಹಿಂದಿರುಗಿಸಲು ನಿರ್ಧರಿಸಿದ್ದಾರೆ.

“ಈ ಸರಣಿಯನ್ನು ತಯಾರು ಮಾಡುವುದು ನಮ್ಮ ಸಂಪೂರ್ಣ ಉದ್ದೇಶವಾಗಿದೆ” ಎಂದು ಪೆನೊಟ್ಟಿ ಅವರು ಎಂಟರ್ ಟೈನ್ ಮೆಂಟ್ ವೀಕ್ಲಿಗೆ ಮುಂದುವರಿದ ಭಾಗದ ಸಂಭಾವ್ಯತೆಯ ಬಗ್ಗೆ ಹೇಳಿದ್ದಾರೆ. “ಈ ವಾರಾಂತ್ಯದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಬಹಳ ಹೃದಯಸ್ಪರ್ಶಿಯಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ವಾರಾಂತ್ಯದಲ್ಲಿ ಜಗತ್ತಿನ ಹೆಚ್ಚು ‘ಕ್ರೇಜಿ ರಿಚ್ ಏಷ್ಯನ್’ ನೋಡಲು ಸಾಧ್ಯವಾಗಲಿದೆ” ಎಂದಿದ್ದಾರೆ.ಉತ್ತರಭಾಗವು ‘ಚೀನಾ ರಿಚ್ ಗರ್ಲ್ ಫ್ರೆಂಡ್’ ಅನ್ನು ಆಧರಿಸಿದೆ. ಕೆವಿನ್ ಕ್ವಾನ್ರ ಅತಿ ಹೆಚ್ಚು ಮಾರಾಟವಾದ ‘ಕ್ರೇಜಿ ರಿಚ್ ಏಷ್ಯನ್ಸ್’ ಸರಣಿಯ ಎರಡನೇ ಕಾದಂಬರಿಯಾಗಿದೆ. 25 ವರ್ಷಗಳ ಹಿಂದೆ “ದಿ ಜಾಯ್ ಲಕ್ ಕ್ಲಬ್” ವತಿಯಿಂದ ಏಷ್ಯಾದ-ಅಮೆರಿಕನ್ ನಾಯಕರೊಂದಿಗೆ ಏಷ್ಯಾದ ಎಲ್ಲಾ ಪಾತ್ರಗಳನ್ನು ಹೊಂದಿರುವ ಮೊದಲ ಪ್ರಮುಖ ಸ್ಟುಡಿಯೋ ಸರಣಿ ‘ಕ್ರೇಜಿ ರಿಚ್ ಏಷ್ಯನ್’ ಆಗಿದೆ.

ವಾರ್ನರ್ ಬ್ರದರ್ಸ್ ರೊಮ್ಯಾಂಟಿಕ್ ಹಾಸ್ಯ ಚಿತ್ರ ಕೇವಲ ಟಿಕೆಟ್ ಮಾರಾಟದಿಂದಾಗಿ ಸುಮಾರು 40 ಮಿಲಿಯನ್ ಡಾಲರ್ ಮೊತ್ತವನ್ನು ಮೊದಲ ಆರು ದಿನಗಳಲ್ಲಿ ಥಿಯೇಟರ್ ಗಳಲ್ಲಿ ಗಳಿಸಿಕೊಂಡಿತ್ತು.

Tags

Related Articles