ಸುದ್ದಿಗಳು

ಸ್ವೀಟ್ ಹೋಮ್ ಅಲಬಾಮ ಚಿತ್ರದ ಸಹ ಲೇಖಕ ‘ಎಡ್ ಕಿಂಗ್’ ನಿಧನ…!

ಬುಧವಾರ ಟೆನ್ನೆಸ್ಸೀಯದಲ್ಲಿತಮ್ಮ 68ನೇ ವಯಸ್ಸಿನಲ್ಲಿ ನಿಧನ ಹೊಂದಿದ ಕಿಂಗ್

ಬಾಂಡ್ ನ ಜನಪ್ರಿಯ ಹಿಟ್ ‘ಸ್ವೀಟ್ ಹೋಮ್ ಅಲಬಾಮಾ’ ದ ಸಹ – ಲೇಖಕ, ಮಾಜಿ ಲೈನಿರ್ಡ್ ಸ್ಕಿನಿರ್ಡ್ ಗಿಟಾರ್ ವಾದಕ ಎಡ್ ಕಿಂಗ್ ಅವರು ತಮ್ಮ 68ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಬುಧವಾರ ಟೆನ್ನೆಸ್ಸೀಯದಲ್ಲಿರುವ ನ್ಯಾಶ್ವಿಲ್ಲೆಯಲ್ಲಿನ ತನ್ನ ಮನೆಯಲ್ಲಿ ಮರಣ ಹೊಂದಿರುವುದಾಗಿ ಫೇಸ್ ಬುಕ್  ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ತಿಳಿಸಿದೆ.

“ಆಗಸ್ಟ್ 22, 2018ರಂದು ಟೆನ್ನೆಸ್ಸೀಯ ನ್ಯಾಶ್ವಿಲ್ಲೆನಲ್ಲಿರುವ ತಮ್ಮ ಮನೆಯಲ್ಲಿ ಎಡ್ ಕಿಂಗ್ ನಿಧನರಾದರೆಂದು  ಸುದ್ದಿ ತಿಳಿಸಿಲು ವಿಷಾದವೆನಿಸುತ್ತಿದೆ. ಎಡ್ ಅವರ ಜೀವನ ಮತ್ತು ವೃತ್ತಿ ಬದುಕಿನಲ್ಲಿ ನೀಡಿದ ಪ್ರೀತಿ ಹಾಗೂ ಬೆಂಬಲ ನೀಡಿದ್ದಕ್ಕಾಗಿ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಾವು ಧನ್ಯವಾದ ಹೇಳುತ್ತೇವೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.‘ಲೈನಿರ್ಡ್ ಸ್ಕಿನಿರ್ಡ್’ ಸಹ-ಸಂಸ್ಥಾಪಕ ಗ್ಯಾರಿ ರೋಸ್ಟಿಂಗ್ಟನ್ ಅವರು ಕಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಎಡ್ ನನ್ನ ಸಹೋದರ ಮತ್ತು ಒಬ್ಬ ಮಹಾನ್ ಗೀತರಚನಾಕಾರ ಮತ್ತು ಗಿಟಾರ್ ವಾದಕ” ಎಂದಿದ್ದಾರೆ ಎಂದು ಎಂಟರ್ಟೈನ್ಮೆಂಟ್ ವೀಕ್ಲಿ ವರದಿ ಮಾಡಿದೆ.

ಸ್ವರ್ಗದಲ್ಲಿ ರಾಕ್ ಅಂಡ್ ರೋಲ್ ಹುಡುಗರೊಂದಿಗೆ ಅವನು ಮತ್ತೆ ಸೇರಿಕೊಳ್ಳುತ್ತಾನೆ ಎಂಬುದು ನನಗೆ ತಿಳಿದಿದೆ. ಆತನ ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೊರಕಲಿ ಎಂದು ಪ್ರಾರ್ಥಿಸುತ್ತೇವೆ”. ಕಿಂಗ್ ಅವರು ತನ್ನ ಸಂಗೀತ ವೃತ್ತಿಜೀವನವನ್ನು 60ರ ದಶಕದಲ್ಲಿ ಪ್ರಾರಂಭಿಸಿದರು. ಅವರು ಸೈಕೆಡೆಲಿಕ್ ರಾಕ್ ಬ್ಯಾಂಡ್ ‘ಸ್ಟ್ರಾಬೆರಿ ಅಲಾರ್ಮ್ ಕ್ಲಾಕ್’ ಸ್ಥಾಪಕ ಸದಸ್ಯರಾಗಿದ್ದರು. ಮತ್ತು 1968ರಲ್ಲಿ ‘ಲೈನಿರ್ಡ್ ಸ್ಕಿನಿರ್ಡ್’ ಸದಸ್ಯರನ್ನು ಪರಿಚಯಿಸಿದರು.

1972ರಲ್ಲಿ ಬ್ಯಾಂಡ್ಗೆ ಸೇರಿದ ನಂತರ, ಅವರು ಬಾಸ್ ವಾದಕ ಲಿಯಾನ್ ವಿಲ್ಕೆಸನ್ ಅವರ ಬದಲಿಗೆ ಪಾಯಿಸನ್ ವಿಸ್ಕಿ, ಸ್ಯಾಟರ್ಡೇ ನೈಟ್ ಸ್ಪೆಶಲ್, ಮತ್ತು ಸ್ವಾಂಪ್ ಮ್ಯೂಸಿಕ್ ನಂಥ ಹಿಟ್ ಬ್ಯಾಂಡ್ ಬರೆದಿದ್ದಾರೆ.

Tags