ಸುದ್ದಿಗಳು

‘ಎಲ್ಟನ್ ಜಾನ್’ ಜೀವನಚರಿತ್ರೆ ಆಧಾರಿತ ಚಿತ್ರ ಬಿಡುಗಡೆಗೆ ಹೊಸ ದಿನಾಂಕ ನಿಗದಿ…!

ದುಶ್ಚಟಗಳಿಂದ ಹೊರಬಂದ ಅದ್ಭುತವಾದ ಅಂತರರಾಷ್ಟ್ರೀಯ ಸೂಪರ್ ಸ್ಟಾರ್ ಕಥೆ

ಇಂಗ್ಲಿಷ್ ಗಾಯಕ ಎಲ್ಟನ್ ಜಾನ್ ಅವರ ಜೀವನ ಆಧಾರಿತ ಚಿತ್ರ ‘ರಾಕೆಟ್ ಮ್ಯಾನ್’ ಅನ್ನು ಈ ಹಿಂದೆ ಮೇ 17ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈಗ ಮೇ 31, 2019ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

‘ಕಿಂಗ್ಸ್ ಮ್ಯಾನ್’ ನಟ ತಾರನ್ ಎಗರ್ಟನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಲೀ ಹಾಲ್ ಅವರ ನೆರವಿನಿಂದ, ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್ ನಿಂದ ಪ್ರಸಿದ್ಧ ಗಾಯಕ-ಗೀತರಚನಕಾರರ ಪ್ರಯಾಣವನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. 1970 ಮತ್ತು 80ರ ದಶಕದ ಅವಧಿಯಲ್ಲಿ ರಾಕ್ ‘ಎನ್’ ರೋಲ್ ಮೂಲಕ ಜಗತ್ತಿನಲ್ಲಿ ಅವರು ಮತ್ತಷ್ಟು ಪ್ರಸಿದ್ಧಿ ಪಡೆದುಕೊಳ್ಳುತ್ತಾರೆ.ಈ ಚಿತ್ರವು ಎಲ್ಟನ್ ಜಾನ್ ಅವರ ಡ್ರಗ್ಸ್ ಮತ್ತು ಮದ್ಯ ವ್ಯಸನದ ಕಥೆಯನ್ನು ನಿರೂಪಿಸುತ್ತದೆ. ದುಶ್ಚಟಗಳಿಂದ ಹೊರಬಂದ ನಂತರ ಅದ್ಭುತವಾದ ಅಂತರರಾಷ್ಟ್ರೀಯ ಸೂಪರ್ ಸ್ಟಾರ್ ಆದ ಕಥೆಯನ್ನು ನಿರೂಪಿಸುತ್ತದೆ.

ಜಾಮೀ ಬೆಲ್, ರಿಚರ್ಡ್ ಮ್ಯಾಡೆನ್, ಬ್ರೈಸ್ ಡಲ್ಲಾಸ್ ಹೋವರ್ಡ್ ಮತ್ತು ಗೆಮ್ಮಾ ಜೋನ್ಸ್ ಕೂಡ ಅಭಿನಯಿಸಿದ್ದಾರೆ. ಎಗರ್ಟನ್ ಅವರ ಹಾಡುಗಳನ್ನು ಅಬ್ಬೆ ರೋಡ್ ಸ್ಟುಡಿಯೋಸ್ ನಲ್ಲಿ ಈಗಾಗಲೇ ಹಾಡುಗಳ ಧ್ವನಿಮುದ್ರಣ ಮಾಡಲಾಗುತ್ತಿದೆ.

Tags

Related Articles