ಸುದ್ದಿಗಳು

‘ಐಸ್ ಕ್ಯೂಬ್ ಸಂಗೀತ ಗೋಷ್ಠಿ’ ಯಲ್ಲಿ, ಸಿಟ್ಟಾಗಿ ಗುಂಡು ಹಾರಿಸಿದ ಅನಾಮಿಕ…!

ಕ್ಯಾಲಿಫೋರ್ನಿಯಾದ ಡೆಲ್ ಮಾರ್ ನಗರದಲ್ಲಿ ಸಂಭವಿಸಿದ ಘಟನೆ

ಈ ಕಾರ್ಯಕ್ರಮವನ್ನು ಡೆಲ್ ಮಾರ್ ರಾಸೆಟ್ರ್ಯಾಕ್ ನಲ್ಲಿ ಆಯೋಜಿಸಲಾಗಿತ್ತು. ಸ್ಥಳೀಯ ಕಾಲಮಾನ ಸಂಜೆ 7:30ರ ವೇಳೆಗೆ ಗುಂಡಿನ ದಾಳಿ ನಡೆದಿದೆ.

ಒಬ್ಬ ಅನಾಮಿಕ ವ್ಯಕ್ತಿಯು ಜನಸಂದಣಿಯಿಂದ ಆವೃತವಾದ ಪ್ರದೇಶದ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆ ಸಂಭವಿಸಿದ ಬಳಿಕ ರಾಪರ್ ಐಸ್ ಕ್ಯೂಬ್ ನ ಮಾರಾಟವಾದ ಸಂಗೀತ ಗೋಷ್ಠಿ ಎಂದು ತಿಳಿದು ಬಂದಿದೆ.

ಫಾಕ್ಸ್ ನ್ಯೂಸ್ ವರದಿ

ಭಾನುವಾರ ಕ್ಯಾಲಿಫೋರ್ನಿಯಾದ ಡೆಲ್ ಮಾರ್ ನಗರದಲ್ಲಿ ಸಂಭವಿಸಿದ ಈ ಘಟನೆ ವೇಳೆ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ಗುಂಡು ಹಾರಿಸಿದ ಶಂಕಿತನನ್ನು ಸೆರೆ ಹಿಡಿಯಲಾಗಿಲ್ಲ. ಆದರೆ ಆತನ ರೇಖಾಚಿತ್ರವನ್ನು ಚಿತ್ರಿಸಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.ಗಾಯಗೊಂಡ ವ್ಯಕ್ತಿ ಯಾರೆಂದು ಇನ್ನೂ ಗುರುತಿಸಲಾಗಿಲ್ಲ. ಆದರೆ ಆತನಿಗೆ ಚಿಕಿತ್ಸೆ ನೀಡುವ ಸಲುವಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದ ಪ್ರದೇಶದಲ್ಲಿ ಹೆಚ್ಚು ಜನರು ಸೇರಿದ್ದರು ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.ಈ ಕಾರ್ಯಕ್ರಮವನ್ನು ಡೆಲ್ ಮಾರ್ ರಾಸೆಟ್ರ್ಯಾಕ್ ನಲ್ಲಿ ಆಯೋಜಿಸಲಾಗಿತ್ತು. ಸ್ಥಳೀಯ ಕಾಲಮಾನ ಸಂಜೆ 7:30ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಇದೇ ವೇಳೆ ಗುಂಡು ಹಾರಿಸಿದ ವ್ಯಕ್ತಿಯೂ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಇಲಾಖೆ ದೃಢಪಡಿಸಿದೆ.

Tags

Related Articles