ಸುದ್ದಿಗಳು

ಹಾಲಿವುಡ್ ನಲ್ಲಿ ಸಲಿಂಗ ಕಾಮಿಗಳಿಗೂ , ಮಂಗಳಮುಖಿಯರಿಗೂ ಪ್ರಾತಿನಿಧ್ಯದ ಬಗ್ಗೆ ವಾದಿಸಿದ ‘ಕಿಟ್ ಹೇರಿಂಗ್ಟನ್’

'ಗೇಮ್ ಆಫ್ ಥ್ರೋನ್' ಖ್ಯಾತಿಯ ಕಿಟ್

ಪುರುಷತ್ವ ಮತ್ತು ಸಲಿಂಗಕಾಮದ ಸಮಾಜದ ಕಲ್ಪನೆಯಲ್ಲಿ ಸಮಸ್ಯೆ ಇದೆ ಎಂದು ‘ಗೇಮ್ ಆಫ್ ಥ್ರೋನ್’ ನ ನಟ ಕಿಟ್ ಹೇರಿಂಗ್ಟನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಿಟ್ ಹೇರಿಂಗ್ಟನ್

ಟೊರೊಂಟೊ ಫಿಲ್ಮ್ ಫೆಸ್ಟಿವಲ್ ನಲ್ಲಿ ವೆರೈಟಿ ಪತ್ರಿಕೆಯೊಂದಿಗೆ ಮಾತನಾಡಿದ ಕಿಟ್ ಹ್ಯಾರಿಂಗ್ಟನ್ ಅವರು, ಹಾಲಿವುಡ್ ನಲ್ಲಿ ಕ್ವೀರ್ ಪ್ರಾತಿನಿಧ್ಯ ಉದ್ದೇಶಿಸಿ ಪುರುಷತ್ವ ಮತ್ತು ಸಲಿಂಗಕಾಮದ ಕಲ್ಪನೆಯಲ್ಲಿ ದೊಡ್ಡ ಸಮಸ್ಯೆ ಇದೆ ಎಂದು ಹೇಳಿದ್ದಾರೆ.ಚಲನಚಿತ್ರೋದ್ಯಮದ ಒಂದು ಉದಾಹರಣೆಯನ್ನು ನೀಡುತ್ತಾ ಕಿಟ್, “ನಾವು ಮಾರ್ವೆಲ್ ಚಿತ್ರದಲ್ಲಿ ಯಾರನ್ನಾದರೂ ಹೊಂದಲು ಸಾಧ್ಯವಿಲ್ಲ. ಆದರೆ ಅವರು ನಿಜ ಜೀವನದಲ್ಲಿ ಸಲಿಂಗಕಾಮಿಯಾಗಿ ಮತ್ತು ಕೆಲವು ಬಾರಿ ಸೂಪರ್ ಹೀರೋ ಆಗಿಯೂ ಪಾತ್ರ ನಿರ್ವಹಿಸುತ್ತಾರೆ. ಹಾಗಾದರೆ, ಅವರಿಗೆ ಹಾಗೆ ಸಂಭವಿಸಲೇಬೇಕೇ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ದ ಡೆತ್ ಆಂಡ್ ಲೈಫ್ ಆಫ್ ಜಾನ್ ಎಫ್. ಡೋನೊವನ್’ ಅವರ ಚಲನಚಿತ್ರವನ್ನು ಪ್ರಚಾರ ಪಡಿಸುವ ಸಲುವಾಗಿ ಈ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಇವರ ಜೊತೆಗೆ ಸಹ-ನಟರಾದ ಎಮಿಲಿ ಹ್ಯಾಂಪ್ಶೈರ್, ಥಾಂಡೀ ನ್ಯೂಟನ್ ಮತ್ತು ನಿರ್ದೇಶಕ ಕ್ಸೇವಿಯರ್ ಡೋಲನ್ ಜೊತೆಗಿದ್ದರು.

Tags

Related Articles