ಸುದ್ದಿಗಳು

ವಲಸಿಗ ಕುಟುಂಬದ ಪ್ರತ್ಯೇಕತೆಯನ್ನು ಟೀಕಿಸಿದ ಜೂಲಿಯಾ ರಾಬರ್ಟ್ಸ್

ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್

ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಅವರು, ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ತನ್ನ ದೂರದರ್ಶನ ಸರಣಿಯ ‘ಹೋಮ್ ಕಮಿಂಗ್’ ಅನ್ನು ಪ್ರಚಾರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಕುಟುಂಬ ವಿಭಜನೆ ಎಂಬುದು ಅನಾರೋಗ್ಯಕರ ಸಂಗತಿಯಾಗಿದೆ ಎಂದು ಹೇಳಿದರು.

ಅಮೆರಿಕಾ ಮತ್ತು ಮೆಕ್ಸಿಕೋ ಗಡಿ ವಲಸೆಗಾರಿಕೆ ಬಿಕ್ಕಟ್ಟು ಕುರಿತು ಜೂಲಿಯಾ ಈ ರೀತಿಯ ಹೇಳಿಕೆ ನೀಡಿದ್ದಾರೆ.ಪ್ರತಿದಿನ ಈ ವಲಸೆ ಪ್ರಕಿಯೆ ನಡೆಯುತ್ತಿದೆ. ಇದರಿಂದ ಅನೇಕ ಭಯಾನಕ ಸಂಗತಿಗಳು ಸಂಭವಿಸುತ್ತಿದೆ. ಈ ಸಮಸ್ಯೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಪರಿಹಾರ ಮಾಡುವ ಅಗತ್ಯವಿದೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಬಯಸುವುದಾಗಿ ಹೇಳಿದರು.

“#ವಿ ಆರ್ ಫ್ಯಾಮಿಲಿ” ಅಭಿಯಾನ

ಬೇರ್ಪಟ್ಟಿರುವ ಕುಟುಂಬದ ಸದಸ್ಯರನ್ನು ಪುನಃ ಸೇರಿಸುವ ಪ್ರಯತ್ನದಲ್ಲಿ  ರಾಬರ್ಟ್ಸ್ ಅವರ ‘ಬಿ ಲವ್ ಅಪ್ಯಾರಲ್’ ಸಂಸ್ಥೆಯು ‘ಟುಗೆದರ್ ರೈಸಿಂಗ್’ ಎಂಬ ಎನ್ ಜಿಒ ಜೊತೆಗೆ ಕೈ ಜೋಡಿಸಿದೆ.

ಜೂಲಿಯಾ ಅವರು ಇತ್ತೀಚೆಗೆ “ವಿ ಆರ್ ಫ್ಯಾಮಿಲಿ” ಎಂಬ ಘೋಷಣೆ ಇರುವ ಟಿ-ಶರ್ಟ್ ಅನ್ನು ಧರಿಸಿದ್ದ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದರು. ಶೀರ್ಷಿಕೆಯಲ್ಲಿ ಅವರು “ಕುಟುಂಬಗಳ ಜೊತೆ ನಿಲ್ಲುವಂತೆ ಮಾಡೋಣ! ನಾನು ನನ್ನ ಸ್ನೇಹಿತರ ಕೆಲಸದಿಂದ ಸ್ಫೂರ್ತಿಗೊಂಡಿದ್ದೇನೆ. ನನ್ನ ಸ್ನೇಹಿತರು “ಧನಾತ್ಮಕ ಪ್ರಭಾವ”ದೊಂದಿಗೆ #ವಿ ಆರ್ ಫ್ಯಾಮಿಲಿ” ಅಭಿಯಾನ ನಡೆಸುತ್ತಿದ್ದಾರೆ”.“ಅಮೆರಿಕ ಗಡಿಯಲ್ಲಿ ಕುಟುಂಬಗಳನ್ನು ಪ್ರತ್ಯೇಕಿಸಿರುವ ಈ ಪರಿಸ್ಥಿತಿಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇದನ್ನು ಪರಿಹರಿಸುವ ಅಗತ್ಯವಿದೆ.

ಈಗಾಗಲೇ, 572 ಮಕ್ಕಳನ್ನು ಮತ್ತೆ ಅವರ ಕುಟುಂಬದ ಸದಸ್ಯರ ಜೊತೆಗೆ ಸೇರಿಸಲಾಗಿದೆ. ಆದರೆ ಸರಿಸುಮಾರು 400ಕ್ಕೂ ಹೆಚ್ಚು ಮಕ್ಕಳನ್ನು ಬೇರ್ಪಡಿಸಿ ಅವರ ಪೋಷಕರನ್ನು ಗಡೀಪಾರು ಮಾಡಲಾಗಿದೆ ಎಂದು ಅವರು ಹೇಳಿದರು.

2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಹಿಲರಿ ಕ್ಲಿಂಟನ್ ಅವರ ಪ್ರಬಲವಾದ ಬೆಂಬಲಿಗರಾಗಿದ್ದು, ಟ್ರಂಪ್ ಆಡಳಿತವನ್ನು ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ‘ಈಟ್ ಪ್ರೇ ಲವ್’ ಚಿತ್ರದಿಂದ ಖ್ಯಾತಿ ಪಡೆದಿರುವ ನಟಿ ಯಾವಾಗಲೂ ತನ್ನ ರಾಜಕೀಯ ದೃಷ್ಟಿಕೋನಗಳಿಂದ ತಮ್ಮನ್ನು ತೆರೆದುಕೊಂಡಿರುತ್ತಾರೆ.

ರಾಬರ್ಟ್ಸ್ ತನ್ನ ಮೊದಲ ದೂರದರ್ಶನದ ಸರಣಿ ‘ಹೋಮ್ ಕಮಿಂಗ್’ ಅನ್ನು ಪ್ರೋತ್ಸಾಹಿಸಲು ಶುಕ್ರವಾರ ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು.

Tags

Related Articles