ಸುದ್ದಿಗಳು

ಜಿಗಿ ಹಡಿದ್ ಈದ್-ಅಲ್-ಅದಾವನ್ನು ಝಯಾನ್ ಮಲಿಕ್ ಅವರೊಂದಿಗೆ ಆಚರಣೆ

ಸೂಪರ್ ಮಾಡೆಲ್ ಗಿಗಿ ಹಡಿದ್ ಮತ್ತು ಅವಳ ಮಾಜಿ ಗೆಳೆಯ ಝಯಾನ್ ಮಲಿಕ್ ಇದ್-ಅಲ್-ಅದಾವನ್ನು ಒಟ್ಟಾಗಿ ಆಚರಿಸಿದರು. ಗಿಗಿ ಹಡಿದ್ ಇನ್ಸ್ಟಾಗ್ರಾಮ್ ನಲ್ಲಿ ‘ಪಿಲ್ಲೊ ಟಾಕ್’ ನ ಗಾಯಕ ಮತ್ತು ಅವರ ಸಹೋದರಿ ವಾಲಿಹ ಮಲಿಕ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದು, “ಮನೆಯಲ್ಲಿ ಈದ್ ಆಚರಣೆ” ಎಂಬ ಶೀರ್ಷಿಕೆ ನೀಡಿದ್ದಾರೆ.

ಚಿತ್ರದಲ್ಲಿ, ಗಾಢವಾದ ನೀಲಿ ಟ್ರ್ಯಾಕ್ ಪ್ಯಾಂಟ್ ಧರಿಸಿರುವ ಮಲಿಕ್ ಅನ್ನು ಕಾಣಬಹುದು. ಆದರೆ ಅವರ ಸಹೋದರಿ ವಲಿಯಾಹನು ನೇರವಾದ ಫಿಟ್ ಪ್ಯಾಂಟ್ ಗಳೊಂದಿಗೆ ಅಲಂಕಾರಿಕ ಕುರ್ಚಿಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.ಗಿಗಿ ಮತ್ತು ಝಯಾನ್ ಅವರು ಎರಡು ವರ್ಷಗಳಿಂದ ಒಟ್ಟಿಗೆ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಜುಲೈನಲ್ಲಿ ದೂರವಾಗಿದ್ದರು ಎಂದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಮತ್ತೊಮ್ಮೆ ಒಟ್ಟಾಗಿ ಹಬ್ಬ ಆಚರಿಸಿರುವುದು ಎರಡನೇ ಬಾರಿಗೆ ಅವಕಾಶ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆಗೆ ಜುಲೈನಲ್ಲಿ ಝಿನ್ ಅವರು ಫೋಟೋವೊಂದನ್ನು ಹಂಚಿಕೊಂಡಿದ್ದರು. ಹಾಗಾಗಿ ಇಬ್ಬರ ಸಂಬಂಧ ಸರಿಯಾಗಿದೆ ಎಂದು ಊಹಿಸಲಾಗಿದೆ.

Tags

Related Articles