ಸುದ್ದಿಗಳು

ಗಾಡ್ ಫಾದರ್ ‘ಮೆಕಾಲೆ ಕುಲ್ಕಿನ್’ ಗೆ ಜನ್ಮ ದಿನದ ಶುಭಾಶಯ ಕೋರಿದ ‘ಪ್ಯಾರಿಸ್ ಜಾಕ್ಸನ್’…!

ನನ್ನ ಹೃದಯಕ್ಕೆ ಬಹಳ ಹತ್ತಿರವಾದವರು

38ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಫ್ಲ್ಯಾಷ್ ಬ್ಲಾಕ್  ಚಿತ್ರಗಳ ಸ್ಲೈಡ್ ಶೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.

ಬೆಂಗಳೂರು, ಆ.27: ನಟಿ ಮಾಡೆಲ್ ಪ್ಯಾರಿಸ್ ಜಾಕ್ಸನ್ ತಮ್ಮ ಅಜ್ಜ ಮತ್ತು ‘ಹೋಮ್ ಅಲೋನ್’ ಚಿತ್ರದ ನಟ ಮೆಕಾಲೆ ಕುಲ್ಕಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಂಭ್ರಮ ಆಚರಿಸಿದ್ದಾರೆ.

20 ವರ್ಷ ವಯಸ್ಸಿನ ನಟಿ ಜಾಕ್ಸನ್ ಅವರು ಮೆಕಾಲೆ ಕುಲ್ಕಿನ್ ಅವರ 38ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಫ್ಲ್ಯಾಷ್ ಬ್ಲಾಕ್  ಚಿತ್ರಗಳ ಸ್ಲೈಡ್ ಶೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ, ಕಳೆದ ವರ್ಷ ಹಾಕಿಸಿಕೊಂಡಿದ್ದ ಟ್ಯಾಟೂಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ನಾನು ನಿನ್ನನ್ನು ತುಂಬಾ  ಪ್ರೀತಿಸುತ್ತೇನೆ

“ಹ್ಯಾಪಿಯೆಸ್ಟ್ ಬರ್ತ್ ಡೇ ಮ್ಯಾಕ್ ಅಟ್ಯಾಕ್,” ಎಂದು ಜಾಕ್ಸನ್ ಶೀರ್ಷಿಕೆ ನೀಡಿದ್ದಾರೆ. “ನಾನು ನಿನ್ನನ್ನು ತುಂಬಾ  ಪ್ರೀತಿಸುತ್ತೇನೆ ಮತ್ತು ನನ್ನ ಹೃದಯಕ್ಕೆ ಬಹಳ ಹತ್ತಿರವಾದವರು ಎಂದೂ ಬರೆದಿದ್ದಾರೆ”.

ಪ್ಯಾರೀಸ್ ಜಾಕ್ಸನ್ ಮೈಕೆಲ್ ಜಾಕ್ಸನ್ ಅವರ ಪುತ್ರಿಯಾಗಿದ್ದು, ಕುಲ್ಕಿನ್ ಅವರಿಗೆ ಬಹಳ ಹತ್ತಿರವಾಗಿದ್ದಾರೆ. ಮೈಕೆಲ್ ಜಾಕ್ಸನ್ 2009ರಲ್ಲಿ ಮರಣ ಹೊಂದಿದರು. ಮೈಕಲ್ ಸಂಗೀತ ಲೋಕಕ್ಕೆ ಬಹಳ ಚಿಕ್ಕ ವಯಸ್ಸಿನಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು.

Tags

Related Articles