ಸುದ್ದಿಗಳು

ಡೆನಿಸ್ ರಿಚರ್ಡ್ಸ್ ಅನ್ನು ವಿವಾಹವಾದ ಆರನ್ ಫಿಪರ್ಸ್

ಹಾಲಿವುಡ್ ನಟ ಡೆನಿಸ್ ರಿಚರ್ಡ್ಸ್ ಮಾಲಿಬುನಲ್ಲಿನ ಕಡಲತೀರದಲ್ಲಿ ದೀರ್ಘಕಾಲದ ಗೆಳತಿ ಆರನ್ ಫಿಪರ್ಸ್ ಜೊತೆಗೆ ವಿವಾಹವಾದರು.

ಇ!ಆನ್ ಲೈನ್ ನ್ಯೂಸ್  ಗೆ ವಿಚಾರ ತಿಳಿಸಿದ ಪ್ರತ್ಯಕ್ಷದರ್ಶಿ

ಮದುವೆಯಾದ ವಿಚಾರವನ್ನು ಒಬ್ಬ ಪ್ರತ್ಯಕ್ಷದರ್ಶಿ ಇ! ಆನ್ಲೈನ್ ನ್ಯೂಸ್ ಗೆ ತಿಳಿಸಿರುವುದಾಗಿ ವರದಿ ಮಾಡಿದೆ. ವಿವಾಹ ಸಮಾರಂಭವನ್ನು ‘ಬೆವರ್ಲಿ ಹಿಲ್ಸ್ ನ ರಿಯಲ್ ಹೌಸ್ ವೈವ್ಸ್’ ಸರಣಿಯ ಮುಂಬರುವ ಸೀನನ್ ಗಾಗಿ ಚಿತ್ರೀಕರಿಸಲಾಯಿತು. ರಿಚರ್ಡ್ಸ್ ಅವರು ಇತ್ತೀಚೆಗೆ ಈ ಸರಣಿಗೆ ಸೇರಿಕೊಂಡಿದ್ದರು.

ಡಿಸೈನರ್ ಮಾರ್ಕ್ ಜುನಿನೋ ಅವರು ತಮ್ಮ ಮದುವೆಯ ಉಡುಪಿನಲ್ಲಿ ನಿಂತಿದ್ದಾಗ ರಿಚರ್ಡ್ಸ್ ಆನಂದ ಪರವಶರಾಗಿ ನಿಂತಿರುವಂತೆ ಕಾಣುವ ಒಂದು ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಅವರು ವಿಶೇಷ ಉಡುಗೆಯನ್ನು ವಿನ್ಯಾಸ ಮಾಡಲು ಕೇವಲ ಒಂದು ದಿನವನ್ನು ತೆಗೆದುಕೊಂಡಿದ್ದಾರೆ. ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.’“ಅವರಿಬ್ಬರು ಈ ಮೊದಲು ಬಹಳ ಸಂತೋಷದಿಂದ ಇದ್ದರು. ಇದೀಗ ವಿವಾಹವಾಗುವ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ವಿವಾಹಿತ ಜೀವನವನ್ನು ಪ್ರಾರಂಭಿಸುತ್ತಿರುವುದಾಗಿ ಪೀಪಲ್ ನಿಯತಕಾಲಿಕೆಗೆ ತಿಳಿಸಿದ್ದಾರೆ.

ಫಿಪರ್ಸ್ ಅವರು ನಟಿ ನಿಕೋಲೆಟ್ ಶೆರಿಡರ್ ನನ್ನು ಮದುವೆಯಾಗಿ ಆರು ತಿಂಗಳ ಕಾಲ ಜೊತೆಗಿದ್ದರು. ಕಳೆದ ತಿಂಗಳು ಅವರು ವಿಚ್ಛೇದನವನ್ನು ಪಡೆದುಕೊಂಡಿದ್ದರು.

Tags