ಸುದ್ದಿಗಳು

8ನೇ ಸೀಸನ್ ನ ‘ಗೇಮ್ ಆಫ್ ಥ್ರೋನ್’ ಫಸ್ಟ್ ಲುಕ್ ಬಿಡುಗಡೆ

ಎಚ್ ಬಿಒನ ಜನಪ್ರಿಯ ಟಿವಿ ಸರಣಿ

ಬೆಂಗಳೂರು, ಆ.27: ಪ್ರತಿ ಸೋಮವಾರ ಪ್ರಸಾರವಾಗುತ್ತಿದ್ದ ‘ಗೇಮ್ ಆಫ್ ಥ್ರೋನ್’ ಪ್ರದರ್ಶನಕ್ಕೆ ಅಭಿಮಾನಿಗಳು ವಿದಾಯ ಹೇಳುವ ಸಮಯ ಬಂದಿದೆ.

ಎಂಟರ್ ಟೈನ್ಮೆಂಟ್ ವೀಕ್ಲಿ ವರದಿ

ಕೇಬಲ್ ನೆಟ್ವರ್ಕ್ ಎಚ್ ಬಿಒನ ಜನಪ್ರಿಯ ಟಿವಿ ಸರಣಿಯು ನಿರೀಕ್ಷಿತ ಅಂತಿಮ ಸೀಸನ್ ನ  ಮೊದಲ ನೋಟವನ್ನು ಬಿಡುಗಡೆ ಮಾಡಿದೆ. ಒಂದು ನಿಮಿಷ ಮೂವತ್ತು ಸೆಕೆಂಡಿನ ಟ್ರೈಲರ್ ಹಿಂದಿನ ಋತುಗಳಲ್ಲಿನ ಕೆಲ ದೃಶ್ಯಗಳು ಮತ್ತು ಮುಂಬರುವ ಎಂಟನೇ ಸೀಸನ್ ನ   ‘ಗೇಮ್ ಆಫ್ ಥ್ರೋನ್’ ನ ಕೆಲ ದೃಶ್ಯಗಳನ್ನು ಒಳಗೊಂಡಿದೆ.

‘ಶಾರ್ಪ್ ಆಬ್ಜೆಕ್ಟ್ಸ್’ ನ ಅಂತಿಮ ಸರಣಿಯ ಪ್ರೊಮೊವನ್ನು ಅನಾವರಣಗೊಳಿಸಲಾಗಿದೆ ಎಂದು ಎಂಟರ್ ಟೈನ್ಮೆಂಟ್ ವೀಕ್ಲಿ ವರದಿ ಮಾಡಿದೆ. ಅದೇ ಪ್ರೊಮೊದಲ್ಲಿ ‘ಬಿಗ್ ಲಿಟಲ್ ಲೈಸ್ ಸೀಸನ್ 2’ ರ ಜೊತೆಗೆ ಮೆರಿಲ್ ಸ್ಟ್ರೀಪ್ ನ ಟ್ರೂ ಡಿಟೆಕ್ವಿವ್ ನ ಸೀಸನ್ 3ರ ದೃಶ್ಯಗಳೂ ಸೇರಿವೆ. ‘ಗೇಮ್ ಆಫ್ ಥ್ರೋನ್’ ನ ಅಂತಿಮ ಸೀಸನ್ ನ  ಸರಣಿಯು 2019ರಲ್ಲಿ ಪ್ರದರ್ಶಿಸಲಾಗುವುದು.

Tags