ಸುದ್ದಿಗಳು

ಪತ್ನಿಯ ಗರ್ಭಪಾತದ ನಂತರ ಆಘಾತಕ್ಕೆ ಒಳಗಾದ ‘ಬ್ಯಾಕ್ ಸ್ಟ್ರೀಟ್ ಬಾಯ್ಸ್’ ನ ನಿಕ್ ಕಾರ್ಟರ್

ಅತ್ಯಂತ ಕಠಿಣವಾದ ಪರಿಸ್ಥಿತಿ ಎದುರಿಸುತ್ತಿರುವ ನಿಕ್ ದಂಪತಿ

ಬ್ಯಾಕ್ ಸ್ಟ್ರೀಟ್ ಬಾಯ್ಸ್ ಬ್ಯಾಂಡ್ ನ ಸದಸ್ಯ ನಿಕ್ ಕಾರ್ಟರ್ ಅವರ ಪತ್ನಿ ಲಾರೆನ್ ಕಿಟ್ ತಮ್ಮ ಎರಡನೆಯ ಮಗುವಿಗೆ ಗರ್ಭಿಣಿಯಾಗಿದ್ದರು. ಆದರೆ ದುರದೃಷ್ಟವಶಾತ್ ಗರ್ಭಪಾತಕ್ಕೆ ಒಳಗಾಗಿದ್ದಾರೆ.

ಟ್ವಿಟರ್ ಖಾತೆಯಲ್ಲಿ ತನ್ನ ನೋವನ್ನು ಹಂಚಿಕೊಂಡ ನಿಕ್

38 ವರ್ಷ ವಯಸ್ಸಿನ ಲಾರೆನ್ ಕಿಟ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ಈ ಸಮಯದಲ್ಲಿ ದೇವರು ನಮಗೆ ಸಮಾಧಾನ ಕೊಟ್ಟಿದ್ದಾನೆ” ಎಂದು ಕಾರ್ಟರ್ ಬರೆದಿದ್ದಾರೆ. ಅಲ್ಲದೇ “ನಾನು 3 ತಿಂಗಳ ನಂತರ ಆಕೆಯನ್ನು ಭೇಟಿಯಾಗಲು ಎದುರು ನೋಡುತ್ತಿದ್ದೆ. ಈ ದುರದೃಷ್ಟಕರ ಸಂಗತಿಯಿಂದಾಗಿ ನನ್ನ ಹೃದಯ ಒಡೆದುಹೋಗಿದೆ” ಎಂದು ದುಃಖಿತರಾಗಿದ್ದಾರೆ.ಪ್ರದರ್ಶನವನ್ನು ರದ್ದುಗೊಳಿಸಿದ ನಿಕ್

ಪ್ರಸ್ತುತ ಪ್ರವಾಸದಲ್ಲಿದ್ದ ಕಾರ್ಟರ್ ಅವರು ಈ ಸುದ್ದಿ ತಿಳಿದ ನಂತರ ಲಿಮಾದಲ್ಲಿ ಬಾರ್ನ್ಕೊ ಅರೆನಾದಲ್ಲಿ ತಮ್ಮ ಏಕವ್ಯಕ್ತಿ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. “ಇಂದು ನಾನು ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಲಿಮಾ” ಎಂದು ಅವರು ಟ್ವೀಟ್ ಮಾಡಿದ್ದಾರೆ. “ಇದು ಅತ್ಯಂತ ಕಠಿಣವಾದ ಪರಿಸ್ಥಿತಿಯಾಗಿದೆ. ಆದರೆ ಲಿಮಾದಲ್ಲಿ ನನ್ನ ಅಭಿಮಾನಿಗಳ ಪ್ರೀತಿಗಾಗಿ ನಾನು  ವೇದಿಕೆ ಮೇಲೆ ಬರುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಎಪ್ರಿಲ್ 2014ರಲ್ಲಿ ಕಾರ್ಟರ್ ಮತ್ತು ಕಿಟ್ ಅವರು ವಿವಾಹವಾದರು. ಈ ದಂಪತಿಗೆ ಎರಡು ವರ್ಷದ ಮಗ ಓಡಿನ್ ರೀನ್ ಇದ್ದಾನೆ.

Tags