ಸುದ್ದಿಗಳು

ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 12.1 ಮಿಲಿಯನ್ ಡಾಲರ್ ಗಳಿಸಿದ ‘ದಿ ನನ್’

ಹಾಲಿವುಡ್ ನ ಭಯಾನಕ ‘ಕಾಂಜರಿಂಗ್’ ಸರಣಿಯಲ್ಲಿನ  ಐದನೇ ಕಂತಿನ ಚಿತ್ರ ‘ದಿ ನನ್’  ಬಿಡುಗಡೆಯಾಗಿ ಎರಡು ದಿನಗಳೊಳಗೆ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 12.1 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ.

ವೆರೈಟಿ ಪತ್ರಿಕೆಯ ವರದಿ

41 ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಈ ಆದಾಯ ಗಳಿಸಿದೆ ಎಂದು ವೆರೈಟಿ ಪತ್ರಿಕೆ ವರದಿ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಕೊಲಂಬಿಯಾ, ಬ್ರೆಜಿಲ್, ದೇಶಗಳನ್ನು ಒಳಗೊಂಡಂತೆ 30 ದೇಶಗಳ ಮಾರುಕಟ್ಟೆಗಳಲ್ಲಿನ ಆದಾಯವೂ ಇದರಲ್ಲಿ ಸೇರಿದೆ.ಈ ಚಿತ್ರ ಮೊದಲ ಎರಡು ದಿನಗಳಲ್ಲಿ ಇಂಡೋನೇಷ್ಯಾದಲ್ಲಿ 2.3 ದಶಲಕ್ಷ ಡಾಲರ್ ಮೊತ್ತವನ್ನು ಗಳಿಸಿದರೆ, ಬ್ರೆಜಿಲ್ ನಲ್ಲಿ 986,000 ಡಾಲರ್ ಮೊತ್ತವನ್ನು ಗಳಿಸಿದೆ. ದಕ್ಷಿಣ ಅಮೆರಿಕಾದಲ್ಲಿ ಈ ಚಿತ್ರ ಎರಡನೇ ದೊಡ್ಡ ಭಯಾನಕ ಚಲನಚಿತ್ರ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ.ಇಂಗ್ಲೆಂಡ್ ನಲ್ಲಿ 516 ಪರದೆಗಳಲ್ಲಿ ಈ ಚಿತ್ರ ಪ್ರದರ್ಶನಗೊಂಡಿದ್ದು, 855,000 ಡಾಲರ್ ಮೊತ್ತವನ್ನು ಗಳಿಸಿದೆ. ಇದು ಒಟ್ಟಾರೆ ಆದಾಯದ ಶೇ. 54ರಷ್ಟು ಪಾಲನ್ನು ಹೊಂದಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿದ್ದ “ದಿ ಕಂಜ್ಯೂರಿಂಗ್ 2” ಚಿತ್ರವು ಮೊದಲ ಪ್ರದರ್ಶನದಲ್ಲೇ ದ್ವಿಗುಣ ಆದಾಯವನ್ನು ಗಳಿಸಿತ್ತು.

ಚಿತ್ರಕಥೆ

ಸ್ಪೇನ್, ಇಂಗ್ಲೆಂಡ್ ಮತ್ತು ಮೆಕ್ಸಿಕೋ ಸೇರಿದಂತೆ ಶುಕ್ರವಾರ ಹೆಚ್ಚುವರಿಯಾಗಿ 19 ದೇಶಗಳಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು. ಈ ಚಲನಚಿತ್ರವು 1952ರಲ್ಲಿ ರೊಮೇನಿಯಾದಲ್ಲಿ ಕ್ಯಾಥೋಲಿಕ್ ಪಾದ್ರಿಯೊಬ್ಬರು ತಮ್ಮ ಹೊಸ ಶಿಷ್ಯರನ್ನು ವ್ಯಾಟಿಕನ್ ನಗರಕ್ಕೆ ಕಳುಹಿಸುತ್ತಾನೆ. ಅವರಲ್ಲಿ ಒಬ್ಬ ನನ್ ಆತ್ಮಹತ್ಯೆಗೆ ಶರಣಾಗುತ್ತಾಳೆ. ಈ ಆತ್ಯಹತ್ಯೆಯ ಪ್ರಕರಣವನ್ನು ತನಿಖೆ ನಡೆಸುವ ಕಥೆಯನ್ನು ಒಳಗೊಂಡಿದೆ.

Tags