ಸುದ್ದಿಗಳು

‘ಸ್ಟಾರ್ ವಾರ್ಸ್: ಎಪಿಸೋಡ್ IX’ ನಲ್ಲಿ ನಟಿಸಲಿರುವ ಡೊಮಿನಿಕ್ ಮೊನಾಘನ್

ಸ್ಟಾರ್ ವಾರ್ಸ್ ಚಲನಚಿತ್ರದಲ್ಲಿ ನಟಿಸಬೇಕೆಂಬ ಅವರ ಬಲು ದಿನಗಳ ಕನಸು ನನಸಾಗುವ ವೇಳೆ ಇದು..!

ನಟ ಡೊಮಿನಿಕ್ ಮೊನಾಘನ್ ಅವರು “ಸ್ಟಾರ್ ವಾರ್ಸ್: ಎಪಿಸೋಡ್ IX” ನಲ್ಲಿ ನಟಿಸಲು ಸ್ಟಾರ್ ವಾರ್ ತಂಡದ ಪಾತ್ರ ವರ್ಗದಲ್ಲಿ ಸೇರಿಕೊಂಡಿದ್ದಾರೆ.

41 ವರ್ಷದ ನಟ, ಪೀಟರ್ ಜಾಕ್ಸನ್ ನ ಮಹಾಕಾವ್ಯ ಚಿತ್ರ “ದಿ ಲಾರ್ಡ್ ಆಫ್ ದಿ ರಿಂಗ್ಸ್” ಟ್ರೈಲಾಜಿಯಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಸ್ಟಾರ್ ವಾರ್ಸ್ ಚಲನಚಿತ್ರದಲ್ಲಿ ನಟಿಸಬೇಕೆಂಬ ಅವರ ಕನಸಿನ ಬಗ್ಗೆ ಹಾಲಿವುಡ್ ರಿಪೋರ್ಟರ್ ಪತ್ರಿಕೆಗೆ ನೀಡಿದ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.ಈ ಚಲನಚಿತ್ರವು “ಲಾಸ್ಟ್” ಸೃಷ್ಟಿಕರ್ತ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಜೆ.ಜೆ. ಅಬ್ರಾಮ್ಸ್ ಅವರು ಎಪಿಸೋಡ್ IX ಗೆ ಸಹ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಆದರೆ ಅವರ ಪಾತ್ರದ ಕುರಿತು ಸ್ಟುಡಿಯೋ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಡೈಸಿ ರಿಡ್ಲೆ, ಜಾನ್ ಬೋಯೆಗ, ಆಸ್ಕರ್ ಐಸಾಕ್ ಮತ್ತು ಆಡಮ್ ಡ್ರೈವರ್ ಅವರುಗಳ ಬಗ್ಗೆ ತುಂಬಾ ನಿರೀಕ್ಷೆಯಿದೆ.

ಅಬ್ರಾಮ್ಸ್ ಅವರು ನಿರ್ದೇಶಕರಾಗಿ ಹಿಂದಿರುಗುತ್ತಿದ್ದಾರೆ. ಅವರು “ಸ್ಟಾರ್ ವಾರ್ಸ್: ದಿ ಫೋರ್ಸ್ ಅವೇಕನ್ಸ್” (2015) ಗೆ ಮಾರ್ಗದರ್ಶನ ನೀಡಿದ್ದರು. ಕಾಲಿನ್ ಟ್ರೆವೊರೋ ನಂತರ ಸೃಜನಾತ್ಮಕ ಭಿನ್ನತೆಗಳಿಂದ ಹೊರಬಂದ ನಂತರ ಇತ್ತೀಚಿನ ಕಂತಿನ ನಿರ್ದೇಶನಕ್ಕೆ ಮರಳಿ ಬರಬೇಕೆಂದು ಕೇಳಲಾಗಿತ್ತು.

Tags

Related Articles