ಸುದ್ದಿಗಳು

ಲೈಂಗಿಕ ಕಿರುಕುಳ ಆರೋಪಗಳನ್ನು ನಿರಾಕರಿಸಿದ ಆಸಿಯಾ ಅರ್ಜೆಂಟೊ

ಹಾಲಿವುಡ್ ನಟಿ ಆಸಿಯಾ ಅರ್ಜೆಂಟೊ ಅವರು ಯುವ ನಟ ಜಿಮ್ಮಿ ಬೆನೆಟ್ ಅವರ ವಿರುದ್ಧ ಎಸಗಿದ ಲೈಂಗಿಕ ಕಿರುಕುಳ ಆರೋಪಗಳನ್ನು ನಿರಾಕರಿಸಿದ್ದಾರೆ. ಮಂಗಳವಾರ, ‘XXX’ ಚಿತ್ರದ ನಟಿ ಲೈಂಗಿಕ ಕಿರುಕುಳದ ಸುದ್ದಿ ಕೇಳಿ ಆಘಾತವಾಯಿತು. ಅಲ್ಲದೇ, ಇಂತಹ ಸುಳ್ಳು ಸುದ್ದಿಯನ್ನು ಹರಡಿರುವುದು ಸಾಕಷ್ಟು ಹಾನಿಯುಂಟು ಮಾಡಿದೆ ಎಂದು ಹೇಳಿದ್ದಾರೆ ಎಂಬುದಾಗಿ ಡೆಡ್ ಲೈನ್ ಪತ್ರಿಕೆ ವರದಿ ಮಾಡಿದೆ.

ದಿವಂಗತ ಗೆಳೆಯ, ಪ್ರಸಿದ್ಧ ಬಾಣಸಿಗ ಆಂಥೋನಿ ಬೌರ್ಡೆನ್ ಅವರು ಆಸಿಯಾ ಅರ್ಜೆಂಟೊಗೆ ಬೆನೆಟ್ ಯಾವುದೇ ರೀತಿಯ ಕಿರುಕುಳ ನೀಡುವುದನ್ನು ತಡೆಯಲು ಹೀಗೆ ಮಾಡಿದ್ದಿರಬಹುದು ಎಂದು ನಟಿ ದೃಢಪಡಿಸಿದ್ದಾರೆ.n ಬೌರ್ಡೆನ್ ಯುವ ನಟನನ್ನು ಒಂದು ವೇಳೆ ‘ಅಪಾಯಕಾರಿ’ ಎಂದು ಪರಿಗಣಿಸಿದ್ದೇ ಆಗಿದ್ದಲ್ಲಿ ‘ಡ್ಯಾಡಿ ಡೇ ಕೇರ್’ ಖ್ಯಾತಿಯ ಬೆನೆಟ್ ಅವರು ನಕಾರಾತ್ಮಕ ಪ್ರಚಾರದ ಬಗ್ಗೆ ಚಿಂತಿತರಾಗಿರುತ್ತಿದ್ದರು.ಅಷ್ಟೇ ಅಲ್ಲದೇ, ಹಾಲಿವುಡ್ ನಿರ್ದೇಶಕ ಹಾರ್ವೆ ವೈನ್ಸ್ಟೈನ್ ನ ಲೈಂಗಿಕ ದುರುಪಯೋಗದ ವಿರುದ್ಧ ತನ್ನ ಧ್ವನಿ ಎತ್ತಿದ ಮೊದಲ ಮಹಿಳೆಯಾಗಿದ್ದಾಳೆ. ತನ್ನ ಸ್ನೇಹಿತನಾದ ಬೆನ್ನೆಟ್ ಅವರು ತೀವ್ರ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದು, ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜೆಂಟೊ ಮತ್ತು ಬೆನೆಟ್ ವಕೀಲರ ನಡುವೆ ವಿನಿಮಯ ಮಾಡಲಾಗಿತ್ತು.

ಈ ದಾಖಲೆಗಳು ಮೇ 9, 2013ರ ಛಾಯಾಚಿತ್ರವಾಗಿದ್ದು, ಇದು ಆಸಿಯಾ ಅರ್ಜೆಂಟೊ ಮತ್ತು ಬೆನೆಟ್ ಒಟ್ಟಿಗೆ ಹಾಸಿಗೆ ಮೇಲಿರುವುದನ್ನು ತೋರಿಸುತ್ತದೆ. ಅರ್ಗೋಂಟೊ ಅವರು ಆರೋಪಿಗೆ 3,80,000 ಡಾಲರ್ ಮೊತ್ತವನ್ನು ಪಾವತಿಸುವಂತೆ ಕೇಳಿ ಪ್ರಕರಣವನ್ನು ದಾಖಲಿಸಿದ್ದರು.

Tags