ಸುದ್ದಿಗಳು

‘ಡೆಡ್ ವುಡ್’ ಚಲನಚಿತ್ರವು ‘ಎಚ್ ಬಿಒ’ ನ ಅನುಮೋದನೆ ಪಡೆಯುವುದು ಖಚಿತ…!

ಅಮೆರಿಕಾದ ಪಾಶ್ಚಾತ್ಯ ಟಿವಿ ಸರಣಿ ಡೆಡ್ ವುಡ್

ಅಮೆರಿಕಾದ ಪಾಶ್ಚಾತ್ಯ ಟಿವಿ ಸರಣಿ ‘ಡೆಡ್ ವುಡ್’, 12 ವರ್ಷಗಳ ನಂತರ ಬೆಳ್ಳಿ ಪರದೆಯ ಮೇಲೆ ಮತ್ತೆ ಪ್ರದರ್ಶನ ಕಾಣುವ ಸಮಯ ಬಂದಿದೆ.

ಈ ಚಲನಚಿತ್ರದ ಬಗ್ಗೆ ಎಚ್ ಬಿಒ ಮುಖ್ಯಸ್ಥ ಕೇಸಿ ಬ್ಲಾಯ್ಸ್ ಅವರು ಸ್ವತಃ ಘೋಷಿಸಿದ್ದಾರೆ. ಈ ವರ್ಷದ ಅಕ್ಟೋಬರ್ ನಲ್ಲಿ ಚಲನಚಿತ್ರದ ನಿರ್ಮಾಣವು ಪ್ರಾರಂಭವಾಗಲಿದೆ ಎಂದೂ ಕೇಳಿದ್ದಾರೆ. ಅಲ್ಲದೇ 2019ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ ಎಂದು ದಿ ಹಾಲಿವುಡ್ ರಿಪೋರ್ಟರ್ ಪತ್ರಿಕೆ ವರದಿ ಮಾಡಿದೆ..

ಮೂರು ಋತುಗಳಲ್ಲಿ ಪ್ರಸಾರವಾದ ಡೆಡ್ ವುಡ್

ಡೆಡ್ ವುಡ್ ನ ಮೂಲ ಟಿವಿ ಸರಣಿಯ ಸೃಷ್ಟಿಕರ್ತ ಡೇವಿಡ್ ಮಿಲ್ಚ್ ಅವರು ಈ ಚಿತ್ರಕ್ಕಾಗಿ ಚಿತ್ರಕಥೆಯನ್ನು ಬರೆಯುತ್ತಿದ್ದಾರೆ.

‘ಡೆಡ್ ವುಡ್’ ಸರಣಿಯು ಮೂರು ಋತುಗಳಲ್ಲಿ ಪ್ರಸಾರವಾಯಿತು. ಮತ್ತು ಎಂಟು ಎಮ್ಮಿ ಅವಾರ್ಡ್ಸ್ ಅನ್ನು ಪಡೆದುಕೊಂಡಿತ್ತು. ಅಲ್ಲದೇ, ದೊಡ್ಡ ಅಭಿಮಾನಿಗಳನ್ನು ಪಡೆದುಕೊಂಡಿತ್ತು.

ಕಲಾವಿದರು

ಇಯಾನ್ ಮ್ಯಾಕ್ ಶೇನ್, ತಿಮೋತಿ ಒಲಿಫಂಟ್, ಮೊಲ್ಲಿ ಪಾರ್ಕರ್, ಕಿಮ್ ಡಿಕನ್ಸ್, ಜಾನ್ ಹಾಕ್ಸ್, ರಾಬಿನ್ ವೀಗರ್ಟ್, ಡಬ್ಲು. ಎರ್ಲ್ ಬ್ರೌನ್, ಡಾಯ್ಟನ್ ಕ್ಯಾಲೀ, ಪೌಲಾ ಮ್ಯಾಲ್ಕಂಸನ್ ಮತ್ತು ಜಿಮ್ ಬೀವರ್ ಅವರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಡೆಡ್ ವುಡ್ ಸರಣಿಯು ಕಾನೂನುಬಾಹಿರ ಶಿಬಿರವನ್ನು ಪ್ರದರ್ಶಿಸಿತ್ತು. ಇದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದೊಂದಿಗೆ ವಿಲೀನಗೊಳ್ಳುವ ಮೊದಲು ನಿಧಾನವಾಗಿ ಪಟ್ಟಣದೊಳಗೆ ಹೊರಹೊಮ್ಮಿತು.

Tags