ಸುದ್ದಿಗಳು

ಹಾಲಿವುಡ್ ನಲ್ಲೂ ಸೈ ಎನಿಸಿಕೊಂಡ ಈ ನಟಿಗೆ ಸೋಲಿನ ಭಯವಂತೆ….

ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ನಲ್ಲೂ ತಾನು ಫರ್ಫೆಕ್ಟ್ ಎಂಬುದನ್ನು ಸಾಬೀತು ಪಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಹಾಲಿವುಡ್ ನಲ್ಲಿ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ 36ರ ಈ ಬೆಡಗಿಗೆ ಇಂದಿಗೂ ಸೋಲಿನ ಭಯ ವಿಪರೀತವಾಗಿ ಕಾಡುತ್ತಿದೆಯಂತೆ.

ಒಂಟಿಯಾಗಿರಲು ಇಷ್ಟಪಡುತ್ತೇನೆ

ನನಗೆ ಸೋಲು ಎಂದರೆ ಇಷ್ಟವಿಲ್ಲ. ಐಹೇಟ್ ಫೇಲ್ಯೂರ್ ಎಂದಿರುವ ಪ್ರಿಯಾಂಕ, ನನಗೆ ಸೋಲಿನ ಭಯ ಕಾಡುತ್ತಲೇ ಇರುತ್ತದೆ. ನಾನು ಸೋತಾಗ ಅಥವಾ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾದಾಗ ನನಗೆ ವಿಪರೀತವಾಗಿ ಭಯವಾಗುತ್ತದೆ. ಬೇಸರವಾಗುತ್ತದೆ. ಈ ಸಂದರ್ಭದಲ್ಲಿ ನನ್ನ ಅಮ್ಮ ನನ್ನನ್ನುಏಕಾಂಗಿಯಾಗಿ ಬಿಡುವಂತೆ ಮನೆಯವರಿಗೆ ತಿಳಿಸುತ್ತಾರೆ. ಇದಕ್ಕೆ ಕಾರಣ ನನಗೆ ಎಲ್ಲರೆದುರು ನರ್ವಸ್ ಆಗಿ ಇರಲು ಇಷ್ಟವಿಲ್ಲ ಎಲ್ಲರನ್ನು ಫೇಸ್ ಮಾಡಲು ಸಾಧ್ಯವಾಗುವುದಿಲ್ಲ ಇದೇ ಕಾರಣಕ್ಕೆ ಒಂಟಿಯಾಗಿರಲು ಇಷ್ಟಪಡುತ್ತೇನೆ ಎಂದಿದ್ದಾರೆ ಪ್ರಿಯಾಂಕ ಚೋಪ್ರಾ.ನನಗೆ ನಾನೇ ಆತ್ಮವಿಶ್ವಾಸದ ಪಾಠಹೇಳಿಕೊಂಡೆ

ನಾನು ಸೌಂದರ್ಯ ಸ್ಪರ್ದೆಯಲ್ಲಿ ವಿಶ್ವಸುಂದರಿ ಪಟ್ಟ ಗಿಟ್ಟಿಸಿಕೊಂಡ ಬಳಿಕ ಸಿನಿಮಾ ಇಂಡಸ್ಟ್ರೀಯನ್ನು ಪ್ರವೇಶಿಸಿದೆ. ಇದು ನನಗೆ ಕೆಲಸವನ್ನು ನೀಡಬಹುದು ಎಂಬುದು ನನ್ನ ಯೋಚನೆಯಾಗಿತ್ತು. ಆದರೆ ಬಳಿಕ ನನಗೆ ನಾನೇ , ಕಾನ್ಫಿಡೆನ್ಸ್ ಬಗ್ಗೆ ಪಾಠ ಮಾಡಿಕೊಂಡೆ. ಇಂಡಸ್ಟ್ರೀಯಲ್ಲಿ ನಾಲ್ಕು ವರ್ಷಗಳನ್ನು ಕಳೆದ ಬಳಿಕ ನನಗೆ ತಿಳಿದಿದ್ದು, ನನ್ನೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರೆ ನಾನು ಯಾರೆದುರಿಗೂ ಮಂಡಿಯೂರಬೇಕಾಗಿಲ್ಲ ಎಂಬುದು. ಹೀಗಾಗಿ ನನಗೆ ನಾನೇ ಆತ್ಮವಿಶ್ವಾಸದ ಪಾಠಹೇಳಿಕೊಂಡೆ, ನನ್ನಲ್ಲಿ ಕಾನ್ಪಿಡೆನ್ಸ್ ಹೆಚ್ಚಿಸಿಕೊಂಡೆ. ಇದು ನನ್ನ ಸಿನಿ ಜೀವನದ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಮಹಿಳೆಯರಿಗೆ ಸಿಗುವ ಅವಕಾಶಗಳೇ ಕಡಿಮೆ. ಈ ಕಡಿಮೆ ಅವಕಾಶಗಳಲ್ಲೇ ನಮ್ಮ ಪ್ರತಿಭೆಯನ್ನುನಾವು ತೋರಿಸಬೇಕಿದೆ ಎಂದಿರುವ ಪ್ರಿಯಾಂಕಾಗೆ ಇಂದಿಗೂ ಚಿತ್ರದ ಸೆಟ್ ಗೆ ಹೋಗುವಾಗ ಭಯವಾಗುತ್ತದೆಯಂತೆ. ಆದರೆ ಈ ನರ್ವಸ್ ನೆಸ್ ನನಗೆ ನಿಜಕ್ಕೂ ಇಷ್ಟ. ಯಾಕೆಂದರೆ ಈ ನರ್ವಸ್ ಎಂಬುದು ಇಲ್ಲದಿದ್ದರೆ ನನಗೆ ಉತ್ತಮ ಫರ್ಫಾರ್ಮೆನ್ಸ್ ನೀಡಲು ಸಾಧ್ಯವಾಗುವುದಿಲ್ಲ. ಇದೇ ನನ್ನ ಶಕ್ತಿ ಎಂದಿದ್ದಾರೆ ಪ್ರಿಯಾಂಕ ಚೋಪ್ರಾ.

Tags

Related Articles