ಸುದ್ದಿಗಳು

ದೇಸಾಯಿಯವರ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ

‘ರೇ’ ಚಿತ್ರದ ನಂತರ ಮತ್ತೊಮ್ಮೆ ಸುನೀಲ್ ಕುಮಾರ್ ದೇಸಾಯಿಯವರ ಚಿತ್ರದಲ್ಲಿ ಹರ್ಷಿಕಾ

‘ಚಿಟ್ಟೆ’ ಚಿತ್ರದ ನಂತರ ಹರ್ಷಿಕಾ ಪೂಣಚ್ಚ ಇದೀಗ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ದೇಸಾಯಿಯವರ ‘ರೇ’ ಚಿತ್ರದಲ್ಲಿ ನಟಿಸಿದ್ದರು.

ದೇಸಾಯಿಯವರ ಮುಂದಿನ ಚಿತ್ರ ‘ಉದ್ಘರ್ಷ’

ಇದೀಗ ದೇಸಾಯಿಯವರು ‘ಉದ್ಘರ್ಷ’ ಎಂಬ ಸಸ್ಪೆನ್ಸ್ ಚಿತ್ರ ಮಾಡುತ್ತಿದ್ದು, ಹರ್ಷಿಕಾ ಇಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಚಿಟ್ಟೆ ಹರ್ಷಿಕಾ ಈ ಬಾರಿ ಬಹುಭಾಷಾ ತಾರೆ ಠಾಕೂರ್ ಅನೂಪ್ ಸಿಂಗ್ ಅನ್ನೋ ಹ್ಯಾಂಡ್ ಸಮ್ ಹಂಕ್, ಮತ್ತೊಬ್ಬ ಬಹುಭಾಷಾ ತಾರೆ ಕಬೀರ್ ಸಿಂಗ್ ದುಹಾನ್ ಮುಂತಾದವರೊಂದಿಗೆ ಸ್ಕ್ರೀನ್ ಸ್ಪೇಸ್ ಶೇರ್ ಮಾಡಿಕೊಂಡಿದ್ದಾರೆ.

ಈಗಾಗಲೇ ಹರ್ಷಿಕಾ ಹತ್ತಿಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹಿರಿಯ ಅನುಭವಿ ನಿರ್ದೇಶಕರೊಂದಿಗೆ ನಟಿಸಿರುವುದು ಬಹಳ ವಿರಳ. ಇದೀಗ ದೇಸಾಯಿಯವರ ‘ರೇ’ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಚಿತ್ರದ ಕುರಿತಂತೆ

ದೇಸಾಯಿಯವರ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಹರ್ಷಿಕಾ, ಹೀಗೆ ಹೇಳುತ್ತಾರೆ, “ಇತ್ತೀಚೆಗೆ ಸುನೀಲ್ ಸರ್ ಫೋನ್ ಮಾಡಿ, ಹೀಗೆ “ಚಿತ್ರದಲ್ಲಿ ಅಂತ್ಯಂತ ಪ್ರಮುಖ ಪಾತ್ರ ವಹಿಸುವ ಪಾತ್ರಕ್ಕೆ, ಉತ್ತಮ ನಟಿಯ ಅವಶ್ಯಕತೆ ಇದೆ. ಅದನ್ನ ನೀವೇ ಮಾಡಬೇಕು” ಅಂತಾ ಹೇಳಿದ್ರಂತೆ. ಸಾಮಾನ್ಯವಾಗಿ ಸುನಿಲ್ ಸರ್ ಅಂಥಹ ಹಿರಿಯ ನಿರ್ದೇಶಕರು ಒಮ್ಮೆ ಅವರ ಚಿತ್ರದಲ್ಲಿ ನಟಿಸಿದ ನಟಿಯನ್ನ ಇನ್ನೊಂದು ಚಿತ್ರದಲ್ಲಿ ಹಾಕಿಕೊಳ್ಳೋದಿಲ್ಲ, ಅಂಥಾದ್ರಲ್ಲಿ ‘…ರೇ’ ಚಿತ್ರದ ನಂತ್ರ ಮತ್ತೆ ಈ ಆಫರ್ ಕೊಟ್ಟಿದ್ದು ನನ್ನ ಅದೃಷ್ಟ. ಈ ಆಫರ್ ನನ್ನ ಆತ್ಮವಿಶ್ವಾಸ ಹೆಚ್ಚಾಗೋ ಹಾಗೆ ಮಾಡಿದೆ. ಈ ಚಿತ್ರ ಮಾಡ್ತಿರೋದು ಅವರಿಗೋಸ್ಕರವೇ” ಅಂದಿದಾರೆ ಹರ್ಷಿಕಾ.

ಎನಿವೇ , ಒಂದು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ಚಿಟ್ಟೆ ಹರ್ಷಿಕಾ ಅವರ ಸಿನಿ ಜೀವನ ಹೀಗೆಯೇ ಮುಂದುವರೆಯಲಿ.

 

@ sunil javali

Tags