ಸುದ್ದಿಗಳು

‘ಹೌರಾ ಬ್ರಿಡ್ಜ್’ ನಲ್ಲಿ ದೇವಕಿಯಾದ ಪ್ರಿಯಾಂಕಾ ಉಪೇಂದ್ರ..!!!

ಸದ್ಯ ಭರದಿಂದ ಸಾಗುತ್ತಿರುವ ಚಿತ್ರದ ಸೌಂಡ್ ಎಫೆಕ್ಟ್ ಕೆಲಸಗಳು

ಬೆಂಗಳೂರು, ನ.21: ತಮ್ಮ ಮೊದಲ ಸಿನಿಮಾ ‘ಮಮ್ಮಿ’ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ನಿರ್ದೇಶಕ ಲೋಹಿತ್ ಎಚ್ ಇದೀಗ ‘ಹೌರಾ ಬ್ರಿಡ್ಜ್’ ಕಟ್ಟುತ್ತಿದ್ದಾರೆ. ಹಾರರ್ ಜಾನರ್ ನಿಂದ ಥ್ರಿಲ್ಲರ್ ಗೆ ಹೊರಳಿಕೊಂಡಿರುವ ಅವರು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಚಿತ್ರದ ಪೋಸ್ಟರ್ ಬಿಡುಗಡೆ

ಸದ್ಯ ಈ ಚಿತ್ರದ ಪೋಸ್ಟರ್ ವೊಂದು ಬಿಡುಗಡೆಯಾಗಿದೆ. ಅದರಲ್ಲಿ ನಾಯಕಿ ಪ್ರಿಯಾಂಕಾ ಭಯಗೊಂಡು ಓಡುತ್ತಿದ್ದಾರೆ. ಅವರಿಲ್ಲಿ ದೇವಕಿ ಪಾತ್ರದಲ್ಲಿ ನಟಿಸಿದ್ದು, ಹೋಟೆಲ್ ವೊಂದರಲ್ಲಿ ರಿಸೆಪ್ಷನಿಸ್ಟ್ ಕೆಲಸ ಮಾಡುತ್ತಿರುತ್ತಾರೆ, ನಂತರ ಕಿವುಡ ಮತ್ತು ಮೂಕರ ಶಾಲೆಯಲ್ಲೂ ಕೆಲಸ ಮಾಡುತ್ತಿರುತ್ತಾರೆ.ನಟ ಕಿಶೋರ್ ಸಹ ಭಾಗಿ

ಇನ್ನು ಈ ಚಿತ್ರದಲ್ಲಿ ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಕೊಲ್ಕೋತಾ ಮೂಲದ ಪೊಲೀಸ್ ಅಧಿಕಾರಿಯಾಗಿ ಬಂಗಾಳಿ ಭಾಷೆಯಲ್ಲಿ ಕೆಲವೊಂದು ಡೈಲಾಗ್ ಹೇಳಲಿದ್ದಾರೆ.

ಅಮ್ಮಾ-ಮಗಳು

ಇನ್ನು ‘ಹೌರಾ ಬ್ರಿಡ್ಜ್’ ಚಿತ್ರದ ಮೂಲಕ ಐಶ್ವರ್ಯ ಉಪೇಂದ್ರ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೊಂದು ಅಮ್ಮ ಮಗಳ ಕಥಾಹಂದರ ಹೊಂದಿರುವುದರಿಂದ ಐಶ್ವರ್ಯ ರನ್ನು ಮಗಳ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಟೈಟಲ್ ಬಗ್ಗೆ

ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಹೌರಾ ಪಟ್ಟಣಗಳನ್ನು ಸೇರಿಸುವ ‘ಹೌರಾ ಬ್ರಿಡ್ಜ್’ ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇನ್ನು ಈ ಚಿತ್ರತಂಡ ಬಿಡುಗಡೆ ಮಾಡಿರುವ ಫೋಟೋದಲ್ಲಿಯೂ ಸಹ ಯಾವುದೇ ಮನುಷ್ಯರ ಚಿತ್ರಗಳಿಲ್ಲ. ಈ ಚಿತ್ರದಲ್ಲಿ ನಡೆಯುವ ಘಟನಾವಳಿಗಳಿಗೆ ಆ ಸೇತುವೆ ಸಾಕ್ಷಿಯಾಗುತ್ತದೆ.

Tags