ಸುದ್ದಿಗಳು

‘ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ತರಹ ನೋಡು’ ಎಂದು ವಿಕ್ರಮ್ ಮಗನಿಗೆ ಹೇಳಿದ್ದೇಕೆ?

ಚಿಯಾನ್ ವಿಕ್ರಮ್ ಮಗ ಧ್ರುವ್ ಕುಮಾರ್ ತಮಿಳಿನಲ್ಲಿ ‘ಆದಿತ್ಯ ವರ್ಮಾ’ ಎಂಬ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ವರ್ಮಾ ‘ಅರ್ಜುನ್ ರೆಡ್ಡಿ’ ರಿಮೇಕ್. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಬಿಡುಗಡೆಯ ಹಂತದಲ್ಲಿದೆ.

ಇದೆಲ್ಲದರ ನಡುವೆ ವಿಕ್ರಮ್ ಸಂದರ್ಶನವೊಂದರಲ್ಲಿ ಶೂಟಿಂಗ್ ಸ್ಪಾಟ್ ಗೆ ಹೋದಾಗ ಅವರನ್ನು ನೋಡಿ ಮಗ ಯಾವ ರೀತಿ ವರ್ತಿಸುತ್ತಾರೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಅನೇಕ ವೇಳೆ ವಿಕ್ರಮ್ ‘ಆದಿತ್ಯ ವರ್ಮಾ’ ಶೂಟಿಂಗ್ ಸ್ಪಾಟ್ ಗೆ, ಡಬ್ಬಿಂಗ್ ಸ್ಟುಡಿಯೋಗೆ ಹೋದಾಗ ವಿಕ್ರಮ್ ಡಬ್ ಮಾಡಲು, ನಟಿಸಲು ಹಿಂಜರಿಯುತ್ತಿದ್ದರಂತೆ.

ಆಗ ವಿಕ್ರಮ್ ಮಗನ ಬಳಿ ಹೋಗಿ “ನೀನು ನನ್ನನ್ನು ತಂದೆಯೆಂದು ಭಾವಿಸದೆ ಅಸಿಸ್ಟೆಂಟ್ ಡೈರೆಕ್ಟರ್ ತರಹ ನೋಡು” ಎಂದು ಸಲಹೆ ನೀಡಿದರಂತೆ. ಆಗಿನಿಂದ ತಂದೆಯ ಮುಂದೆ ನಟಿಸಲು ಧ್ರುವ್ ಪ್ರಯತ್ನಪಟ್ಟರಂತೆ.

‘ಆದಿತ್ಯ ವರ್ಮಾ’ ದಲ್ಲಿ ನಾಯಕಿಯಾಗಿ ಬನಿತಾ ಸಂಧು ಅಭಿನಯಿಸುತ್ತಿದ್ದು, ಚಿತ್ರವನ್ನು ಗಿರಿಸಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ವಿಕ್ರಮ್, ಕಡರಂ ಕೊಂಡನ್ ನಲ್ಲಿ ನಟಿಸಿದ್ದು, ಇದು ತೆಲುಗಿಗೆ ಡಬ್ ಅಗಿದೆ. ನಾಳೆ ಚಿತ್ರ ಬಿಡುಗಡೆಯಾಗಲಿದೆ.

ಅದಾ ಶರ್ಮಾ ಸೋಲೋ ಟ್ರಿಪ್ ಹೋಗಲು ಇಷ್ಟಪಡುವುದಿಲ್ಲವಂತೆ, ಮತ್ತೆ?

#balkaninews #dhruv #vikram #adithyavarma

Tags