ಸುದ್ದಿಗಳು

ನೀವೂ ಹೃತಿಕ್ ಅಭಿಮಾನಿಯೇ? ನಿಮಗೆಷ್ಟು ಗೊತ್ತು ಈ ರೋಷನ್ ಬಗ್ಗೆ?

ಹೃತಿಕ್ ಬಗ್ಗೆ ಗೂಗಲ್ ಏನು ಹೇಳುತ್ತದೆ…? ಇಲ್ಲಿದೆ ನೋಡಿ…!!

ಮುಂಬೈ,ಸೆ.26: ಗೂಗಲ್ ಇಲ್ಲದಿದ್ದರೆ ನಮಗೆ ಏನಾಗುತ್ತದೆ ಎಂದು ಕೆಲವೊಮ್ಮೆ, ನಾವು ಆಶ್ಚರ್ಯ ಪಡುತ್ತೇವೆ. ನಮ್ಮ ಜೀವನವು ಬೇರೆ ಎಲ್ಲದಕ್ಕಿಂತಲೂ ಹೆಚ್ಚು ಗೂಗಲ್ ನಂತಹ ಹಲವು ಹುಡುಕಾಟಗಳ ಎಂಜಿನ್ ಮೇಲೆ ಅವಲಂಬಿತವಾಗಿದೆ ಎಂಬುದಂತೂ ನಿತ್ಯ ಸತ್ಯ. ನಿಮ್ಮ ನೆಚ್ಚಿನ ಸೂಪರ್ಸ್ಟಾರ್ ಬಗ್ಗೆ ಗೂಗಲ್ ನಲ್ಲಿ ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ? ಗೂಗಲ್ ಇಂಡಿಯಾ ತನ್ನ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ ಬಗ್ಗೆ ಹೃತಿಕ್ ರೋಷನ್ ಗೆ ಟ್ವೀಟ್ ಮಾಡಿದೆ. ಅವುಗಳಲ್ಲಿ ಮೂರು ಪ್ರಶ್ನೆಗಳಿವೆ. ಅಭಿಮಾನಿಗಳಿಗೆ ಈ ಪ್ರತಿಯೊಂದು ಪ್ರಶ್ನೆಗಳಿಗೆ ಪ್ರತ್ಯುತ್ತರವನ್ನು ಏಕೆ ನೀಡಬಾರದು ಎಂದು ಅಂದುಕೊಂಡು ಹೃತಿಕ್ ಇದಕ್ಕೆ ಉತ್ತರವನ್ನು ಕೂಡ ನೀಡಿದ್ದಾರೆ.. ಉತ್ತರಗಳನ್ನು ತಿಳಿಯಲು ನೀವು ಬಯಸುವಿರಾ?, ಹಾಗಾದರೆ ಮುಂದ ಓದಿ..

1.ಹೃತಿಕ್ ರೋಷನ್ ಬಂಗಾಳಿಯವರೇ?

ಉತ್ತರ: ನಿಜವಲ್ಲ, ಆದರೆ ಅವರ ಅಜ್ಜಿ ಇರಾ ರೋಶನ್ ಬಂಗಾಳಿಯಾಗಿದ್ದರು, ಅವರು ಮದುವೆಯಾಗಿ  ಪಂಜಾಬಿ ಕುಟುಂಬದ ಸೊಸೆಯಾದರು. “2000 ಇಸವಿಯಲ್ಲಿಕಾಬಿಲ್ಸಿನಿಮಾದ ಪ್ರಚಾರದ ಸಂದರ್ಭದಲ್ಲಿ, ಕೋಲ್ಕತ್ತಾಕ್ಕೆ ಹೋಗಿದ್ದೆ. ನನ್ನ ಮೊದಲ ಸಾರ್ವಜನಿಕ ಪ್ರದರ್ಶನವಾಗಿತ್ತು ಅದು. ಏನೇ ಇರಲಿ ನನ್ನಲ್ಲಿ ಬಂಗಾಳಿ ರಕ್ತ ಇದೆ.” ಎಂದಿದ್ದಾರೆ.

  1. ಹೃತಿಕ್ ರೋಷನ್ ಈಗ ಎಲ್ಲಿದ್ದಾರೆ?

ಉತ್ತರ: ಈಗ ಅವರು ಎಲ್ಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ (ಬಹುಶಃ ಅವರು ಮನೆಯಲ್ಲಿ ಇರಬಹುದು ) ಆದರೆ ಈಗ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ  ಹೃತಿಕ್ ವರ್ಸಸ್ ಟೈಗರ್ ಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ.

3: ಹೃತಿಕ್ ರೋಷನ್ ನಂತೆ ನೃತ್ಯ ಮಾಡುವುದು ಹೇಗೆ?

ಉತ್ತರ: ಸರಿ, ಅದು ಕಠಿಣವಾಗಿದೆ ಆದರೆ ನೀವು ಇದನ್ನು ಪ್ರಯತ್ನಿಸಬಹುದು

giphy

Tags