ಸುದ್ದಿಗಳು

ತಂದೆಯನ್ನು ‘ಮ್ಯಾನ್ ಆಫ್ ಸ್ಟೀಲ್’ ಎಂದು ಕರೆದ ಹೃತಿಕ್ ರೋಷನ್

ರಾಕೇಶ್ ರೋಷನ್ ಹುಟ್ಟುಹಬ್ಬದ ಕಾರ್ಯಕ್ರಮ

ಮುಂಬೈ,ಸೆ.10: ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಸೆಪ್ಟೆಂಬರ್ 6ರಂದು 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಂದೆಯ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲೇ ಆಚರಿಸಿದ ಹೃತಿಕ್, ಟ್ವೀಟ್ಟರ್ ನಲ್ಲಿ ಆ ವಿಡಿಯೋವನ್ನು ಪೋಸ್ಟ್ ಮಾಡಿ, ‘ಸೆಲೆಬ್ರೆಟಿಂಗ್ ದ ಮ್ಯಾನ್ ಆಫ್ ಸ್ಟೀಲ್’ ಥ್ಯಾಂಕ್ಯೂ. ನಿಮ್ಮ ಪ್ರೀತಿ ಹಾಗೂ ಹಾರೈಕೆ ಖುಷಿಕೊಟ್ಟಿದ್ದು, ನನ್ನ ಅಪ್ಪ ಸಂತಸಗೊಂಡಿದ್ದಾರೆ. ಹ್ಯಾಪಿ ಬರ್ತ್ ಡೇ ಪಪ್ಪಾ ಎಂಬ ಅಡಿಬರಹವನ್ನೂ ನೀಡಿದ್ದಾರೆ.

Image result for rakesh roshan

ಕ್ರಿಶ್4

ಅಂದಹಾಗೆ ರಾಕೇಶ್ ರೋಷನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇಡೀ ಕುಟುಂಬವೇ ನೆರೆದಿತ್ತು. ಹೃತಿಕ್ ರೋಷನ್ ಪುತ್ರರು, ಸಹೋದರಿ ಸುನೈನಾ ರೋಷನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನ್ನೂ  ಚಿತ್ರದ ಬಗ್ಗೆ ಮಾತನಾಡುವುದಾದರೆ ಹೃತಿಕ್ ರೋಷನ್ ಮತ್ತು ತಂದೆ ರಾಕೇಶ್ ರೋಷನ್, ‘ಕ್ರಿಶ್’ 4 ಚಿತ್ರದ ಸ್ಕ್ರೀಪ್ಟ್ ತಯಾರಿಸುತ್ತಿದ್ದು, ಈ ವರ್ಷಾಂತ್ಯಕ್ಕೆಚಿತ್ರದ ಶೂಟಿಂಗ್ ಆರಂಭವಾಗಲಿದೆ. ‘ಕ್ರಿಶ್’ 4 ಹೊರತು ಪಡಿಸಿ ಹೃತಿಕ್ ರೋಷನ್ ತಮ್ಮ ಮುಂದಿನ ಚಿತ್ರ ‘ಸೂಪರ್ 30’ಯ  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಚಿತ್ರ. 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ತೆರೆ ಕಾಣಲಿದೆ.

 

Tags