ಸುದ್ದಿಗಳು

ನಾನು ಇವರ ಬಹುದೊಡ್ಡ ಅಭಿಮಾನಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ದಾನಿಶ್ ಸೇಠ್ ಅಭಿಮಾನಿಯಂತೆ!!

ಬೆಂಗಳೂರು, ಮಾ.23:

ನಾಡಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಒರ್ವ ನಟನ ಅಭಿಮಾನಿ!! ಹಂಬಲ್ ಪೊಲಿಟಿಶೀಯನ್ ನೋಗರಾಜ್ ಚಿತ್ರದ ಮೂಲಕ ಚಂದನವನದಲ್ಲಿ ಮನೆ ಮಾತಾಗಿರುವ ದಾನಿಶ್ ಸೇಠ್ ಎಂದರೆ ಅಪ್ಪುಗೆ ತುಂಬಾ ಇಷ್ಟ. ದಾನಿಶ್ ಸೇಠ್ ಅವರ ಬಹು ದೊಡ್ಡ ಅಭಿಮಾನಿ ನಾನು ಎಂದು ಸಂತಸದಿಂದ ಹೇಳುತ್ತಾರೆ ಅಪ್ಪು.

” ದಾನಿಶ್‌ ಕಂಡರೆ ನನಗೆ ತುಂಬಾ ಇಷ್ಟ. ದಾನಿಶ್ ಅಭಿನಯದ ಹಂಬಲ್‌ ಪೊಲಿಟಿಶೀಯನ್‌ ನೋಗರಾಜ್‌ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ಅಭಿನಯಿಸುವಂತೆ ನನ್ನಲ್ಲಿ ಕೇಳಿದರು. ದಾನಿಶ್‌ ಅವರಿಗಾಗಿ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದೆ.

ದಾನಿಶ್ ಅವರ ಪ್ರೋಗ್ರಾಮ್‌ಗಳನ್ನು ನೋಡುತ್ತಿದ್ದರೆ ಸಾಕು, ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವುದಂತೂ ಸತ್ಯ. ಇನ್ನು ಯೂ ಟ್ಯೂಬ್‌ನಲ್ಲೂ ದಾನಿಶ್ ಹವಾ ಇದ್ದೇ ಇದೆ. ಯೂ ಟ್ಯೂಬ್  ನಲ್ಲಿ ಆಗಾಗ ಅವರ ಪ್ರಾಂಕ್‌ ಕಾಲ್‌ ಗಳನ್ನು ಕೇಳಿ ಎಂಜಾಯ್‌ ಮಾಡುತ್ತೇನೆ. ಅವರ ಜತೆ ಎರಡು ಮೂರು ನಿಮಿಷ ಮಾತನಾಡಿದರೆ ಸಾಕು, ಸಿಕ್ಕಾಪಟ್ಟೆ ನಗುವುದು ಮಾತ್ರವಲ್ಲ, ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ ಎನ್ನುತ್ತಾರೆ ಪವರ್ ಸ್ಟಾರ್ ಪುನೀತ್‌.

ರಾಕಿಂಗ್ ಸ್ಟಾರ್ ಯಶ್ ಕಂಡ ದಸರಾ..

#balkaninews #puneethrajkumar #danishsait #sandalwood #puneethrajkumaranddanishsait

Tags