ಸುದ್ದಿಗಳು

ನಾನಿನ್ನೂ ಚಿತ್ರರಂಗ ತೊರೆದಿಲ್ಲ, ಸುಮ್ಮನೇ ಗಾಸಿಪ್ ಹಬ್ಬಿಸಬೇಡಿ: ಸಂಗೀತಾ ಭಟ್

ಕಳೆದ ವರ್ಷ ಚಿತ್ರರಂಗದಲ್ಲಿ ಜೋರಾಗಿ ಸದ್ದು ಮಾಡಿದ್ದ ಮಿಟೂ ಅಭಿಯಾನದ ಮೂಲಕ ಸದ್ದು ಮಾಡಿದವರಲ್ಲಿ ಸಂಗೀತಾ ಭಟ್ ಸಹ ಒಬ್ಬರು. ಈ ಅಭಿಯಾನದ ಬಳಿಕ ಅವರು ಚಿತ್ರರಂಗ ತೊರೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಅದೇ ವೇಳೆ ಅವರು ನಟಿಸಿರುವ ‘ಕಿಸ್ಮತ್’, ‘ಅನುಕ್ತ’ ಚಿತ್ರಗಳು ತೆರೆ ಕಂಡವು. ಇದೀಗ ‘ಕಪಟ ನಾಟಕ ಪಾತ್ರಧಾರಿ’ ರಿಲೀಸ್ ಗೆ ರೆಡಿಯಾಗಿದೆ.

ಅಂದ ಹಾಗೆ ಸಂಗೀತಾ ಭಟ್ ಇದೀಗ ಸಂಪೂರ್ಣವಾಗಿ ಚಿತ್ರರಂಗ ತೊರೆದಿದ್ದಾರೆ ಮತ್ತೆಂದೂ ಕಾಲಿಡುವುದಿಲ್ಲ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ಈ ಸುದ್ದಿಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ನಾನೀಗ ಪತಿಯೊಂದಿಗೆ ಜರ್ಮನಿಯಲ್ಲಿದ್ದೇನೆ. ಹೀಗಾಗಿ ಭಾರತಕ್ಕೆ ಬರುವ ಖರ್ಚಿನಲ್ಲೇ ಒಂದು ಚಿತ್ರದ ಎಡಿಟಿಂಗ್ ಮುಗಿಸಬಹುದು. ಹಾಗಾಗಿ ಪ್ರಾಕ್ಟಿಕಲಿ ಇದು ಅಸಾಧ್ಯ. ನಾನು ಪ್ರತ್ಯಕ್ಷವಾಗಿ ಅಲ್ಲಿಗೆ ಬಾರದೆ ಇರಬಹುದು. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತೇನೆ. ಹಾಗಂತಾ ನಾನು ಚಿತ್ರರಂಗ ತೊರೆದಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಅಂಥವರಿಗೆ ನಾನು ಇಂಡಸ್ಟ್ರಿಯಲ್ಲಿ ಇರುವುದು ಇಷ್ಟ ಇಲ್ಲ ಎನಿಸುತ್ತದೆ. ಹಾಗೇನಾದರೂ ಇದ್ದರೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ’.

ಸೆಕ್ಸಿ ಲುಕ್ ನಲ್ಲಿ ದಿಶಾ ಮಿಂಚಿಂಗ್

#SangeethaBhat #SangeethaBhatMovie  #KapataNaatakaPaatradhaari #Sandalwoodmovies  ‍#kannadaSuddigalu

Tags