ಸುದ್ದಿಗಳು

50 ನೇ ದಿನದ ಸಂಭ್ರಮದಲ್ಲಿ ‘ಐ ಲವ್ ಯೂ’

ಆರ್. ಚಂದ್ರು ನಿರ್ದೇಶನದ ‘ಐ ಲವ್ ಯೂ’ ಚಿತ್ರವು ನಾಳೆಗೆ ಯಶಸ್ವಿ 8 ನೇ ವಾರಕ್ಕೆ ಕಾಲಿಡುತ್ತಿದ್ದು, ಭರ್ಜರಿ 50 ದಿನಗಳನ್ನು ಪೂರೈಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಿದೆ.

ಹೌದು, ‘ಐ ಲವ್ ಯೂ’ ಸಿನಿಮಾ 50 ದಿನಗಳನ್ನು ಪೂರೈಸುವ ದಿನವೇ (ಆ.02) ಚಿತ್ರತಂಡದ ಸದಸ್ಯರೆಲ್ಲಾ ಸೇರಿ ಸಂಭ್ರಮಿಸಲಿದ್ದಾರೆ. ಜೊತೆಗೆ ಚಿತ್ರಕ್ಕಾಗಿ ದುಡಿದ ಮಂದಿಗೆ ನೆನಪಿನ ಕಾಣಿಕೆ ನೀಡಲಾಗುತ್ತಿದೆ. ಇದೇ ವೇಳೆ ಆರ್ ಚಂದ್ರು ಹೊಸ ನಿರ್ದೇಶಕರಿಗಾಗಿ ಸಿನಿಮಾ ನಿರ್ಮಿಸುವುದರ ಕುರಿತು ಮಾತನಾಡಲಿದ್ದಾರೆ.

ಇನ್ನು ಚಿತ್ರದಲ್ಲಿ ನಟಿಸಿರುವ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿ ಸಖತ್ ಕ್ಲಿಕ್ ಆಗಿದ್ದು, ಮೋಡಿ ಮಾಡುತ್ತಿದೆ. ಸದ್ಯ ಈ ಸಿನಿಮಾ 75 ನೇ ದಿನದತ್ತ ಮುನ್ನುಗ್ಗುತ್ತಿದ್ದು, ಆರ್ ಚಂದ್ರು, ಉಪೇಂದ್ರರಿಗಾಗಿಯೇ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಹಿಂದೆ ಇದೇ ಜೋಡಿಯಲ್ಲಿ ‘ಬ್ರಹ್ಮ’ ಸಿನಿಮಾ ಬಂದಿತ್ತು.

ಕರಾವಳಿಗೆ ಭೇಟಿ ಕೊಟ್ಟ ಕುಡ್ಲದ ಬೆಡಗಿ

#iloveyou #movie #celebrating #50day #upendra, #rachitharam #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies  ‍#kannadasuddigalu

Tags