ಸುದ್ದಿಗಳು

ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ: ಮೋಡಿ ಮಾಡುವ ‘ಐ ಲವ್ ಯೂ’ ಸಾಂಗ್

ಪ್ರೀತಿಯ ಬಲೆಯಲ್ಲಿ ಸಿಕ್ಕಿ ಕೊನೆಗೆ ಪ್ರೀತಿ ಸಿಗದಿದ್ದಾಗ ಭಾವನೆ ತುಂಬಿ ಹಾಡುವ ಸಾಂಗ್

ಬೆಂಗಳೂರು.ಮೇ.23: ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಟಿಸಿರುವ ‘ಐ ಲವ್ ಯೂ’ ಚಿತ್ರವು ಜೂನ್ 14 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಈಗಾಗಲೇ ತನ್ನದೇ ವಿಭಿನ್ನ ಶೈಲಿಯ ಹಾಡುಗಳಿಂದ ಗಮನ ಸೆಳೆದಿದ್ದ ಈ ಚಿತ್ರದಿಂದ ‘ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ’ ಎಂಬ ಸಾಲುಗಳನ್ನೊಳಗೊಂಡ ಹಾಡೊಂದು ರಿಲೀಸ್ ಆಗಿದ್ದು, ಮೋಡಿ ಮಾಡುತ್ತಿದೆ.

ಕೆ. ಎಂ ಇಂದ್ರ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿರುವ ಈ ಹಾಡು ಸಖತ್ ಮೋಡಿ ಮಾಡುತ್ತಿದೆ. ಹಾಡಿಗೆ ಅನುರಾಧಾ ಭಟ್ ಇಂಪಾಗಿ ಧ್ವನಿ ನೀಡಿರುವುದು ಹಾಡಿಗೆ ಮೋಡಿ ತಂದಿದೆ. ಪ್ರೀತಿಯ ಬಲೆಯಲ್ಲಿ ಸಿಕ್ಕಿ ಕೊನೆಗೆ ಪ್ರೀತಿ ಸಿಗದಿದ್ದಾಗ ಭಾವನೆ ತುಂಬಿ ಹುಡುಗಿ ಹಾಡುವ ಹಾಡಾಗಿದೆ.

ಈ ಹಾಡಿನಲ್ಲಿ ಪ್ರತಿಯೊಂದು ಜೀವಿಯಲ್ಲೂ ಒಂದು ಮನಸ್ಸಿರುತ್ತದೆ. ಅದೂ ಪ್ರೀತಿಗಾಗಿ ಹಂಬಲಿಸುತ್ತದೆ ಎನ್ನುವ ಸಂದೇಶವನ್ನು ಈ ಹಾಡು ಒಳಗೊಂಡಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಚಿತ್ರದಲ್ಲಿ ಸೋನುಗೌಡ, ಜೈ ಜಗದೀಶ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಬಹುತೇಕರು ನಟಿಸಿದ್ದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ. ಆರ್ ಚಂದ್ರು ಈ ಚಿತ್ರವನ್ನು ನಿರ್ದೇಶನದೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಇನ್ಸ್ಟಾಗ್ರಾಂ ಖಾತೆ ತೆರೆದ ನಟ, ನಿರ್ದೇಶಕ ರಾಘವ ಲಾರೆನ್ಸ್

#iloveyou, #duet, #song, #realeased, #balkaninews #filmnews, #upendra, #rachitharam, #kannadasuddigalu, #sonugowda

Tags