ಸುದ್ದಿಗಳು

ಫ್ಯಾಮಿಲಿ ಆಡಿಯೆನ್ಸ್ ನಿಂದ ಮೆಚ್ಚುಗೆ ಪಡೆದ ‘ಐ ಲವ್ ಯೂ’ : ಇದೀಗ ತಮಿಳಿಗೆ ರಿಮೇಕ್

ಆರ್ ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ‘ಐ ಲವ್ ಯೂ’ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದು, ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಈಗಾಗಲೇ ಚಿತ್ರತಂಡದವರು ಸಕ್ಸಸ್ ಪಾರ್ಟಿಯನ್ನು ಮಾಡಿದ್ದು, ಇದೀಗ ಮತ್ತೊಂದು ಸಂತಸದ ವಿಚಾರವನ್ನು ಹೇಳಿಕೊಂಡಿದ್ದಾರೆ.

ಇನ್ನು ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ, ಈ ಚಿತ್ರವೀಗ ತಮಿಳಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರಕ್ಕೆ ಸ್ಟಾರ್ ನಟರಾದ ವಿಜಯ್ ಸೇತುಪತಿ ಹಾಗೂ ಕಾರ್ತಿ ಹೆಸರು ಕೇಳಿ ಬರುತ್ತಿದೆ.

ಹೌದು, ಈ ಚಿತ್ರವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮಾತುಕಥೆಗಳು ನಡೆಯುತ್ತಿವೆ. ಎಲ್ಲವೂ ಅಂತಿಮವಾದರೆ, ಈ ಚಿತ್ರಕ್ಕೂ ಆರ್ ಚಂದ್ರು ಸಹ ಬಂಡವಾಳ ಹೂಡಿ, ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಅಂದ ಹಾಗೆ ಈ ಚಿತ್ರದ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದಿದ್ದರೂ ಸಹ ಎಲ್ಲರಿಗೂ ಇಷ್ಟವಾಗಿದೆ. ಅಲ್ಲದೇ ಇದು ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ ಎಂಬ ಸ್ಲೋಗನ್ ಕಮಾಲ್ ಮಾಡುತ್ತಿದೆ.

ಇನ್ನು ಈ ಚಿತ್ರದ ಗೆಲುವಿಗೆ ಕಾರಣವಾಗಿದ್ದು, ಉಪೇಂದ್ರ ಮತ್ತು ಚಂದ್ರು ಶೈಲಿ. ಹಾಗೂ ಕಥೆಯಲ್ಲಿ ಬೆರೆಸಿರುವ ಕಲಾತ್ಮಕ ಜಾಣ್ಮೆ. ಬಹುಶಃ ಈ ಚಿತ್ರವನ್ನು ಬರೀ ಪ್ರೀತಿ ಪ್ರೇಮಗಳ ಸುತ್ತ ಮಾತ್ರ ಸುತ್ತಿದ್ದರೆ ಇಂಥಾದ್ದೊಂದು ಗೆಲುವು ದಾಖಲಿಸುವುದು ಕಷ್ಟವಾಗುತ್ತಿತ್ತೇನೋ. ಆದರೆ ನಿರ್ದೇಶಕರು ಪ್ರೀತಿಯ ಭಾವಗಳ ಜೊತೆಗೆ ಬದುಕಿನ ವಾಸ್ತವವನ್ನು ಮುಖಾಮುಖಿಯಾಗುವಂತೆ ಮಾಡಿದ್ದಾರೆ.

#iloveyou, #movie, #remake, #balkaninews #filmnews, #kannadasuddigalu, #upendra, #rachitharam

Tags