ಸುದ್ದಿಗಳು

ನಾನು ವಿಶ್ವದ ಅತ್ಯಂತ ಲಕ್ಕಿ ಗರ್ಲ್ ಎಂದು ಸ್ವಯಂ ಘೋಷಿಸಿಕೊಂಡ ಸಮಂತಾ

ನಾನು ವಿಶ್ವದ ಅತ್ಯಂತ ಲಕ್ಕಿ ಗರ್ಲ್ ಹೀಗೆಂದು ನಟಿ ಸಮಂತಾ ಸ್ವಯಂ ಘೋಷಿಸಿಕೊಂಡಿದ್ದಾರೆ. ತನ್ನ ಟ್ವಿಟರ್ ಅಕೌಂಟ್ ನಲ್ಲಿ ಈ ರೀತಿ ಬರೆದುಕೊಂಡಿರುವ ಸಮಂತಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ತಾನು ಮಾಡಿದ ಮೂರು ಸಿನಿಮಾಗಳಲ್ಲೂ ಡಿಫರೆಂಟಾಗಿ ಪಾತ್ರ ಮಾಡಿದ್ದು, ಈ ಪಾತ್ರಗಳ ಜನರನ್ನು ಇಪ್ರೆಂಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಸಮಂತಾ ಹೇಳಿಕೊಂಡಿದ್ದಾರೆ.
ರಂಗಸ್ಥಳಂ, ಮಹಂತಿ, ಇರುಂಬು ತೈರೈ ನನ್ನ ಹ್ಯಾಟ್ರಿಕ್ ಯಶಸ್ಸಾಗಿದ್ದು, ಈ ಮೂರು ಚಿತ್ರಗಳಲ್ಲಿ ನಾನು ಢಿಪಂರೆಟ್ ಪಾತ್ರಗಳಲ್ಲಿ ನಟಿಸಿದ್ದು, ಈ ಪಾತ್ರಗಳು ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ನನಗೆ ಈ ಅವಕಾಶ ನೀಡಿದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದಗಳು ಎಂದು ಅವರು ಹೇಳಿಕೊಂಡಿದ್ದಾರೆ.
ತನ್ನ ಇತ್ತೀಚಿನ ಮೂರು ಚಿತ್ರಗಳ ಮೂರು ಪೋಟೋವನ್ನು ಕೂಡ ಇನ್ಟಾಗ್ರಾಮ್ ನಲ್ಲಿ ಹರಿಬಿಟ್ಟಿರುವ ಸಮಂತಾ, ನಾನು ಲಕ್ಕಿಯೆಸ್ಟ್ ಗರ್ಲ್ ಎಂದುಕೊಂಡಿದ್ದಾರೆ, ಕಳೆದ ಮಾರ್ಚ್ 30 ರಂದು ಬಿಡುಗಡೆಯಾಗಿರುವ ರಂಗಸ್ಥಳಂ ಚಿತ್ರ ಸೂಪರ್ ಹಿಟ್ ಆಗಿತ್ತು. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಸಮಂತಾ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ರಾಮ್ ಚರಣ್ ಗೆ ಜೋಡಿಯಾಗಿ ನಟಿಸಿರುವ ಸಮಂತಾ, ಹಳ್ಳಿಹುಡುಗಿಯಾಗಿ ಬೋಲ್ಟ್ ಆಗಿ ನಟಿಸಿದ್ದರು.
ಮಹಂತಿ ಚಿತ್ರ ಮೇ 9ರಂದು ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸಮಂತಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಸಾವಿತ್ರಿ ಅವರ ಜೀವನಕತೆಯಾಧರಿತ ಚಿತ್ರ ಇದಾಗಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಮೇ 11ರಂದು ಸಮಂತಾ ಅವರ ಮೂರನೇ ಚಿತ್ರ ಇರುಂಬು ತಿರೈ ಚಿತ್ರ ಬಿಡುಗಡೆಯಾಗಿದ್ದು, ವಿಶಾಲ್ ಗೆ ಜೋಡಿಯಾಗಿ ಸಮಂತಾ ಅಭಿನಯಿಸಿದ್ದಾರೆ. ಸದ್ಯಕ್ಕೆ ಸಮಂತಾ ಅವರ ಕೈಯಲ್ಲಿ ಮೂರು ಚಿತ್ರಗಳಿದ್ದು, ವಿಜಯ್ ಸಿತಾಪತಿ ಅವರೊಂದಿಗಿನ, ಸೂಪರ್ ಡಿಲಕ್ಸ್, ಶಿವ ಕಾರ್ತಿಕ್ ಅವರೊಂದಿಗಿನ ಸೀಮಾ ರಾಜಾ ಕೈಯಲ್ಲಿದ್ದು, ಕನ್ನಡ ರಿಮೇಕ್ ಯು ಟರ್ನ್ ಚಿತ್ರದ ಶೂಟಿಂಗ್ ನಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ

Tags