ಸುದ್ದಿಗಳು

ನಾಯಕಿಯಿಲ್ಲದೇ ಸಿನಿಮಾ ಮಾಡಿದ ಕ್ರೇಜಿಸ್ಟಾರ್…!

ಎಲ್ಲರಿಗೂ ತಿಳಿದಿರುವಂತೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿನಿಮಾಗಳೆಂದರೆ ಮ್ಯೂಸಿಕಲ್ ಮತ್ತು ನಾಯಕಿಯನ್ನು ಅಂದವಾಗಿ ತೋರಿಸಿರುತ್ತಾರೆ. ಅಚ್ಚರಿಯೆಂದರೆ ಇವರೀಗ ನಟಿಸಿರುವ ‘ಆ ದೃಶ್ಯ’ ಚಿತ್ರದಲ್ಲಿ ಹಾಡುಗಳಾಗಲಿ ಅಥವಾ ನಾಯಕಿಯಾಗಲಿ ಇಲ್ಲ..!

‘ದೃಶ್ಯ’ ಚಿತ್ರದ ಬಳಿಕ ಶುರುವಾದ ‘ಆ ದೃಶ್ಯ’ ಚಿತ್ರವು ಇದೇ ತಿಂಗಳ 8 ರಂದು ತೆರೆಗೆ ಬರುತ್ತಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

‘ಈಗಿನ ಟ್ರೆಂಡ್‌  ಬದಲಾಗಿದೆ. ದೃಶ್ಯ ಸಿನಿಮಾದಲ್ಲಿಒಂದೇ ಒಂದು ಹಾಡಿತ್ತು. ಆದರೂ ಅದು ಹಿಟ್‌ ಆಯಿತು. ಜನ ಬದಲಾದಂತೆ ನಾವೂ ಬದಲಾಗಬೇಕಿದೆ. ಈ ಸಿನಿಮಾದಲ್ಲಿ ನನಗೆ ನಾಯಕಿಯೇ ಇಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ. ಅಂದ ಹಾಗೆ ಈ ಚಿತ್ರದಲ್ಲಿ ನಾಯಕಿಯಿದ್ದರೂ ಸಹ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ.

ಆರ್.ಜೆ.ಪೃಥ್ವಿಗೆ ಬಿಗ್ ಮನೆಯಲ್ಲಿ ಸ್ಟಾರ್ಟ್ ಆಯ್ತು ರಾಗಿಂಗ್?!

#AaDrushya #Ravichandran #RavichandranMovies #SandalwoodMovies  ‍#kannadaSuddigalu

Tags