ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ಕಾಳಗಕ್ಕಿಳಿದ ಕಾಳಿಂಗ-ಹೆಬ್ಬಾವು: ಕೊನೆಗೆ ಆಗಿದ್ದೇನು?

ಸಾಮಾನ್ಯವಾಗಿ ಹಾವುಗಳ ಕಾದಾಟವನ್ನು ನೋಡುವ ಅವಕಾಶ ಎಲ್ಲರಿಗೂ ಸಿಕ್ಕಿರುವುದಿಲ್ಲ.

ಅದರಲ್ಲೂ ಹೆಬ್ಬಾವು ಮತ್ತು ಕಾಳಿಂಗ ಸರ್ಪದ ಕಾದಾಟ ನೋಡಿರುವವರು ಕಡಿಮೆ ಎಂದೇ ಹೇಳಬಹುದು. ಒಂದು ವೇಳೆ ಸಿಕ್ಕರೂ ಅದನ್ನು ನೋಡಬಾರದು ಎಂಬ ನಂಬಿಕೆ ಕೆಲವರಲ್ಲಿದೆ.

ಈಗ್ಯಾಕೆ ಆ ವಿಷಯ ಅಂತೀರಾ? ಇಂತದೊಂದು ದೃಶ್ಯ ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಕಂಡುಬಂದಿದೆ.

ಹೌದು, ದೈತ್ಯ ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳು ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ತಕ್ಷಣವೇ ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿರುವುದು ವಿಡಿಯೋದಲ್ಲಿ ಕಾಣಬಹುದು.

ಆನಂತರ ತಕ್ಷಣವೇ ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

‘ಟ್ರಾಫಿಕ್ ರೂಲ್ಸ್’ ಫಾಲೋ ಮಾಡಿಲ್ಲ ಅಂದ್ರೆ ಯಮರಾಜ ಬರ್ತಾನೆ ಹುಷಾರ್!!

#balkaninews #madiwalamakki #kalinga #python #videoviral

Tags