ಜೀವನ ಶೈಲಿಸಂಬಂಧಗಳುಸುದ್ದಿಗಳು

ನಿಮ್ಮ 73ನೇ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಹೀಗಿರಲಿ…

ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 15ರಂದು ಭಾರತದಲ್ಲಿ ಅದ್ದೂರಿಯಾಗಿ ಜಾತಿ ಮತ ಭೇದವಿಲ್ಲದೇ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತರನ್ನು ನೆನೆಸುತ್ತಾ ಅವರ ತ್ಯಾಗಕ್ಕೆ ಶಿರಬಾಗಿ ಅವರನ್ನು ಸ್ಮರಿಸುತ್ತಾ ನಾವು  ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತೇವೆ. ಆದರೆ ಹಿಂದಿನ ಸ್ವಾತಂತ್ಯ ದಿನಾಚರಣೆಯ ಸಂಭ್ರಮಕ್ಕೂ ಇಂದಿನ ಸ್ವಾತಂತ್ರ್ಯ ದಿನಾಚರಣೆಗೆ ತುಂಬಾ ವ್ಯತ್ಯಾಸವಿದೆ.ಹೌದು, ನಮ್ಮ ದೇಶಕ್ಕಾಗಿ ಹೊರಡಿದ ಮಹಾತ್ಮಾ ಗಾಂಧಿಜಿ, ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ್ ತಿಲಕ್, ಭಗತ್ ಸಿಂಗ್, ಚಂದ್ರ ಶೇಖರ್ ಅಜಾದ್ ಹೀಗೆ ಬಹಳಷ್ಟು ಹೋರಾಟಗಾರರು ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ಸ್ಮರಿಸುತ್ತಿದ್ದರು.

ಆದರೆ, ಈಗಿನ ಯುವ ಪೀಳಿಗೆಗಳು ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಎಂಬ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗಿ ಅದರಲ್ಲಿಯೇ ತ್ರಿವರ್ಣ ಧ್ವಜಗಳನ್ನು ಹಾರಿಸುತ್ತಿದ್ದಾರೆ.  ಇಷ್ಟೇ ಅಲ್ಲದೇ ಒಂದು ದಿನ ರಜಾ ಸಿಕ್ಕಿದೆಯೆಂದು ಸುಮ್ಮನೆ ಮನೆಯಲ್ಲಿಯೇ ಕುಳಿತು ಕಾಲಕಳೆಯುತ್ತಾರೆ. ಇದರಿಂದ ನಾವು ವಾಟ್ಸಾಪ್ ಸ್ಟೇಟಸ್ ನಲ್ಲಿಯೇ ಮಾತ್ರ ದೇಶ ಭಕ್ತಿಯ ಬಗ್ಗೆ ಮಾತನಾಡುತ್ತಿದ್ದೇವೆ ಹೊರತು, ನಮಗಾಗಿ ಹೋರಾಡಿದವರನ್ನು ಸ್ಮರಿಸುವ ಕೆಲಸವನ್ನು ನಾವೆಲ್ಲರೂ ಮರೆಯುತ್ತಿದ್ದೇವೆ.Image result for independence day whatsapp dp

ಇದರ ಸಲುವಾಗಿ ದಯವಿಟ್ಟು ನಾವೆಲ್ಲರೂ ಸೋಶಿಯಲ್ ಮೀಡಿಯಾಗಳಲ್ಲಿ ಮುಳುಗುವವರ ಬದಲು ಹೊರಗೆ ಬಂದು ನಮ್ಮ ದೇಶಕ್ಕಾಗಿ ಹೋರಾಡಿದವರ ಬಗ್ಗೆ ಜಾಗೃತಿ ಮೂಡಿಸಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ನಮ್ಮ ದೇಶಕ್ಕಾಗಿ ಮನೆ ಮಠ ಬಿಟ್ಟು ದೇಶದ ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರಿಗೆ ಧನ್ಯವಾದ ತಿಳಿಸಿರೆಂದು ನಾವಿಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

Image result for independence day whatsapp dp

Image result for independence day whatsapp dp

 

ಸಿಂಧೂರದ ಮಹತ್ವ ಏನು?

#independenceday #independencedaycelebrations #august15thindependenceday ##independencedayquotes #balkaninews #indianarmy #india

Tags