ಸುದ್ದಿಗಳು

ನವದೆಹಲಿಯ ಕೆಂಪು ಕೋಟೆಯಲ್ಲಿ 72ನೇ ಸ್ವಾತಂತ್ರ್ಯ ಹಬ್ಬ….

ಬೆಂಗಳೂರು, ಆ.10: ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚಾರಣೆಯನ್ನು ಒಂದು ತಿಂಗಳ ಮುಂಚಿತವಾಗಿ ಪ್ರಾರಂಭ ಮಾಡಲಾಗುತ್ತದೆ. ಹೆಚ್ಚಿನ ಪ್ರಮುಖ ರಸ್ತೆಗಳಲ್ಲಿ ಧ್ವಜಗಳನ್ನುಅಲಂಕರಿಸಲಾಗುತ್ತದೆ. ಸ್ವಾಂತತ್ರ್ಯ ದಿನವನ್ನು ಮೂವತ್ತೂ ರಾಜ್ಯಗಳ ರಾಜಧಾನಿಗಳಲ್ಲಿ ಧ್ವಜವನ್ನು ಹಾರಿಸಿ , ಸಮಾರಂಭಗಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡುತ್ತಾರೆ. ಲಕ್ಷಕ್ಕೂ ಮೀರಿದಂತೆ  ಪ್ರೇಕ್ಷಕರು ಈ ದೃಶ್ಯವನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತದೆ. ಮುಖ್ಯ ನಗರಗಳಲ್ಲಿ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ಮೆರವಣಿಗೆ  ಸಾಗಿ, ಭಾರತಾಂಬೆಗೆ  ಜಯಕಾರ ಕೂಗುತ್ತಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.  ಸ್ವಾತಂತ್ರ್ಯೋತ್ಸವದ  ಮುನ್ನಾ ದಿನ  ಪ್ರಧಾನಿಯವರು  ತಮ್ಮ ಕಚೇರಿಯಲ್ಲೇ ಕುಳಿತು ದೂರದರ್ಶನದ  ಮೂಲಕ ‘ದಿ ಅಡ್ರೆಸ್ ಟು ದಿ ನೇಷನ್’ ಎಂಬ ಅಧಿಕೃತ ಭಾಷಣವನ್ನು ಮಾಡುತ್ತಾ, ಈ ದಿನದ ಪ್ರಾಮುಖ್ಯತೆ  ಕುರಿತು ಮಾತಾನಾಡುತ್ತಾರೆ.  ದೆಹಲಿಯಲ್ಲಿ ಆಗಸ್ಟ್ 15 ರ ಸಿದ್ದತೆಗಳು

ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮದಲ್ಲಿ ಸುಮಾರು 10,000 ಆಸನಗಳನ್ನು ಸಾರ್ವಜನಿಕರಿಗೇಂದೇ ಮೀಸಲಿಡಲಾಗುತ್ತದೆ. ಗಣ್ಯರ ಹಾಗೂ ರಾಜಕೀಯ ಮುಖಂಡರುಗಳ ಸಮ್ಮುಖದಲ್ಲಿ ಕೆಲವು ದೇಶಭಕ್ತಿಯ ಹಾಡುಗಳನ್ನು ಹಾಡಲಾಗುತ್ತದೆ. ಐತಿಹಾಸಿಕ ಸ್ಮಾರಕಗಳ ರಾಜಬೀದಿಗಳಲ್ಲಿ ವಿವಿಧ ಸೇನಾ ತುಕಡಿಗಳಿಂದ  ಪಥಸಂಚಲನ  ಮಾಡಲಾಗುತ್ತದೆ. ಈ ಸಮಯದಲ್ಲಿ ಭದ್ರತೆಗೋಸ್ಕರ ಹೆಚ್ಚಿನ ಮುಂಜಾಗ್ರತೆಗಳನ್ನು ವಹಿಸಲಾಗುತ್ತದೆ.  ಕೆಂಪುಕೋಟೆಗೆ ಆಗಮಿಸುವ ಗಣ್ಯರಿಂದ ಮೊದಲ್ಗೊಂಡು ಸಾರ್ವಜನಿಕರೂ ಕೂಡಾ ತಮ್ಮೊಡನೆ ಕ್ಯಾಮೆರಾಗಳು, ಆಹಾರ, ನೀರಿನ ಬಾಟಲಿಗಳು, ಕೈ ಚೀಲಗಳನ್ನು ಒಳಗೆ  ಕೊಂಡೊಯ್ಯುವುದನ್ನು ನಿಷೇದಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸೈನ್ಯದ ಮೆರವಣಿಗೆಗಳು, ವಿವಿಧ ರಾಜ್ಯಗಳ ಪ್ರಸಿದ್ಧ ಕಲಾ ಕೃತಿಗಳು, ಹಲವಾರು ರೀತಿಯ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು , ನಾಟಕಗಳ ದೃಶ್ಯಗಳು, ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಏರ್ಪಡಿಸಲಾಗುತ್ತದೆ. ಈ ರೀತಿಯಾಗಿ ಮಾಡುವ ಉದ್ದೇಶವೆನೆಂದರೆ, ಎಲ್ಲಾ ಧರ್ಮಗಳು ಮತ್ತು ಸಂಸ್ಕೃತಿಗಳು ಒಂದೇ ಎನ್ನುವ ಸಲುವಾಗಿ , ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.   ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ , ಕೆಂಪು ಕೋಟೆಯನ್ನು ನೋಡುವ ಹಂಬಲ ಭಾರತೀಯರಾದ  ನಮ್ಮೆಲ್ಲರಿಗೂ  ಇರಲೇಬೇಕಾದ ವಿಚಾರ! ಈ ಸಮಯದಲ್ಲಿ ಕೇಸರಿ, ಬಿಳಿ ,ಹಸಿರು ಬಣ್ಣದ  ಬಲೂನುಗಳನ್ನು ಆಕಾಶದಲ್ಲಿ ತೇಲಿಬಿಡಲಾಗುತ್ತದೆ. ಈ ಮೂಲಕ ಎಲ್ಲರೂ ಒಂದೇ ಎನ್ನುವ ಭಾವನೆಗಳನ್ನು ಬೆಳೆಸಿಕೊಳ್ಳೊಣ. ಆಚರಣೆ ಬೆಳಿಗ್ಗೆ ಪ್ರಾರಂಭವಾಗಿ ಸಂಜೆಯವರೆಗೂ  ನಡೆದು, ಸಾಯಂಕಾಲ 6 ಘಂಟೆಗೆ ನಿಧಾನವಾಗಿ ನಮ್ಮ ರಾಷ್ಟ್ರಧ್ವಜವನ್ನು ಇಳಿಸಲಾಗುತ್ತದೆ. ಇದೂ ವಿಶೇಷ ಕಾರ್ಯಕ್ರಮವಾಗಿದ್ದು, “ದಿ ರಿಟ್ರೀಟ್’ ಎಂದು ಕರೆಯಲಾಗುತ್ತದೆ.

Tags

Related Articles