ಸುದ್ದಿಗಳು

ಪಾಕ್ >< ಭಾರತ : ಏಳು ದಶಕಗಳ ವೈರತ್ವ..!, ಕ್ರಿಕೆಟ್ ಮಿತ್ರತ್ವ...!, ರಾಜತಾಂತ್ರಿಕ ಕತ್ತಿಮಸೆಯಾಟ!!!

ದುಷ್ಮನ್ ಕಿದರ್ ಹೈ..? ಭಾರತ್ ಕೀ ಊಪರ್.., ಆಜೂ-ಬಾಜೂ…ಬಗಲ್ ಮೆ ಹೈ..!!

ದುಷ್ಮನ್ ಕಿದರ್ ಹೈ..? ಭಾರತ್ ಕೀ ಊಪರ್.., ಆಜೂ-ಬಾಜೂ…ಬಗಲ್ ಮೆ ಹೈ..!!

ಬೆಂಗಳೂರು,ಸೆ.22: ಭಾರತ ಮತ್ತು ಪಾಕಿಸ್ತಾನ ಇಭ್ಭಾಗವಾದಾಗಿನಿಂದ ಈ ಉಭಯ ದೇಶಗಳ ನಡುವೆ ಪರಸ್ಪರ ಸಂಘರ್ಷಗಳು ನಡೆಯುತ್ತಲೇ ಇದೆ. ಈ ಉಭಯ ದೇಶಗಳ ನಡುವಿನ ಸಂಘರ್ಷ ಹಾಗೂ ಸ್ನೇಹ ಹೇಗೆ ಒಂದರ ಜೊತೆಗೊಂದು ಸಮಾನಾಂತರವಾಗಿ ಏಳು ದಶಕಗಳಿಂದ ಸಾಗುತ್ತಿದೆ ಎಂಬುದೇ ಒಂದು ಅಚ್ಚರಿ!!.

ಗಡಿಯಲ್ಲಿ ಪಾಕ್ ಸೈನಿಕರು ಹಾಗೂ ಭಾರತ ಯೋಧರ ನಡುವೆ ಕದನವಾಗುತ್ತಿದ್ದರೆ, ಮತ್ತೊಂದೆಡೆ  ದೇಶದ ಅಧಿಕಾರ ನಡೆಸುತ್ತಿರುವವರು ಪರಸ್ಪರ ಕೈ ಕುಲುಕಿ ಮಾತನಾಡುತ್ತಿರುತ್ತಾರೆ, ಇನ್ನೂ ಸಿನಿಮಾ , ಕ್ರೀಡೆಗಳಲ್ಲಿ ಮಡಿವಂತಿಕೆ ಇಲ್ಲ. ಹಾಗೆಂದ ಮಾತ್ರಕ್ಕೆ  ಭಾರತ ಮತ್ತು ಪಾಕಿಸ್ತಾನ ದೇಶಗಳು ಯಾವುದೇ ಕ್ರೀಡೆಗಳಿಗೆ ತೊಡಗಿಕೊಂಡರೂ ಅಲ್ಲಿ ನುಸುಳುವುದೇ ಅವರೊಳಗಿನ ಮುಕ್ಕಾಲು ಶತಮಾನಕ್ಕೂ ಮೀರಿದ ಬದ್ಧ ವೈರತ್ವ..! ಇಡೀ ವಿಶ್ವದ ಗಮನ ಸೆಳೆಯುವುದೇ ಆ ಪರಸ್ಪರ ವೈರತ್ವದಿಂದ..!

ಭಾರತ ಮತ್ತು ಪಾಕಿಸ್ತಾನದ  ಸರಕಾರ-ಜನತೆಗಳ ಕಾಡುವ ಹತ್ತು ಹಲವು ವಿಚಾರಗಳನ್ನೇ ಇಟ್ಟುಕೊಂಡು ಹಲವಾರು ಸಿನಿಮಾಗಳು ತೆರೆ ಕಂಡಿವೆ. ಭಾರತದ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿಉತ್ತಮ ಮಾರುಕಟ್ಟೆಯೇ ಇದೆ. ಇತ್ತೀಚೆಗೆ ಬಿಡುಗಡೆಯಾದ ‘ಪರಮಾಣು’ ಚಿತ್ರ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ವಿಶ್ವವೇ ಬೆರಗಾದ 1998ರ ಭಾರತದ ಅಣ್ವಸ್ತ್ರ ಪರೀಕ್ಷೆ ಆಧರಿತ ಚಿತ್ರವೇ ‘ಪರಮಾಣು:ದಿ ಸ್ಟೋರಿ ಆಫ್ ಪೋಖ್ರಾನ್’ ಸಿನಿಮಾ..! ವಿಶೇಷ  ಎಂದರೆ, ಈ ಸಿನಿಮಾ ಪಾಕಿಸ್ತಾನದಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಪಾಕಿಸ್ತಾನದ ಇಷ್ಟೊಂದು ಸ್ಕ್ರೀನ್ ಗಳಲ್ಲಿ ಜನರನ್ನು ಆಕರ್ಷಿಸಿದ ಈ ಚಿತ್ರ  ಅದೇ ನಮ್ಮ ಭಾರತದಲ್ಲಿ ತೆರೆಕಂಡದ್ದು ಇದೇ ಮೊದಲು ಎನ್ನುವ ಮಾತು ಕೇಳಿಬಂತು..!!

ಭಾರತ-ಪಾಕ್ ಕ್ರಿಕೆಟ್ ವಿಚಾರ

ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದೆಂದರೆ ಅದನ್ನು ಹೈವೋಲ್ಟೇಜ್ ಎಂದೇ ಬಿಂಬಿಸಲಾಗುತ್ತದೆ. ಈ ಪಂದ್ಯ ವೀಕ್ಷಣೆಗೆ ಅತೀ  ಕುತೂಹಲವೂ ಇರುವುದು ಸಹಜ. ಲಕ್ಷೋಪಲಕ್ಷ ಕ್ರಿಕೆಟ್ ಅಭಿಮಾನಿಗಳು ಈ ವೇಳೆ ಸಾವಿರಾರು ಹರಕೆಗಳ ಹೊತ್ತು, ನೂರಾರು ಹೋಮ-ಹವನಗಳ ನಡೆಸಿ ಕೊನೆಯ ಕ್ಷಣದ ಗೆಲುವಿಗೆ ಹಾತೊರೆದು ಕೂರುವುದು ಸರ್ವೇಸಾಮಾನ್ಯ..!  ಿನ್ನು, ಈ ಬಗ್ಗೆ ಪರ-ವಿರುದ್ಧ ಚರ್ಚೆಗಳೋ  ಉಭಯ ದೇಶದ  ಸಕಲ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡು, ಕೊಟ್ಯಾನುಕೋಟಿ ಹಣ ‘ಬೆಟ್ಟಿಂಗ್” ನಲ್ಲಿ ವಿಲೇವಾರಿಗೊಳ್ಳುತ್ತವೆ.

ಒಂದು ಅಂದಾಜಿನ ಪ್ರಕಾರ 1978ರಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಕ್ರಿಕೆಟ್ ಏಕದಿನ ಪಂದ್ಯವನ್ನಾಡಿದ್ದು. ಅಲ್ಲಿಂದ ಇಲ್ಲಿಯವರೆಗೂಸುಮಾರು 132 ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಇವುಗಳಲ್ಲಿ 72 ಪಂದ್ಯಗಳನ್ನು ಪಾಕ್ ಗೆದ್ದಿದ್ದರೆ, ಭಾರತ 51 ಪಂದ್ಯಗಳನ್ನಷ್ಟೇ ಗೆದ್ದಿದೆ ಎನ್ನಲಾಗುತ್ತಿದೆ.

ಪಾಕಿಸ್ತಾನದೊಂದಿಗೆ ಈವರೆಗೆ ಆಡಿರುವ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು ಕಡಿಮೆ ಇರಬಹುದು. ಆದರೆ, 2010ರಿಂದೀಚೆಗೆ,ಭಾರತವು ಪಾಕಿಸ್ತಾನದ ವಿರುದ್ಧ ಶೇ. 66.67ರಷ್ಟು ಯಶಸ್ಸು ದಾಖಲಿಸಿದೆ. ಪ್ರತಿ ಮೂರರಲ್ಲಿ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ. 1974-1989ರ ಅವಧಿಯಲ್ಲಿ ಭಾರತದ ಯಶಸ್ಸು 33.33ರಷ್ಟಿತ್ತು. 1990-99ರ ಅವಧಿಯಲ್ಲಿ ಶೇ. 40ರಷ್ಟಾಯಿತು. 2000-09 ರಿಂದ ಇದು ಶೇ. 45ರಷ್ಟಾಯಿತು.

ಭಾರತಪಾಕಿಸ್ತಾನ ಯುದ್ಧ

1947ರಲ್ಲಿ ಇಬ್ಭಾಗವಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಈವರೆಗೆ 4 ಯುದ್ಧಗಳು ನಡೆದಿವೆ. ಪೈಕಿ ಮೂರು ಸಮರಗಳು ಕಾಶ್ಮೀರ ವಿಷಯಕ್ಕಾಗಿ ನಡೆದಿವೆ.

ಮೊದಲ ಯುದ್ಧ 1947ರಲ್ಲಿ

ಭಾರತ- ಪಾಕ್ ವಿಭಜನೆಯಾದ ಬಳಿಕ ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಆ ರಾಜ್ಯ ವಶಪಡಿಸಿಕೊಳ್ಳುವ ದುರಾಸೆಯೊಂದಿಗೆ ಬುಡಕಟ್ಟು ಪಡೆಗಳ ಜತೆಗೂಡಿ ಪಾಕಿಸ್ತಾನ ದಾಳಿ ನಡೆಸಿತ್ತು. ಇದರಿಂದ ಕಂಗಾಲಾಗಿದ್ದ ಹರಿಸಿಂಗ್, ಭಾರತದ ನೆರವಿಗೆ ಅಂಗಲಾಚಿದ್ದರು. ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಲು ಹರಿಸಿಂಗ್ ಒಪ್ಪಿದ ಬಳಿಕ ಭಾರತೀಯಸೇನಾ ಪಡೆಗಳು ಜಮ್ಮು-ಕಾಶ್ಮೀರಕ್ಕೆ ತೆರಳಿದ್ದವು. ಆಗ ಯುದ್ಧ ನಡೆದಿತ್ತು.

ಉಗ್ರರ ಕಾರಣಕ್ಕೆ 1965 ಯುದ್ಧ

ಆಪರೇಷನ್ ಗಿಬ್ರಾಲ್ಟರ್ಹೆಸರಿನಲ್ಲಿ ಪಾಕಿಸ್ತಾನ ಉಗ್ರರು ಜಮ್ಮುಕಾಶ್ಮೀರಕ್ಕೆ ನುಸುಳಿ , ಸರ್ಕಾರದ ವಿರುದ್ಧ ಭಯೋತ್ಪಾದನೆ ಸೃಷ್ಟಿಸಲುಯತ್ನಿಸಿದ ಸಂದರ್ಭದಲ್ಲಿ ಭಾರತ ಯುದ್ಧ ಸಾರಿತ್ತು.

ಬಾಂಗ್ಲಾಕ್ಕಾಗಿ 1971ರಲ್ಲಿ ಕದನ

ಕಾಶ್ಮೀರ ಹೊರತಾದ ಕಾರಣಕ್ಕೆ ಭಾರತಪಾಕಿಸ್ತಾನ ಯುದ್ಧ ನಡೆಸಿದ್ದು ಇದೇ ಮೊದಲಬಾರಿ. ಪೂರ್ವಪಾಕಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ಜನರು ದಂಗೆ ಎದ್ದಿದ್ದರು. ಸಂದರ್ಭದಲ್ಲಿ ಭಾರತ ಮಧ್ಯ ಪ್ರವೇಶಿಸಿದ್ದರಿಂದ ಘೋರ ಯುದ್ಧ ನಡೆದಿತ್ತು.

ಕಾರ್ಗಿಲ್ 1999 ಸಮರ

ಭಾರತದ ಕಾರ್ಗಿಲ್ ಜಿಲ್ಲೆಯನ್ನು ಪಾಕಿಸ್ತಾನ ಯೋಧರು ಆಕ್ರಮಿಸಿಕೊಂಡಿದ್ದರು. ಅವರನ್ನು ಹಿಮ್ಮೆಟ್ಟಿಸಲು ಕಾರ್ಗಿಲ್ ಸಮರ ನಡೆಯಿತು. ಎರಡು ತಿಂಗಳ ಬಳಿಕ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಕಾರ್ಗಿಲ್ನಿಂದ ಪಾಕಿಸ್ತಾನ ಹಿಂದೆ ಸರಿಯಿತು.

ಏನೇ  ಇರಲಿ, ಭಾರತ ದೇಶ ವಿಭಜನೆ ಕಂಡು ಮನಸ್ಸು-ಮನಸ್ಸುಗಳೂ ಛಿದ್ರ ಛಿದ್ರವಾಗಿ ಹೋದವು. ಅಖಂಡ ಭಾರತದ ಕನಸುಗಳ ಹೊತ್ತೂ ಇಂದೂ ಹಲವಾರು ದೇಶ ಭಕ್ತರು ಹರಿದುಹೋದ ಭೌಗೋಳಿಕ ಪ್ರಾಂತ್ಯಗಳನ್ನು ಒಂದಾಗಿಸುವ ಕನಸು ಕಾಣತೊಡಗಿದರೂ ಪ್ರಾಯಶಃ ಅದೆಂದೂ  ನನಸಾಗಲಾರದೇನೋ..!!? ಆದರೆ, ಈ ಕ್ರಿಕೆಟ್ ನಂಥಾ ಕ್ರೀಡೆಗಳು ಮಾತ್ರ ಕೆಲವೇ ತಾಸುಗಳಲ್ಲಿ ಎರಡೂ ದೇಶಭಾಂಧವರನ್ನು ಒಂದೇ ಮೈದಾನದಲ್ಲಿ ಕಾಣಿಸಲು ಪ್ರಚೋದಿಸಬಹುದು ವಿನಃ ಉಳಿದಂತೆ ಭಾರತ-ಪಾಕ್ ಸಂಧಿಸುವುದು ಹಿಮಚ್ಛಾದಿತ  ಬೆಟ್ಟ- ಗುಡ್ಡಗಳಿಂದಾವೃತ  ರಣರಂಗದಲ್ಲೇ..!

Tags