ಸುದ್ದಿಗಳು

“ಇಂಡಿಯನ್ 2” ಚಿತ್ರಕ್ಕೆ ಕಮಲ್ ಹಾಸನ್ ಬದಲು ವಿಕ್ರಮ್ ಹೀರೋ.!!?!!

ಚೆನೈ, ಮೇ.22:

ಕಮಲ್ ಹಾಸನ್ ನಟನೆಯ ‘ಇಂಡಿಯನ್’ ಸಿನಿಮಾ ಈಗಾಗಲೇ ಸಕ್ಕತ್ ಸೌಂಡ್ ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ಪಾತ್ರದ ಮೂಲಕ ನಟ ಕಮಲ್ ಹಾಸನ್ ಮತ್ತಷ್ಟು ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಸದ್ಯ ‘ಇಂಡಿಯನ್’ ಸಿನಿಮಾ ಸೀಕ್ಷೆಲ್ ‘ಇಂಡಿಯನ್ 2’ ಕೂಡ ತೆರೆ ಮೇಲೆ ಬರುವುದಕ್ಕೆ ಸಿದ್ದವಾಗುತ್ತಿದೆ. ಸದ್ಯ ಈ ಸಿನಿಮಾದಲ್ಲೂ ನಟ ಕಮಲ್ ಹಾಸನ್ ಇರ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬೇರೆ ನಟ ಬರ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಇಂಡಿಯನ್ 2’ ನಲ್ಲಿ ವಿಕ್ರಮ್..?

ಹೌದು, ‘ಇಂಡಿಯನ್ 2’ ಸಿನಿಮಾ ಈಗಾಗಲೇ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆರಂಭವಾಗಲೇ ಇಲ್ಲ. ಇದೀಗ ಮತ್ತೆ ಸಿನಿಮಾ ಆರಂಭಕ್ಕೆ ನಿರ್ದೇಶಕರು ಮುಂದಾಗಿದ್ದಾರೆ. ಇಲ್ಲಿಯ ತನಕ ‘ಇಂಡಿಯನ್ 2’ ಗೆ ಕಮಲ್ ಹಾಸನ್ ಅವರೇ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬದಲಿ ನಟ ಬರುತ್ತಾರೆಂಬ ಮಾತುಗಳು ಸಿನಿಮಾ ವಲಯದಲ್ಲಿ ಕೇಳಿ ಬರುತ್ತಿವೆ. ಸದ್ಯ ಈ ಸಿನಿಮಾಗೆ ನಾಯಕನಾಗಿ ವಿಕ್ರಮ್ ಎಂಟ್ರಿ ಕೊಡಲಿದ್ದಾರೆಂಬ ವರದಿಗಳಾಗಿವೆ.

ಇಂಡಿಯನ್ 2 ನಲ್ಲಿ ಕಮಲ್ ಇರಲ್ವಂತೆ..?

ಸದ್ಯ ಕಮಲ್ ಹಾಸನ್ ಜಾಗಕ್ಕೆ ನಟ ವಿಕ್ರಮ್ ಅವರನ್ನು ಕರೆತರಬೇಕೆಂಬ ಮಾತುಗಳು ನಡೆಯುತ್ತಿವೆಯಂತೆ. ಸದ್ಯ ಈ ಬಗ್ಗೆ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಎಲ್ಲ ಅಂದುಕೊಂಡತೆ ಆದರೆ ‘ಇಂಡಿಯನ್ 2’ ಸಿನಿಮಾದಲ್ಲಿ ನಟ ಕಮಲ್ ಹಾಸನ್ ಬದಲಿಗೆ ವಿಕ್ರಮ್ ಬರಲಿದ್ದಾರೆ. ‘ಇಂಡಿಯನ್’ ಸಿನಿಮಾ ಒಂದೊಳ್ಳೆ ಸಂದೇಶ ಇಟ್ಟುಕೊಂಡು ತೆರೆ ಕಂಡು ಯಶಸ್ವಿ ಕೂಡ ಆಗಿತ್ತು.

ವೈರಲ್ ಆಯ್ತು ನಿರ್ಮಾಪಕ ಕೆ.ಮಂಜು ಪುತ್ರನ ವರ್ಕೌಟ್ ವಿಡಿಯೋ…!!!

#balkaninews #kollywood #vikram #indian2 #kamalhassan

 

 

 

 

 

Tags