ಸುದ್ದಿಗಳು

ಇಂಡಿಯನ್-2 ಸಿನಿಮಾಗೆ ಮೂರು ಬಲಿ .!!!

ಕಮಲ್ ಹಾಸನ್ ನಟಿಸುತ್ತಿರುವ ಚಿತ್ರದ ಸೆಟ್ ನಲ್ಲಿ ಮೂವರು ಮೃತಪಟ್ಟಿದ್ದಾರೆ!!!

ಇಂಡಿಯನ್ 2 ಸಿನಿಮಾದ ಸಹಸ ದೃಶ್ಯದ ಚಿತ್ರಿಕರ್ಣವೇಳೆಯಲ್ಲಿ, ಶೋಟಿಂಗ್ ಮಾಡಲು  ಕುಳಿತಿದ್ದ ಕ್ರೇನ್ ನೆಲಕ್ಕೆ ಅಪ್ಪಳಿಸಿದೆ. ಮೂವರು ಸಹಾಯಕ ನಿರ್ದೇಶಕರು ಸ್ಥಳದಲ್ಲೆ ಮೃತಪಟ್ಟಿದ್ದಾರೆ, ಇನ್ನು ಒಂಬತ್ತು ಜನರು ಗಾಯಗೊಂಡಿದ್ದಾರೆ.  ಈ ಘಟನೆ ನೆಡೆದಿರುವುದು  ಚೆನ್ನೈ ಬಳಿಯ ಇ.ವಿ.ಪಿ ಫಿಲ್ಮ್ ಸಿಟಿಯಲ್ಲಿ.

Image result for indian 2 film latest news

ಈ ಘಟನೆಯಲ್ಲಿ ಮೃತಪಟ್ಟಿರುವವರು, ಸಹಾಯಕ ನಿರ್ದೇಶಕ  ಕೃಷ್ಣ, ಕಲಾ ಸಹಾಯಕ ನಿರ್ದೇಶಕ ಚಂದ್ರನ್ ಮತ್ತು ಪ್ರೊಡಕ್ಷನ್ ಅಸಿಸ್ಟೆಂಟ್ ಮಧು, ಪ್ರೊಡಕ್ಷನ್ ಹೌಸ್ ಲೈಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಕ್ರೇನ್ ಅಪಘಾತಕ್ಕೀಡಾದಾಗ ಅವರು ಚಿತ್ರೀಕರಣಕ್ಕಾಗಿ ಬೆಳಕಿನ ಕೆಲಸ ಮಾಡುತ್ತಿದ್ದರು. ಈ ಘಟನೆ ಬುಧವಾರ ರಾತ್ರಿ 9: 30 ಕ್ಕೆ ಸಂಭವಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Image result for indian 2 film latest news

ಇಂಡಿಯನ್ 2 ಸಿನಿಮಾದ  ನಿರ್ದೇಶಕ ಶಂಕರ್, ಕ್ರೇನ್ ಕೆಳಗೆ ಅಪ್ಪಳಿಸಿದಾಗ ಆ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ನಡೆದಾಗ ಕಮಲ್ ಹಾಸನ್  ಮತ್ತೊಂದು ಸ್ಥಳದಲ್ಲಿದ್ದರು, ಹಾಗಾಗಿ ಅಪಘಾತದಿಂದ ಪಾರಾಗಿದ್ದಾರೆ. “ಅಪಘಾತವು ಕ್ರೂರವಾಗಿದೆ, ನಾನು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡೆ. ನನ್ನ ನೋವುಗಿಂತ ಹೆಚ್ಚಾಗಿ, ಅವರ ಕುಟುಂಬಗಳ ದುಃಖ ಅಪಾರವಾಗಿರುತ್ತದೆ. ಅವರ ದುಃಖವನ್ನು ನಾನು ಹಂಚಿಕೊಳ್ಳುತ್ತೇನೆ” ಎಂದು ಕಮಲ್ ಹಾಸನ್ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಮದಗಜನ ಘರ್ಜನೆಗೆ ಇಂದು ಮುಹೂರ್ತ…!!

#balkanunweskannada #kamalhasan #kannadafilmindustary #telugufilmindustary #tamilfilmindustary

Tags