ಸುದ್ದಿಗಳು

ಒಂದೇ ತೆರೆಯ ಮೇಲೆ ಸ್ಟಾರ್ ಗಳ ಮುಖಾಮುಖಿ!

ಬೆಂಗಳೂರು, ಆ.08: ಬಾಲಿವುಡ್ ನಟ ಅಜಯ್ ದೇವಗನ್ ದಕ್ಷಿಣ ಬಾರತದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಅಧಿಕೃತ ಮಾಹಿತಿಗಳು ತಿಳಿಸಿವೆ. ನಟ ಭಯಂಕರ ಕಮಲ್ ಹಾಸನ್ ಅವರ ಮುಂದಿನ  ‘ಇಂಡಿಯನ್-2’ ಚಿತ್ರದಲ್ಲಿ ಕಮಲ್ ಅವರಿಗೆ ಪ್ರತಿಸ್ಪರ್ಧಿಯಾಗಿ ಅಜಯ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳ ಕುತೂಹಲ

ಸದ್ಯ ಕಮಲ್, ತಮ್ಮ ‘ವಿಶ್ವರೂಪಂ-2’ ಚಿತ್ರದ ಬಿಡುಗಡೆ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ಮತ್ತು ಇಂಡಿಯನ್ ಚಿತ್ರದ ನಿರ್ದೇಶಕರಾದ ಶಂಕರ್ ಅವರೂ ಸಹ ತಮ್ಮ ಬಹುನಿರೀಕ್ಷಿತ 2.0 ಚಿತ್ರದ ಪೋಸ್ಟ್ ಪ್ರೊಡಕ್ಷನ್ ವಿಷಯಲ್ಲಿ ಕಾರ್ಯನಿರತರಾಗಿದ್ದಾರೆ. ತಮ್ಮ ಬಿಡುವಿಲ್ಲದ ಸಮಯದಲ್ಲೂ ಕಮಲ್ ಹಾಗೂ ಶಂಕರ್ ಮತ್ತೆ ಸಿನೆಮಾ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಪ್ರತಿಸ್ಪರ್ಧಿಯಾಗಿ ಅಜಯ್

1996 ರಲ್ಲಿ ಬಿಡುಗಡೆಯಾಗಿದ್ದ ‘ಇಂಡಿಯನ್’ ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುವುದರ ಮೂಲಕ ತಮಿಳು ಸಿನೆಮಾರಂಗದಲ್ಲಿ ಸಂಚಲನ ಮೂಡಿಸಿತ್ತು. ಈ ಚಿತ್ರಕ್ಕೆ ಶಂಕರ್ ಅವರು ಯಾಕ್ಷನ್ ಕಟ್ ಹೇಳಿದ್ದರು. ಕಮಲ್ ಮತ್ತು ಮನಿಷಾ ಕೊಯಿರಾಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈಗ ಇದೇ ಸಿನೆಮಾದ ಸರಣಿ ಭಾಗವನ್ನು ಈಗಿನ ಕಾಲಕ್ಕೆ ತಕ್ಕಂತೆ ಶಂಕರ್ ಕತೆಯೊಂದನ್ನು ತಯಾರಿಸಿದ್ಧಾರಂತೆ. ಈ ಕತೆಗೂ ಕಮಲ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಎನ್ನುವುದನ್ನು ಕೆಲದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಈಗ ಕಮಲ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಕಾಣಿಸಿಕೊಳ್ಳಲಿದ್ದಾರೆಂದು ಸಿನಿಮೂಲಗಳು ತಿಳಿಸಿವೆ.

Tags