ಸುದ್ದಿಗಳು

ಅಪರಿಮಿತ ಅಪಮಾನಗಳನ್ನು ಅಸಂಖ್ಯಾತ ದಿನಗಳಿಂದ ಎದುರಿಸುತ್ತಿರುವ ನಮ್ಮ ತ್ರಿವರ್ಣ ಧ್ವಜ!

ದೇಶದಲ್ಲಿ ಆಗಸ್ಟ್ ತಿಂಗಳು ಬಂತೆಂದರೇ…. ಅಂಗಡಿಗಳಲ್ಲಿ, ಬುಕ್ ಸ್ಟಾಲ್ ಗಳಲ್ಲಿ, ಬೀದಿ ಬೀದಿಗಳಲ್ಲಿ ನಮ್ಮ ರಾಷ್ಟ್ರ ಲಾಂಛನದ ಕೇಸರಿ, ಬಿಳಿ, ಹಸಿರು ಬಣ್ಣಗಳಂತೂ ಮೈತುಂಬಿಕೊಂಡಿರುತ್ತವೆ. ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ನೆಪವಾಗಿಸಿಕೊಂಡು ಚಿಲ್ಲರೆ ವ್ಯಾಪಾರಿಗಳಂತೂ, ಮಕ್ಕಳನ್ನು ಹಾಗೂ ವಿದ್ಯಾರ್ಥಿಗಳನ್ನು, ತಮ್ಮತ್ತ ಸೆಳೆಯುತ್ತಾರೆ. ಕೇವಲ ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಪ್ಲಾಸ್ಟಿಕ್ ಗೆ ರಾಷ್ಟ್ರ ಲಾಂಛನದ ಬಣ್ಣಗಳನ್ನು ಬಳೆದು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತಿರುವುದು ದುರಂತದ ಸಂಗತಿ.

ಮುಗ್ದ ಮನಸ್ಸುಗಳ ದೇಶ ಪ್ರೇಮ

ಇಂತಹ ಪ್ಲಾಸ್ಟಿಕ್ ಧ್ವಜಗಳಿಗೆ ಮಾರುಹೋಗುವುದರ ಮೂಲಕ, ಏನೂ ಅರಿಯದ ಮುಗ್ದ ಮನಸ್ಸಿನ ಮಕ್ಕಳು ಇವುಗಳನ್ನು ಕೈಯಲ್ಲಿಡಿದು ಓಡುತ್ತಿರುವುದನ್ನು ನೋಡುವುದೇ ಒಂದು ಖುಷಿ! ಆದರೇ ಸ್ವಾತಂತ್ರ್ಯದ ಸಂಭ್ರಮ ಮುಗಿಯುತ್ತಿದ್ದಂತೆಯೇ, ನಮ್ಮ ನಾಡಿನ ತಿರಂಗ ಧ್ವಜ ಮಕ್ಕಳ ಕೈಯಿಂದ ಕಸದ ಬುಟ್ಟಿ ಸೇರುತ್ತಿರುವುದನ್ನು ನೋಡುತ್ತದ್ದರೇ… ನಮ್ಮಲ್ಲಿರುವ ದೇಶ ಪ್ರೇಮ ಎಲ್ಲಿ ಇದೆ ಎಂದು ತಿಳಿಯುತ್ತದೆ.

ಪ್ಲಾಸ್ಟಿಕ್ ಮುಕ್ತ ಭಾರತ

ಈ ನಿಟ್ಟಿನಲ್ಲಿ ಹೇಳುವುದಾದರೇ, ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ತೊಟ್ಟಿರುವ ನಾವೆಲ್ಲರೂ, ಈ ರೀತಿಯ ಪ್ಲಾಸ್ಟಿಕ್ ಧ್ವಜಗಳನ್ನು ಕೊಂಡುಕೊಳ್ಳುವುದರ ಮೂಲಕ ಪ್ಲಾಸ್ಟಿಕ್ ನಾಶವಾಗದಂತೆ ಕಾಪಾಡುತ್ತಿರುವುದನ್ನು ನೋಡಿದರೇ ನಮ್ಮ ಉದ್ದೇಶ ತಿಳಿಯುತ್ತದೆ. ಜೊತೆಗೆ ಇಂತಹ ಧ್ವಜಗಳನ್ನು ಬಳಸಿ ರಾಷ್ಟ್ರ ಲಾಂಛನವನ್ನು ಕಸದ ಬುಟ್ಟಿಗೆ ಹಾಕಿ ಅಪಮೌಲ್ಯಗೊಳಿಸಲು ನಾವೇ ಕಾರಣೀಭೂತರಾಗಿರುವುದನ್ನು ಯೋಚಿಸಲೇಬೇಕು.

ಕಣ್ಣಾ ಮುಚ್ಚಾಲೆಯಾಟ ನಿಲ್ಲಲಿ!

ಈ ರಾಷ್ಟ್ರೀಯ ದಿನಗಳಲ್ಲಿ ವರ್ಷ ವರ್ಷವೂ ತಲೆದೋರುವ ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸುವ  ಘಟನೆಗಳನ್ನು ತಡೆಯಲು ಖಾಕಿವರ್ದಿಗಳು ಇನ್ನಾದರೂ ಎಚ್ಚರಗೊಳ್ಳಬೇಕಿದೆ. ಕಾನೂನು ಮತ್ತು ಸುವ್ಯವಸ್ಥೆ ಶೀರ್ಷಿಕೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಆರಕ್ಷಕ ಧಳದವರೂ ನಮ್ಮ ಲಾಂಛನಗಳಿಗೆ ಸಲ್ಲುತ್ತಿರುವ ನಿತ್ಯ ಅಪಮಾನಗಳನ್ನು ಕಂಡರೂ ಕಾಣದಂತೆ ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿ!? ಕೇಂದ್ರ ಗೃಹಮಂತ್ರಿ ಮೊದಲ್ಗೊಂಡು 30 ರಾಜ್ಯಗೃಹಮಂತ್ರಿಗಳು, ಐಜಿಪಿ, ಪೊಲೀಸ್ ಕಮಿಷನರ್ ಗಳು ಇನ್ನಾದರೂ ಎಚ್ಚೆತ್ತುಕೊಂಡು, ರಾಷ್ಟ್ರಲಾಂಛನಕ್ಕೆ ಆಗುವ ಅವಮಾನಗಳ ವಿರುದ್ದ ಸುಗ್ರಿವಾಜ್ಞೆಯನ್ನು ಅನುಷ್ಠಾಕ್ಕಿಳಿಸಲಿ…  ಕಣ್ಣಾ ಮುಚ್ಚಾಲೆಯಾಟ ಇನ್ನು ಮುಂದಾದರೂ ನಿಲ್ಲಲಿ.!

Tags

Related Articles