ಸುದ್ದಿಗಳು

ಒಬಾಮರನ್ನು ಬೇಟಿ ಮಾಡಿದ ಇಂಡಿಯನ್ ಗುಡ್ ವೈಫ್!

ನವದೆಹಲಿ, ಆ.08: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಜನ್ಮದಿನದಂದು ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಒಬಾಮ ಅವರನ್ನು ಬೇಟಿ ಮಾಡುವುದರ ಮೂಲಕ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.  ಒಬಾಮಾರವರು ಕಳೆದ, ಆಗಸ್ಟ್ 4 ರಂದು, ತಮ್ಮ 57 ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮರೆಯಲಾಗದ ಕ್ಷಣ

ಈ ಸಂತೋಷದ ಕ್ಷಣದಲ್ಲಿ ಭಾಗಿಯಾಗಿದ್ದ ಭಾರತೀಯ ನಟಿ ಮಲ್ಲಿಕಾ, ವಿಶ್ವ ಮಟ್ಟದ ನಾಯಕನಿಗೆ  ಜನ್ಮದಿನದ ಶುಭಾಶಯಗಳನ್ನು ತಿಳಿಸುವುದರ ಮೂಲಕ, ಬರಾಕ್ ಒಬಾಮಾರವರನ್ನು ಈ ಕ್ಷಣದಲ್ಲಿ ಬೇಟಿಯಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.  ಲಾಸ್ ಏಂಜಲೀಸ್ ನಲ್ಲಿ 2011 ರ ಟೀ ಪಾರ್ಟಿಯಲ್ಲಿ ಮಲ್ಲಿಕಾ ಅವರು ಒಬಾಮರನ್ನು ಭೇಟಿಯಾಗಿದ್ದೆ. ನಂತರ ಅವರನ್ನು ಬೇಟಿಯಾಗುವ ಕ್ಷಣ ಸಿಕ್ಕಿರಲಿಲ್ಲ ಅದು ಈಗ ಕೂಡಿಬಂದಿದೆ. ಈ ದಿನವನ್ನು ಎಂದೂ ಮರೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಮೇರಿಕನ್ ಡ್ರಾಮಾ

ಸದ್ಯ, ಅಮೇರಿಕಾದಲ್ಲಿ ನೂತನ ಚಿತ್ರವಾದ ‘ದಿ ಗುಡ್ ವೈಫ್’ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಈ ಕತೆಯು  ಅಮೇರಿಕನ್ ಕಾನೂನು ಮತ್ತು ರಾಜಕೀಯ ಡ್ರಾಮಾ ಆಧಾರಿತವಾಗಿದ್ದು, ಈ ಕತೆಯಲ್ಲಿ ಮಲ್ಲಿಕಾ, ಅಮೇರಿಕಾದ ಮಹಿಳೆಯಾಗಿ ಕಾಣಿಸಿಕೊಳ್ಳಿದ್ದಾರೆ.

ಈ ಕುರಿತು ಮಾತನಾಡಿರುವ ಮಲ್ಲಿಕಾ “ನಾನು ಭಾರತದ ಪ್ರೇಕ್ಷಕರಿಗೆ ‘ದಿ ಗುಡ್ ವೈಫ್’ ಎನ್ನುವ ಶೀರ್ಷಿಕೆಯಲ್ಲಿ ಕಾಣಿಸಿಕೊಳ್ಳಲು ಕಾತುರಳಾಗಿದ್ದೇನೆ. ಈ ಕುರಿತಾಗಿ ನನ್ನ ಮೇಲೆ ನಂಬಿಕೆ ಇಟ್ಟು ಈ ಕಥೆಯನ್ನು ನನಗೆ ಈ ಕತೆಯನ್ನು ಪ್ರಸ್ತುತ ಪಡಿಸಿರುವ ಸಿಬಿಎಸ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಂದು ಮಲ್ಲಿಕಾ ಹೇಳಿಕೊಂಡಿದ್ದಾರೆ.

Tags