ಸುದ್ದಿಗಳು

ಕಮಲ್ ಹಾಸನ್ ಜೋಡಿಯಾಗಿ ಕಾಜಲ್

ಶಂಕರ್ ನಿರ್ದೇಶನ ಮಾಡಲಿರುವ ‘ಇಂಡಿಯನ್-2’ ಚಿತ್ರದ ನಾಯಕಿಯಾಗಿ ಆಯ್ಕೆ

ಚೆನೈ,ಡಿ.2: ಮೊನ್ನೆ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾದ ‘ರೋಬೋ 2.0’ ಸಿನಿಮಾ ಯಶಸ್ವಿಯಾಗಿದೆ. ಇದರ ಖುಷಿಯನ್ನು ಆಚರಿಸುತ್ತಿರುವ ನಿರ್ದೇಶಕ ಶಂಕರ್ ಮುಂದಿನ ಸಿನಿಮಾದತ್ತ ತಮ್ಮ ಗಮನ ಹರಿಸಿದ್ದಾರೆ.

ಇಂಡಿಯನ್ 2

ಹೌದು, ನಿರ್ದೇಶಕ ಶಂಕರ್ ಈಗಾಗಲೇ ‘2.0’ ಚಿತ್ರಕ್ಕಾಗಿ ಮೂರು ವರ್ಷಕ್ಕೂ ಹೆಚ್ಚಿನ ಸಮಯ ವಹಿಸಿದ್ದರು. ಇದೀಗ ಮುಂದಿನ ಸಿನಿಮಾದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಈ ಬಾರಿ ಕಮಲ್ ಹಾಸನ್ ರಿಗೆ ಸಿನಿಮಾ ಮಾಡಲಿದ್ದಾರೆ.

ಕಮಲ್ ಹಾಸನ್ ನಾಯಕತ್ವದ ‘ಇಂಡಿಯನ್ 2’ ಚಿತ್ರವು ನಿರ್ದೇಶಕ ಶಂಕರ್ ಬತ್ತಳಿಕೆಯಿಂದ ಬರಲು ಸಿದ್ದತೆ ನಡೆಸಿದೆ. ಇದು 1996 ರಲ್ಲಿ ತೆರೆಗೆ ಬಂದಿದ್ದ ‘ಇಂಡಿಯನ್’ ಚಿತ್ರದ ಸರಣಿಯಾಗಿದೆ.

ನಾಯಕಿಯಾಗಿ ಕಾಜಲ್

ಮತ್ತೊಂದು ವಿಶೇಷ ಸುದ್ದಿಯೆಂದರೆ ಈ ಚಿತ್ರಕ್ಕೆ ನಾಯಕಿಯಾಗಿ ಕಾಜಲ್ ಅಗರ್ ವಾಲ್ ಅಭಿನಯಿಸುತ್ತಿರುವುದು. ಈಗಾಗಲೇ ವಿದೇಶದಲ್ಲಿ ನಾಯಕಿಯ ಆಯ್ಕೆಯ ಬಗ್ಗೆ ಒಂದು ಸುತ್ತಿನ ಲುಕ್ ಟೆಸ್ಟ್ ನಡೆದಿದೆ.

ನಯನತಾರಾ ನಟಿಸಬೇಕಿತ್ತು

ಈ ಹಿಂದೆ ನಯನತಾರಾ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ ಈಗ ಬಂದ ಮಾಹಿತಿಯ ಪ್ರಕಾರ ಅವರ ಬದಲಾಗಿ ‘ಡಾರ್ಲಿಂಗ್’ ಕಾಜಲ್ ಅಗರ್ ವಾಲಾ ನಾಯಕಿಯ ಪಾತ್ರ ಮಾಡಲಿದ್ದಾರೆ.

ಇನ್ನು ಈ ಚಿತ್ರವು ಈ ಈಗಾಗಲೇ ಟೇಕ್ ಆಫ್ ಆಗಬೇಕಾಗಿತ್ತು, ಆದರೆ ಆಗಿರಲಿಲ್ಲ. ಇದೇ ವೇಳೆ ಬೇರೆ ಸಿನಿಮಾಗಳಲ್ಲಿ ಬಿಜಿಯಾಗಿದ್ದ ನಯನತಾರಾ ಅನಿವಾರ್ಯವಾಗಿ ಈ ಚಿತ್ರದಿಂದ ಹೊರನಡೆಯಬೇಕಾಯಿತು ಎಂಬ ಮಾತುಗಳು ಕೂಡ ಚಾಲ್ತಿಯಲ್ಲಿವೆ. ಈಗ ಅವರಿಂದ ತೆರವಾದ ಸ್ಥಾನ ಕಾಜಲ್ ಪಾಲಾಗಿದೆ.

ಇನ್ನು ‘2.0’ ಚಿತ್ರಕ್ಕೆ ಬಂಡವಾಳ ಹೂಡಿದ್ದ ‘ಲೈಕಾ’ ಸಂಸ್ಥೆಯೇ ‘ಇಂಡಿಯನ್ 2’ ನಿರ್ಮಾಣ ಮಾಡುತ್ತಿದೆ. ಸದ್ಯದಲ್ಲಿಯೇ ಚಿತ್ರದ ಮತ್ತಷ್ಟು ವಿಷಯಗಳು ಹೊರ ಬರಲಿವೆ.

Tags