ಸುದ್ದಿಗಳು

ಪ್ರಜ್ವಲ್ ಧರ್ಮ ಪತ್ನಿ ಬೆಳ್ಳಿ ತೆರೆಗೆ….! ‘ಇನ್ಸ್ ಪೆಕ್ಟರ್ ವಿಕ್ರಮ್’ಗೂ ಈಕೆ ಪತ್ನಿಯೇ??

ಇನ್ನೂ ನಿಗೂಢವಾಗಿಯೇ ಉಳಿದಿರುವ ಅರ್ಧಾಂಗಿ ರಾಗಿಣಿ ಪ್ರಜ್ವಲ್ ಪಾತ್ರ..!

ಬೆಂಗಳೂರು,ಸೆ.04: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ  ಅಭಿನಯಿಸುತ್ತಿರುವುದು ಈಗಾಗಲೇ ಗೊತ್ತಿರುವ ವಿಷಯ. ಒಂದರ  ಮೇಲೊಂದರಂತೆ ಅಚ್ಚರಿಯ ಸುದ್ದಿಗಳನ್ನು ನೀಡುತ್ತಿರುವ  ವಿಖ್ಯಾತ್ ಪಿಕ್ಚರ್ಸ್ ನಿರ್ಮಾಣ ತಂಡದವರು ಈಗೊಂದು ಹೊಸ ಸುದ್ದಿ ನೀಡಿದ್ದಾರೆ.

ಪತಿಗೆ ಜೊತೆಯಾದ ಪತ್ನಿ..

ಈಗ ಬಂದಿರುವ ಹೊಸ ಸುದ್ದಿ ಏನೆಂದರೆ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ರಾಮಚಂದ್ರ ಕೂಡ ‘ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ.  ಹೌದು, ನಿಜ ಜೀವನದ ದಂಪತಿ ಪ್ರಜ್ವಲ್ ದೇವರಾಜ್ ಮತ್ತು  ರಾಗಿಣಿ  ಚಂದ್ರನ್ ‘ಇನ್ಸ್ ಪೆಕ್ಟರ್ ವಿಕ್ರಂ’ನಲ್ಲಿ ಮೊದಲ ಬಾರಿಗೆ ಕ್ಯಾಮರಾ ಕಂಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಗಿಣಿ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆಯಂತೆ. ಕನ್ನಡದಲ್ಲಿ ಭಾವನಾ ಮೆನನ್ ಅವರ ಕೊನೆಯ ಚಿತ್ರ ‘ಚೌಕ. ಈ ಹಿಂದೆ ಭಾವನಾ ಹಾಗೂ ಪ್ರಜ್ವಲ್ ದೇವರಾಜ್ ‘ಚೌಕ’ ಚಿತ್ರದಲ್ಲಿ ಕಳೆದ ಬಾರಿ ಕಾಣಿಸಿಕೊಂಡಿದ್ದರು.. ಆದರೆ ಈ ಬಾರಿ ಪ್ರಜ್ವಲ್ ಗೆ ‘ಇನ್ಸ್ ಪೆಕ್ಟರ್ ವಿಕ್ರಮ್ ‘ಚಿತ್ರದಲ್ಲಿ ಭಾವನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ..

Related image

ಈ ಚಿತ್ರವನ್ನು ‘ಶ್ರೀ ನರಸಿಂಹ’ ನಿರ್ದೇಶಿಸಿದ್ದಾರೆ.  ಚಿತ್ರದಲ್ಲಿ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್  ‘ಭಗತ್ ಸಿಂಗ್ ಹೆಸರಿನ ಅತಿಥಿ ಪಾತ್ರಧಾರಿಯಾಗಿದ್ದರೆ ರಮೇಶ್ ಅರವಿಂದ್ ಗೆ ಖಳನಾಯಕನ ಪಾತ್ರ ದೊರೆತಿದೆ.. ರಮೇಶ್ ಈ ಹೊಸ ಅವತಾರದಲ್ಲಿ ಇನ್ನೂ ಹೇಗೆ ಮಿಂಚುತ್ತಾರೋ ಎಂಬುದು ಎಲ್ಲರಿಗೂ ಕುತೂಹಲದ ವಿಷಯ..

Image result for inspector vikram prajwal devraj

ರಾಗಿಣಿ ಅವರ ಪಾತ್ರ ಏನು?

ಕೆಲವು ನಿರ್ದೇಶಕರು ರಾಗಿಣಿ ಹಾಗೂ ಪ್ರಜ್ವಲ್ ದೇವರಾಜ್ ಜೋಡಿಯನ್ನು ಒಟ್ಟಾಗಿ ಪರದೆಯ ಮೇಲೆ ತೋರಿಸಬೇಕು ಎಂದುಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರಜ್ವಲ್ ದಂಪತಿಗಳು ಸಹ ಒಟ್ಟಾಗಿ ಕೆಲಸ ಮಾಡಲು ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ. ರಾಗಿಣಿ ನೃತ್ಯಪಟುವಾಗಿದ್ದು ಕೆಲವು ವಾಣಿಜ್ಯ ಜಾಹೀರಾತಿನಲ್ಲಿ ಸಹ ಅಭಿನಯಿಸಿದ್ದಾರೆ. ಈಗಾಗಲೇ ಈಕೆ ‘ರಿಷಭ ಪ್ರಿಯ’ ಎನ್ನುವ ಸಂಗೀತ ಪ್ರಧಾನ ಕಿರುಚಿತ್ರದಲ್ಲಿ ಕಾಣಿಸಿಕೊಂಡಿರುವ ಈಕೆ, ಈಗ ಪ್ರಜ್ವಲ್ ಅಭಿನಯದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ.  ಪ್ರಜ್ವಲ್ ದಂಪತಿಗಳು ಈ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಆದರೆ ರಾಗಿಣಿ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ… ಹಾಗಾಗಿ ಈ ವಿಚಾರ ಕುತೂಹಲಕಾರಿಯಾಗಿ ಉಳಿದಿದೆ. ಇದಕ್ಕೆ ಉತ್ತರ ಸಿಗಬೇಕಾದರೆ ಚಿತ್ರ ಬಿಡುಗಡೆಯಾಗಬೇಕು..

ಇನ್ನು ‘ಇನ್ಸ್ ಪೆಕ್ಟರ್ ವಿಕ್ರಮ್‘ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದ್ದು, ನವೀನ್ ಕುಮಾರ್ ಛಾಯಾಗ್ರಹಣ, ಸತೀಶ್ ಮತ್ತು ಶ್ರೀನಿವಾಸ್ ಅವರ ಕಲಾ ನಿರ್ದೇಶನವಿದೆ…

ಸುಹಾನಿ.ಬಡೆಕ್ಕಿಲ

Tags