ವೈರಲ್ ನ್ಯೂಸ್ಸುದ್ದಿಗಳು

ಇಂಟರ್ನೆಟ್ಗೂ ಬಂತಾ ಕರೋನಾ ಕಂಟಕ…!?

ವಿ ಆರ್ ಆಲ್ವೇಸ್ ಆ್ಯಕ್ಟಿವ್, ಸಿಸ್ಟಮ್ ಆಗಬಹುದು ಸ್ಲೋ ಡೌನ್..

ಕರೋನ ಕಂಟಕದಿಂದ ಪಾರಾಗಲು ದೇಶವೇ ತನ್ನೆಲ್ಲ ಕೆಲಸಗಳಿಗೆ ಬ್ರೇಕ್ ನೀಡಿ..ಮೂರು ವಾರ ರೋಡಿಗೆ ಇಳಿಯದಿರುವಂತೆ ಸೂಚನೆ ನೀಡಿದೆ. ಈಗಂತೂ ಮನೆಯಲ್ಲಿರೋಕೆ ಪ್ರಾಬ್ಲಂ ಅಥವಾ ಬೋರಿಂಗ್ ಅಂತ ಅನ್ನಿಸೋದೇ ಇಲ್ಲ..ಹೊರಗಡೆ ಆಟವಾಡಿಕೊಂಡು ಇರಬೇಕಾದ ಮಕ್ಕಳಿಗೂ ಈಗ ಮನೆಯಲ್ಲಿರುವುದೇ ಖುಷಿ. ಇದಕ್ಕೆಲ್ಲ ಕಾರಣ ಇಂಟರ್ನೆಟ್ ಅನ್ನುವ ವಲ್ಡ್ ವೈಲ್ಡ್ ಸಾಧನ.

ಕರೋನ ತಾಪತ್ರಯಕ್ಕೆ ದೇಶದ ಎಲ್ಲಾ ಪ್ರತಿಷ್ಠಿತ ಕಂಪನಿಗಳೂ ಸೇರಿದಂತೆ ಎಲ್ಲವೂ ಕ್ಲೋಸ್ ಆಗಿದೆ. ಆದರೆ ಅನೇಕರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಮ್ಮ ಕಂಪನಿಗಳು ಸೂಚಿಸಿದ್ದು, ಅದೆಷ್ಟೋ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಸೌಕರ್ಯಕ್ಕೂ ಕಾರಣ ಇದೇ ಇಂಟರ್ನೆಟ್.

ಇಂಟರ್ನೆಟ್ ಇದ್ದರೆ ಎಷ್ಟು ದಿನವಾದರೂ ಮನೆಯಲ್ಲಿಯೇ ಇದ್ದು ಬಿಡುತ್ತಾರೆ ಜನ..ಧಾರಾವಾಹಿ, ಗೇಮ್ಸ್, ಸಿನೆಮಾ, ಆಫೀಸ್ ಕೆಲಸಕ್ಕೆ ಬೇಕಾಗುವ ಸಾಫ್ಟ್‌ವೇರ್ ಇಂದ ಹಿಡಿದು ಪ್ರಪಂಚದ ಇಂಚಿಂಚೂ ಮಾಹಿತಿಯನ್ನೂ ಸಪ್ಲೆ ಮಾಡುತ್ತದೆ ಈ ಇಂಟರ್ನೆಟ್. ಆದರೆ ಈಗ ಈ ಇಂಟರ್ನೆಟ್ಗೂ ಸಂಕಷ್ಟ ಬಂದಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ. ಯೆಸ್, ದೇಶವೇ ಮೌನವಾಗಿರುವ ಈ ಸಂದರ್ಭದಲ್ಲಿ ಕಡಿಮೆ ಆಗದೇ ಹೆಚ್ಚುತ್ತಿರುವ ಇಂಟರ್ನೆಟ್ ಎಲ್ಲಾದರೂ ತನ್ನ ಕೆಲಸಕ್ಕೆ ಬ್ರೇಕ್ ಹಾಕಿಬಿಟ್ಟರೆ ಎಲ್ಲಾ ಸೌಲಭ್ಯಕ್ಕೂ ಕೊನೆ ಬೀಗ ಹಾಕಿದಂತೆಯೇ ಸರಿ.

ಈ ಅನುಮಾನಕ್ಕೆ ಕೊಡಬಹುದಾದ ಒಂದಷ್ಟು ಕಾರಣಗಳೂ ಇದೆ. ಹೌದು, ದೇಶದಲ್ಲಿ ಕಳೆದ ಒಂದು ವಾರದಿಂದ ಇಂಟರ್ನೆಟ್ ಮಾಮೂಲಿ ಬಳಕೆಗಿಂತ ಹೆಚ್ಚು ಬಳಕೆಯಾಗುತ್ತಿದೆ. ಹೆಚ್ಚಿನವರು ವರ್ಕ್ ಫ್ರಂ ಹೋಮ್ ಮಾಡುತ್ತಿರುವುದಕ್ಕೆ ಕಂಪನಿಗಳಲ್ಲಿ ಬಳಕೆಯಾಗಲ್ಪಡುವ ನೆಟ್ ಗಿಂತ ಹೆಚ್ಚು ಇಂಟರ್ನೆಟ್ ಬಳಕೆಯಾಗಲ್ಪಡುತ್ತವೆ. ಮೈಕ್ರೋಸಾಫ್ಟ್ ಸಿಸ್ಕೋ ಬಳಕೆದಾರರು ಹೆಚ್ಚಾಗಿದ್ದು, ನೆಟ್ ಫ್ಲಿಕ್ಸ್ ಸೇರಿದಂತೆ ಎಲ್ಲವೂ ತಮ್ಮ ಬ್ರಾಂಡ್ ವಿಡ್ತ್ ಕಡಿಮೆಗೊಳಿಸಲು ತೀರ್ಮಾನಿಸಿದೆ. ಇಂಟರ್ನೆಟ್ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಸ್ಪೀಡ್ ಸ್ಲೋ ಆಗಬಹುದೇ ಹೊರತು ಸೇವೆ ಯಾವ ಕಾರಣಕ್ಕೂ ಸ್ಟಾಪ್ ಆಗುವುದಿಲ್ಲ.

ಇಂಟರ್ನೆಟ್ ಯಾವಾಗಲೂ ಆ್ಯಕ್ಟಿವ್ ಆಗಿರುತ್ತದೆ.ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತೇವೆ. ಮುಂದೆ ಅಂತಹದ್ದೇನಾದರೂ ತೊಂದರೆ ಎದುರಾದರೆ ಅದನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಭಾರತದ ಇಂಟರ್ನೆಟ್ ಪ್ರೊವೈಡರ್ಸ್.

Tags