ಸುದ್ದಿಗಳು

ಇಸ್ಲಾಮಾಬಾದ್ ನ ಕ್ಲಬ್ ಮಾಲ್ ನಲ್ಲಿ ಕೆಜಿಎಫ್ ಹವಾ!!

ಮುಂಬೈ,ಜ.11: ಕೆಜಿಎಫ್ ಹವಾ ಭಾರತದಲ್ಲಿ ಮಾತ್ರವಲ್ಲ, ಈಗ ಹೊರ ದೇಶಗಳಲ್ಲೂ ಪಸರಿಸಿದೆ..ಕನ್ನಡ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದು ಇದೇ ಮೊದಲೇನಲ್ಲ. ಆದರೆ ಪಾಕಿಸ್ತಾನದಲ್ಲಿ ಕೆಜಿಎಫ್ ಬಿಡುಗಡೆಯಾಗಿದೆ ಅಂದರೆ ಆಶ್ಚರ್ಯಕರ ಸಂಗತಿ.. ಪಾಕಿಸ್ತಾನದಲ್ಲೂ ಬಿಡುಗಡೆಯಾಗುವ ಮೂಲಕ ಚಂದನವನದ ಇತಿಹಾಸದಲ್ಲೇ ಯಾವ ಚಿತ್ರಗಳು ನಿರ್ಮಿಸದ ದಾಖಲೆಯನ್ನು ಮಾಡಿದೆ.

Image result for kgf in pakistan

IMGC ಬ್ಯಾನರ್ ಅಡಿಯಲ್ಲಿಕೆಜಿಎಫ್

ಪಾಕ್ ನಲ್ಲಿ ಕನ್ನಡದ ಸಿನಿಮಾ ಇದೇ ಮೊದಲು ಬಿಡುಗಡೆಯಾಗಿ ದಾಖಲೆಯನ್ನೇ ನಿರ್ಮಿಸಿದೆ.. IMGC ಬ್ಯಾನರ್ ಅಡಿಯಲ್ಲಿ ‘ಕೆಜಿಎಫ್’ ಹಿಂದಿ ಡಬ್ಬಿಂಗ್ ಬಿಡುಗಡೆಯಾಗುತ್ತಿದ್ದು ಸಿನಿಪ್ರೇಮಿಗಳು ಮುಂಗಡ ಟಿಕೆಟ್ ಬುಕಿಂಗ್ ಕೂಡಾ ಆರಂಭಿಸಿದ್ದಾರೆ. IMGC ಬ್ಯಾನರ್ ನಲ್ಲಿ ‘ಥಗ್ಸ್​ ಆಫ್ ಹಿಂದುಸ್ಥಾನ್’ ಹಾಗೂ 2.O ಚಿತ್ರ ಬಿಡುಗಡೆಯಾಗಿತ್ತು. ಉತ್ತಮ ಪ್ರದರ್ಶನ ಕಂಡಿತ್ತು

ಇನ್ನು ಇಸ್ಲಾಮಾಬಾದ್ ​ನ ಕ್ಲಬ್ ಮಾಲ್​​​ ನಲ್ಲಿ ಇಂದು ರಾತ್ರಿ 9 ಗಂಟೆಗೆ ‘ಕೆಜಿಎಫ್’ ಮೊದಲ ಪ್ರದರ್ಶನ ಕಾಣಲಿದ್ದು ಯಶ್ ಹವಾ ಪಾಕಿಸ್ತಾನದಲ್ಲೂ ಜೋರಾಗಿ ಅಬ್ಬರಿಸಲಿದೆ..

#kgf #bollywood #yash #pakistan

Tags