ಸುದ್ದಿಗಳು

ಪಿಗ್ಗಿ ನಟಿಸಿರುವ ‘ಈಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದ ಟ್ರೇಲರ್ ಬಿಡುಗಡೆ

ಹಾಲಿವುಡ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿರುವ ಬಾಲಿವುಡ್ ಬೆಡಗಿ

ನವೆಂಬರ್, 03: ರೆಬೆಲ್ ವಿಲ್ಸನ್ ಅವರ ‘ಈಸಂಟ್  ಇಟ್ ರೊಮ್ಯಾಂಟಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ  ನಟಿಸಿದ್ದು, ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ. ರೊಮ್ಯಾಂಟಿಕ್ ಕಾಮಿಡಿಯ ಸುತ್ತಾ ಸುತ್ತುತ್ತದೆ.

ಟ್ರೈಲರ್ ನಲ್ಲಿ ನಟಾಲಿಯಾ ಪಾತ್ರದಲ್ಲಿ ವಿಲ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆ ತನ್ನದೇ ಆದ ಪ್ರಣಯ ಲೋಕದಲ್ಲಿ ಕನಸು ಕಾಣುತ್ತಿರುತ್ತಾಳೆ. ಯಾವುದೋ ಒಂದು ಸಂದರ್ಭದಲ್ಲಿ ಆಕೆಗೆ ಎಚ್ಚರವಾಗಿ ವಾಸ್ತವಕ್ಕೆ ಬಂದಾಗ ತಾನು  ಪ್ರಣಯದ ಹಾಸ್ಯರಸದಲ್ಲಿ ಸಿಕ್ಕಿಕೊಂಡಿರುವುದು ಅರಿವಿಗೆ ಬರುತ್ತದೆ. 

ವ್ಯಾಲೆಂಟೈನ್ಸ್ ಡೇ ದಿನದಂದು ಚಿತ್ರ ಬಿಡುಗಡೆ

ಈ ಪರ್ಯಾಯ ಜಗತ್ತಿನಲ್ಲಿ ತಾನು ಇಷ್ಟಪಟ್ಟ ಎಲ್ಲವನ್ನೂ ಅವಳು ಪಡೆದುಕೊಂಡಿರುತ್ತಾಳೆ. ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ಬ್ಲೇಕ್ ಪಾತ್ರದಲ್ಲಿ ನಟಿಸಿರುವ ಲಿಯಾಮ್ ಹೆಮ್ಸ್ವರ್ತ್ ಒಬ್ಬ ಉತ್ತಮ ಸಂಭಾಷಣೆಕಾರನೆಂಬುದು ಸ್ಪಷ್ಟವಾಗುತ್ತದೆ. ಚಲನಚಿತ್ರದ ಟ್ರೈಲರ್ ನಲ್ಲಿ, ಆಕೆ ಪ್ರತಿ ತುಣುಕಿನಲ್ಲೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾಳೆ. ನಟಾಲಿಯಾ ಮತ್ತು ಬ್ಲೇಕ್ ಪ್ರತಿ ಫ್ರೇಮ್ ನಲ್ಲಿ ಶ್ರೇಷ್ಠ ಪ್ರಣಯ ಹಾಸ್ಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

‘ಈಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಆಡಮ್ ಡಿವೈನ್, ಮತ್ತು ಬೆಟ್ಟಿ ಗಿಲ್ಪಿನ್ ನಟಿಸಿದ್ದಾರೆ. ‘ಪಿಚ್ ಪರ್ಫೆಕ್ಟ್’, ‘ಬಂಪರ್’ ಮತ್ತು ‘ಫ್ಯಾಟ್ ಆಮಿ’ ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಆಡಮ್ ಮತ್ತು ರೆಬೆಲ್ ಮತ್ತೊಮ್ಮೆ ಈ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಡ್ ಸ್ಟ್ರಾಸ್-ಶುಲ್ಸನ್ ನಿರ್ದೇಶನ ಮಾಡಿರುವ  ಚಿತ್ರ 2019ರಲ್ಲಿ ವ್ಯಾಲೆಂಟೈನ್ಸ್ ಡೇ ದಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Tags