ಸುದ್ದಿಗಳು

‘ಜಾನಕಿ ರಾಗ’: ಖ್ಯಾತ ಗಾಯಕಿ ಎಸ್ ಜಾನಕಿ ಅವರಿಗೆ ಸಂಗೀತ ನಮನ

‘ಕಾಫಿ ಬೈಟ್ ಮೀಡಿಯಾ ಹೌಸ್’ ನಿಂದ ನೆರವೇರುತ್ತಿರುವ ಕಾರ್ಯಕ್ರಮ

ಬೆಂಗಳೂರು.ಏ.20: ಸತತ ಆರು ದಶಕಗಳ ಕಾಲ ಭಾರತೀಯ ಚಿತ್ರ ರಸಿಕರಿಗೆ ಗಾಯನದ ಮೂಲಕ ರಸದೌತಣ ಬಡಿಸಿದ ‘ಗಾನಕೋಗಿಲೆ’ ಎಸ್.ಜಾನಕಿ ಅವರ ಜನ್ಮದಿನದ ಪ್ರಯುಕ್ತ(ಏ.23) ‘ಜಾನಕಿ ರಾಗ’ ಎಂಬ ಸಂಗೀತ ನಮನ (ಏ.26) ಕಾರ್ಯಕ್ರಮವು ನಡೆಯಲಿದೆ.

ಹೌದು, ಬರುವ ದಿನಾಂಕ 26 ರಂದು ‘ಜಾನಕಿ ರಾಗ’ ಎಂಬ ಸಂಗೀತ ಕಾರ್ಯಕ್ರಮವು ನಡೆಯುತ್ತಿದೆ. ಕಾಫಿ ಬೈಟ್ ಮೀಡಿಯಾ ಹೌಸ್ ನ ಸಂಸ್ಥಾಪಕಿ ಹಾಗೂ ಎಸ್.ಜಾನಕಿಯವರ ಅಭಿಮಾನಿಯಾಗಿರುವ ಮಾನಸ ಶರ್ಮಾ ಅವರ ಕಾಫಿ ಬೈಟ್ ತಂಡದ ಬಹುದಿನದ ಕನಸಿನ ಯೋಜನೆ ಇದಾಗಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

“ಈಗಾಗಲೇ ಆರು ದಶಕಗಳ ಕಾಲ ಸಾಕಷ್ಟು ಹಾಡುಗಳನ್ನು ಹಾಡಿರುವ ಗಾಯಕಿ ಎಸ್.ಜಾನಕಿ ಎಂಬ ದೈತ್ಯ ಪ್ರತಿಭೆಯೇ ಒಂದು ರಾಗವಾಗಿ ಪರಿವರ್ತನೆಗೊಂಡರೆ ಹೇಗಿರಬಹುದು ಎನ್ನುವ ಯೋಚನೆ ಬಂದಾಗಲೇ ರೂಪುಗೊಂಡಿದ್ದೆ ‘ಜಾನಕಿ ರಾಗ!’ ಎಂದು ಹೇಳುತ್ತಾರೆ ಕಾಫಿ ಬೈಟ್ ​ನ ಸಹ-ಸಂಸ್ಥಾಪಕಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಸ್ಪರ್ಶಾ ಆರ್.ಕೆ.

 

ಅಂದ ಹಾಗೆ ಈ ಕಾಫಿ ಬೈಟ್ ಮೀಡಿಯಾ ಹೌಸ್ ಅನ್ನು ಆರಂಭಿಸಿದವರು ಮಾನಸಾ ಶರ್ಮ ಮತ್ತು ಸ್ಪರ್ಶ ಆರ್ ಕೆ ಎಂಬ ಯುವತಿಯರು. ಹೀಗಾಗಿ ಕ್ಯಾಮೆರಾದ ಹಿಂದೆ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ಸದುದ್ದೇಶ ಈ ಸಂಸ್ಥೆಗಿದೆ. ವಿಶೇಷವೆಂದರೆ, ಈಗಾಗಲೇ ಈ ಕಾಫಿಬೈಟ್ ಮೀಡಿಯಾ ಅನೇಕ ಕಿರುಚಿತ್ರಗಳನ್ನು, ಸಂಗೀತ ವಿಡಿಯೋಗಳನ್ನು ನಿರ್ಮಿಸಿದೆ.

ಸಿನಿಮಾ ರಂಗದ ಎಲ್ಲ ಸಾಧಕಿಯರಿಗೆ ಗೌರವವನ್ನು ಸೂಚಿಸಲು, ಅವರ ಅಮೂಲ್ಯ ಕೊಡುಗೆಯನ್ನು ಕೊಂಡಾಡಲು ‘ಜಾನಕಿ ರಾಗ ‘ ಎಂಬ ಕಾರ್ಯಕ್ರಮದ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ ಈ ಯುವತಿಯರು.

ಇನ್ನು ಈ ಸಂಗೀತ ಕಾರ್ಯಕ್ರಮದಲ್ಲಿ ಹಿರಿಯ ತಲೆಮಾರಿನೊಂದಿಗೆ ಕಿರಿಯ ತಲೆಮಾರು ಉತ್ಸಾಹದಿಂದ ಭಾಗವಹಿಸಬೇಕೆಂಬುದೇ ಕಾಫಿ ಬೈಟ್ ಮೀಡಿಯಾದ ಉದ್ದೇಶವಾಗಿದ್ದು, ಪಾಪ ಪಾಂಡು ಧಾರಾವಾಹಿ ಖ್ಯಾತಿಯ ಶಾಲಿನಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಬರುವ ಏಪ್ರಿಲ್ 26, ಎಡಿಎ ರಂಗಮಂದಿರದಲ್ಲಿ ಸಂಜೆ 6 ರಿಂದ 9 ರವರೆಗೆ ಕಾರ್ಯಕ್ರಮವಿದೆ. ಈ ಸಂಗೀತ ನಮನದಲ್ಲಿ ಸ್ಪರ್ಶ ಆರ್.ಕೆ ಸೇರಿದಂತೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 12ನ ವಿನ್ನರ್ ಅನ್ವಿತ ಶ್ರೀಧರ್, ಜಾನಕಿ ಅವರ ಒಂದಷ್ಟು ಆಯ್ದ ಹಾಡುಗಳನ್ನು ತಮ್ಮದೇ ರೀತಿಯಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

ಅಂದ ಹಾಗೆ ಇದೊಂದು ಈ ಕ್ರೌಡ್ ಫಂಡೆಡ್ ಅಂದರೆ ಜನರೇ ಆಯೋಜಿಸಿದ ಕಾರ್ಯಕ್ರಮ.. ಟಿಕೆಟ್ ಕೊಳ್ಳುವುದು ಅವಶ್ಯಕ. ಸ್ಪರ್ಶ ಮತ್ತು ಅನ್ವಿತಾ (ಸರಿಗಮಪ ಲಿಟ್ಲ್ ಚಾಂಪಿಯನ್ ಸ್ಪರ್ಧೆಯ ವಿಜೇತೆ) ಅವರು ವಿಕಾಸ್ ವಸಿಷ್ಠ ಅವರೊಂದಿಗೆ ಹಾಡುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದ ಟಿಕೆಟ್ ಗಳನ್ನು ಬುಕ್ ಮೈ ಶೋ ಮೂಲಕವೂ ಬುಕ್ ಮಾಡಬಹುದು.

ಬುಕ್ ಮೈ ಶೋ ಲಿಂಕ್ : https://in.bookmyshow.com/events/janaki-raga/ET00094959

ಇನ್ನು ಗಾಯಕಿ ಎಸ್ ಜಾನಕಿಯವರ ಬಗ್ಗೆ ಹೇಳಬೇಕೆಂದರೆ, ಇವರು ಚಿತ್ರಗೀತೆ, ಭಕ್ತಿಗೀತೆ ಸೇರಿದಂತೆ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದು, ತಮ್ಮ 80ನೇ ವಯಸ್ಸಿನಲ್ಲಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ.

“ಹಾಡಿದ್ದು ಸಾಕಾಗಿದೆ, ಹಾಡಬೇಕಾದವರು ಹಲವರಿದ್ದಾರೆ. ಹೊಸ ತಲೆಮಾರುಗಳಿಗೆ ದಾರಿ ಮಾಡಿಕೊಡುವುದು ನನ್ನ ಕರ್ತವ್ಯ ಎನ್ನುವ ಮೇರು ವ್ಯಕ್ತಿತ್ವದ ಈ ಗಾಯಕಿಯನ್ನು ನೆನಪಿಸಿಕೊಳ್ಳುತ್ತಾ ಕ್ಷಣ ಕಾಲ ಅವರ ಹಾಡುಗಳನ್ನು ಗುನುಗಿಕೊಳ್ಳುವುದು ಈ ತಲೆಮಾರಿಗೆ ಅತ್ಯಗತ್ಯ. ಹೀಗಾಗಿ ಈ ಕಾರ್ಯಕ್ರಮಕ್ಕೆ ತಪ್ಪದೇ ಭಾಗವಹಿಸಬೇಕಾಗಿದೆ.

ಸಿನಿಮಾರಂಗಕ್ಕೆ ‘ಟಕ್ಕರ್’ ಕೊಡಲು ಬಂದ ನವ ನಟ ಮನೋಜ್

#jaanakiraaga, #program. #balkaninews #filmnews, #kannadasuddigalu, #sparshark

Tags