ಸುದ್ದಿಗಳು

ಖಿನ್ನತೆಯೊಂದಿಗೆ ತನ್ನ ಹೋರಾಟವನ್ನು ವಿವರಿಸಿದ ಜಡಾ ಪಿಂಕೆಟ್ ಸ್ಮಿತ್…!

ಅಮೇರಿಕನ್ ನಟಿ, ನಾಯಕಿ ಜಡಾ ಪಿಂಕೆಟ್ ಸ್ಮಿತ್

ಬೆಂಗಳೂರು, ಡಿ.15: “ನೀವು ಭಾವನೆಗಳ ಮೇಲೆ ನಿಯಂತ್ರಣ ಹೊಂದಿದ್ದಾಗ, ಆಲೋಚನೆಗಳೇ ನಿಮ್ಮನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತವೆ” ಎಂದು ಅಮೆರಿಕದ ನಟಿ ಜಾಡಾ ಪಿಂಕೆಟ್ ಸ್ಮಿತ್ ತಮ್ಮ ತೀವ್ರ ಖಿನ್ನತೆಯ ಹೋರಾಟದ ಬಗ್ಗೆ ವಿವರಿಸಿದ್ದಾರೆ.

‘ದಿ ಗರ್ಲ್ಸ್ ಟ್ರಿಪ್’ ತಾರೆ, ತನ್ನ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಲು ಬಂದಾಗ ಎಂದಿಗೂ ಹಿಂಜರಿದಿರಲಿಲ್ಲ. ತನ್ನ ಫೇಸ್ ಬುಕ್ ಖಾತೆಯಲ್ಲಿ ರೆಡ್ ಟೇಬಲ್ ಟಾಕ್‍ ಸರಣಿಯನ್ನು “ವರ್ಷಗಳಿಂದ” ನೋಡುತ್ತಿದ್ದು, ಖಿನ್ನತೆಗೆ ಹೇಗೆ ಒಳಗಾದೆ ಎಂಬುದನ್ನು ಹೇಳಿದ್ದಾರೆ.

ಕೇಟ್ ಸ್ಪೇಡ್ ಮತ್ತು ಆಂಥೋನಿ ಬೌರ್ಡೆನ್ ಆತ್ಮಹತ್ಯೆ ನಂತರ ಖಿನ್ನತೆಗೆ ಒಳಗಾದ ನಟಿ ಜಡಾ

ವೀಡಿಯೋ ತುಣುಕೊಂದರಲ್ಲಿ ಜಡಾ ತನ್ನ ಮಗಳು ವಿಲ್ಲೋ ಸ್ಮಿತ್ ಮತ್ತು ತಾಯಿ ಆಡ್ರಿಯೆನ್ ಬ್ಯಾನ್ಫೀಲ್ಡ್-ನಾರ್ರಿಸ್ ಬಗ್ಗೆ ಮಾತನಾಡಿದ್ದಾರೆ. ಖಿನ್ನತೆಗೆ ಒಳಗಾದ ಸಮಯದಲ್ಲಿ, ಬೆಳಿಗ್ಗೆ ಎಚ್ಚರಗೊಳ್ಳುವುದೇ ದಿನದ “ಕೆಟ್ಟ ಭಾಗ” ಎಂದು ಭಾವಿಸುತ್ತಿರುವುದಾಗಿ ಪತ್ರಿಕೆಯೊಂದು ದೃಢಪಡಿಸಿದ್ದಾರೆ.

“ನಾನು ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದೆ” ಎಂದು ಜಡಾ ಹೇಳಿದರು. “ಮತ್ತು ನಾನು ವರ್ಷಗಳಿಂದ ಹೋರಾಡಿದ ಸಂಗತಿಯೆಂದರೆ ಬೆಳಿಗ್ಗೆ ಎಚ್ಚರಗೊಳ್ಳುವುದು ದಿನದ ಅತ್ಯಂತ ಕೆಟ್ಟ ಭಾಗವಾಗಿತ್ತು” ಎಂದಿದ್ದಾರೆ. ಪ್ರತಿದಿನವೂ ಹಲವು ಗಂಟೆಗಳೇ ತೆಗೆದುಕೊಳ್ಳುತ್ತಿತ್ತು ಎಂದವರು ವಿವರಿಸಿದರು.

ಇದಕ್ಕೂ ಮೊದಲು ಜೂನ್ ನಲ್ಲಿ, ಕೇಟ್ ಸ್ಪೇಡ್ ಮತ್ತು ಆಂಥೋನಿ ಬೌರ್ಡೆನ್ ಆತ್ಮಹತ್ಯೆ ಮಾಡಿಕೊಂಡ ನಂತರ, ಜಡಾ ತನ್ನ ಮಾನಸಿಕ ಆರೋಗ್ಯದ ಹೋರಾಟ ಪ್ರಾರಂಭವಾಯಿತು.

ಬೌರ್ಡೆನ್ ಮತ್ತು ಸ್ಪೇಡ್ ನ ಸಾವಿನ ನಂತರ ನಾನು ಅಂತಹ ಹತಾಶೆಯಲ್ಲಿದ್ದೆ ಮತ್ತು ಅದೇ ನಿಧಾನವಾಗಿ ನನ್ನ ಭಾವನೆಗಳು ನನ್ನನ್ನು ನಿಯಂತ್ರಣ ಮಾಡತೊಡಗಿತು ಎಂದು ಅವರು ಬರೆದಿದ್ದಾರೆ. ವರ್ಷಗಳ ಕಾಲ ನಾನು ಗುಣಮುಖಳಾಗಲು ಬಹಳಷ್ಟು ಸಮಯವನ್ನು ಕಳೆದಿದ್ದೇನೆ. ಆದೆಷ್ಟೋ ರಾತ್ರಿಗಳಲ್ಲಿ ನಾನು ಮನಸ್ಸನ್ನು ಅರಿತುಕೊಂಡಿದ್ದೇನೆ ಮತ್ತು ಹೃದಯ ಅಸಾಧಾರಣ ಆತ್ಮದ ಅಡಿಪಾಯವಿಲ್ಲದೇ ಬಹಳ ಸೂಕ್ಷ್ಮವಾಗಿರುತ್ತದೆ” ಎಂದಿದ್ದಾರೆ.

Tags

Related Articles