ಸುದ್ದಿಗಳು

ಪಾಕ್ ಮೊದಲ್ಗೊಂಡು ಜಗತ್ತಿನಾದ್ಯಂತ ‘ಜಗತ್ ಕಿಲಾಡಿ’ಗೆ ದೊರೆತ ಮನ್ನಣೆ!!!

ಜಗತ್ ಕಿಲಾಡಿ’ಗೆ ಪಾಕ್ ಅಭಿಮಾನಿಯೊಬ್ಬ ಫಿದಾ!!

ಬೆಂಗಳೂರು,ನ.14: ‘ಜಗತ್ ಕಿಲಾಡಿ’ ಚಿತ್ರ ದೀಪಾವಳಿ ಹಬ್ಬದ ಪ್ರಯುಕ್ತ  ಕಳೆದ ವಾರವೇನೋ ತೆರೆಗೆ ಬಂದಿದೆ.. ಆರವ್ ಬಿ. ಧೀರೇಂದ್ರ ಆಕ್ಷನ್-ಕಟ್ ಹೇಳಿದ ‘ಜಗತ್ ಕಿಲಾಡಿ’ಯಲ್ಲಿ  ನಟ ನಿರಂಜನ್ ಶೆಟ್ಟಿ ಬರೋಬ್ಬರಿ 15 ಪಾತ್ರಗಳನ್ನು ನಿಭಾಯಿಸಿದ್ದಾರೆ. ಈಗಾಗಲೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡನೇ ವಾರಕ್ಕೆ‘ಜಗತ್ ಕಿಲಾಡಿ’ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. ‘ಜಾಲಿಡೇಸ್’, ‘ಕೇಸ್ ನಂ.18/9’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ನಿರಂಜನ್ ಗೆ ಈ ಸಿನಿಮಾದ ಮೇಲೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ..

Image result for ಜಗತ್ ಕಿಲಾಡಿ

ಪಾಕಿಸ್ತಾನದಲ್ಲೂ ಜಗತ್ ಕಿಲಾಡಿಹವಾ!!

ಈಗಾಗಲೇ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದ ‘ಜಗತ್ ಕಿಲಾಡಿ’ ಚಿತ್ರ ದೇಶ – ವಿದೇಶದವರೆಗೂ ತಲುಪುತ್ತಿದೆ ಎಂದರೆ ನೀವು ನಂಬಲೇ ಬೇಕು.. ಹೌದು, ನಮ್ಮ ನೆರೆ ದೇಶ ಎನಿಸಿಕೊಂಡಿರುವ ಪಾಕಿಸ್ತಾನಕ್ಕೂ ‘ಜಗತ್ ಕಿಲಾಡಿ’ ಚಿತ್ರದ ಹವಾ ತಲುಪಿದ್ದು ಪಾಕಿಸ್ತಾನದಲ್ಲಿ ನೆಲೆಸಿರುವ ಅಪ್ಪಟ ಕನ್ನಡ ಪ್ರೇಮಿಯೊಬ್ಬ ತನ್ನ ಯೂಟ್ಯೂಬ್ ನಲ್ಲಿ ಜಗತ್ ಕಿಲಾಡಿ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾನೆ..

ಅಭಿಮಾನಿ ಹೇಳಿದ್ದೇನು?

“ಜಗತ್ ಕಿಲಾಡಿ” ಕನ್ನಡ ಟ್ರೇಲರ್ ತುಂಬಾ ಚೆನ್ನಾಗಿದೆ.. ಒಮ್ಮೆ ನೀವೆಲ್ಲರೂ ಇದನ್ನು ನೋಡಲೇಬೇಕು.. ಛಾಯಾಗ್ರಾಹಣ ಹಾಗೂ  ಚಿತ್ರಕಥೆ ನನಗೆ ತುಂಬಾ ಇಷ್ಟವಾಯಿತು.. ಚಿತ್ರದ ಛಾಯಾಗ್ರಹಣ ಮತ್ತು ಚಿತ್ರದ ಲೊಕೆಶನ್ ಗಳು ಸಿಕ್ಕಾಪಟ್ಟೆ ಚೆನ್ನಾಗಿವೆ… ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ..  ಟ್ರೇಲರ್ ಹೀಗಿದ್ದರೆ ಇನ್ನು ಸಿನಿಮಾ ಹೇಗಿರಬಹುದು? ನೀವೆಲ್ಲರೂ ಸಿನಿಮಾ ನೋಡಿ ನಿಜವಾಗಿಯೂ ಇಷ್ಟಪಡುತ್ತೀರಿ, ನನಗೆ ತುಂಬಾ ಇಷ್ಟವಾಯ್ತು.. ಈ ಚಿತ್ರವು ನಿಮಗೆ ಮನೋರಂಜನೆ ಕೊಡುವುದು ಖಂಡಿತಾ ಎಂದು ‘ಜಗತ್ ಕಿಲಾಡಿ’ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾನೆ ಈ ಪಾಕಿಸ್ತಾನಿ..

ಚಿತ್ರದ ಬಗ್ಗೆ

ಇನ್ನುಳಿದಂತೆ ಹೇಳುವುದಾದರೆ ‘ಜಗತ್ ಕಿಲಾಡಿ’ ಚಿತ್ರದ, ಸಿನಿಮಾದ ಕಥೆ ಅದ್ಬುತವಾಗಿದೆ. ಹಣಕ್ಕಾಗಿ ಮನುಷ್ಯ ಯಾವೆಲ್ಲ ವೇಷ ತೊಡುತ್ತಾನೆ? ಜನರನ್ನು ಹೇಗೆಲ್ಲ ವಂಚಿಸುತ್ತಾನೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ತನ್ನ ಬುದ್ಧಿವಂತಿಕೆಯಿಂದ ಜನರನ್ನು ವಂಚಿಸುವ ಕಥಾನಾಯಕ, 350 ರೂ.ಗಳಿಂದ ನೂರು ಕೋಟಿ ರೂ.ವರೆಗೂ ವಂಚನೆ ಮಾಡುತ್ತಾನೆ. ಸದ್ಯ ರಿಲೀಸ್ ಆಗಿರುವ ಚಿತ್ರದ ಆಡಿಯೋ ಮತ್ತು ಟ್ರೇಲರ್​ಗೆ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.

Related image

ಅಮಿತಾಗೆ ಜಗತ್ ಕಿಲಾಡಿಐದನೇ ಚಿತ್ರ

ನಿರಂಜನ್​ಗೆ ನಾಯಕಿಯಾಗಿ ಕರಾವಳಿಯ ಬೆಡಗಿ ಅಮಿತಾ ಕುಲಾಲ್ ಕಾಣಿಸಿಕೊಂಡಿದ್ದಾರೆ. ಸದ್ಯ ಎರಡು ಚಿತ್ರಗಳನ್ನು ಬಿಡುಗಡೆಗೆ ಇಟ್ಟುಕೊಂಡು, ಇನ್ನೆರಡು ಚಿತ್ರಗಳಲ್ಲಿ ಯಶಸ್ವಿಯಾಗಿ ಅಭಿಯಿಸಿರುವ ಅಮಿತಾಗೆ ಜಗತ್ ಕಿಲಾಡಿ’ ಐದನೇ ಚಿತ್ರ..  ಜಯಣ್ಣ ಫಿಲಂಸ್ ಮೂಲಕ ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಯಶಸ್ವಿಯಾಗಿ ಚಿತ್ರ ಮುನ್ನುಗ್ಗುತ್ತಿದೆ.. ಕನಿಷ್ಟ ಐವತ್ತು ದಿನಗಳ ಸತತ ಪ್ರದರ್ಶನ ‘ಜಗತ್ ಕಿಲಾಡಿ’ ಕಾಣಲೆಂದು ಈಗಾಗಲೇ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ಅನೇಕ ರಸಿಕರು ಬಯಸುತ್ತಿದ್ದಾರೆ..

Tags