ಸುದ್ದಿಗಳು

ಟೈಟಲ್ ಮತ್ತು ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದ ಹೊಸಬರ ಸಿನಿಮಾ

ಸಿನಿಮಾ ರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಯೋಚನೆ, ಯೋಜನೆಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡವೊಂದು ವಿಭಿನ್ನ ಶೀರ್ಷಿಕೆ ಮತ್ತು ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ.

‘ಜಗವೇ ಒಂದು ನಾಟಕ ರಂಗ’.. ಇದೊಂದು ಹೊಸಬರ ಹೊಸತನವಿರುವ ಸಿನಿಮಾ. ಅತೀ ಶೀಘ್ರದಲ್ಲಿಯೇ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಚಿತ್ರಕ್ಕೆ ನಾಯಕನಟರಾಗಿ ಅನಿಲ್ ಸಿದ್ದು ನಟಿಸುತ್ತಿದ್ದಾರೆ.

ಬಡತನದಿಂದ ಮೇಲೆ ಬಂದ ನಾಯಕ ಅನಿಲ್ ಸಿದ್ದು, ಇದೀಗ ಒಟ್ಟೊಟ್ಟಿಗೆ ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಇವರು ‘ಮಮ್ತಾಜ್’, ‘ಸಿಲಿಕಾನ್ ಸಿಟಿ’ ಹಾಗೂ ‘ಎ+’ ಸೇರಿದಂತೆ ತಮಿಳಿನಲ್ಲಿ ಮಣಿರತ್ನಂ ನಿರ್ದೇಶನದ ‘ಕಾಟ್ರೂ ವೆಲೆಯಾಡು’ದಲ್ಲಿ ಬಣ್ಣದ್ದರು. ಇದೀಗ ‘ಜಗವೇ ಒಂದು ನಾಟಕ ರಂಗ’ ಹಾಗೂ ತಮಿಳಿನಲ್ಲಿ ‘ಕಾಚೈ ಕಟ್ಟಿ’ ಚಿತ್ರಗಳಲ್ಲಿ ನಟಿಸಲು ಸಿದ್ದವಾಗಿದ್ದಾರೆ.

ಈ ಚಿತ್ರಕ್ಕೆ ನವ ನಿರ್ದೇಶಕ ಹರಿವರಾಸನಂ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇವರು ಚಿತ್ರರಂಗದಲ್ಲಿ 12 ವರ್ಷಗಳಿಂದ 22 ಸಿನಿಮಾಗಳಿಗೆ ಸಹ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಆ ಎಲ್ಲಾ ಅನುಭವಗಳನ್ನು ಕಲೆ ಹಾಕಿಕೊಂಡು, ಈ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ.

ಸದ್ಯ ತನ್ನ ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಇನ್ನಷ್ಟು ಮಾಹಿತಿಗಳನ್ನು ಚಿತ್ರತಂಡದ ಸದ್ಯದಲ್ಲಿಯೇ ನೀಡಲಿದೆ. ಇನ್ನು ಈ ಚಿತ್ರವನ್ನು ಕುಮಾರ್ ನಾಯ್ಡು ಪ್ರೊಡಕ್ಷನ್ ನಡಿಯಲ್ಲಿ, ಕುಮಾರ್ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.

ಖಂಡಿತಾ ಕನ್ನಡದಲ್ಲೂ ನಟಿಸುತ್ತೇನೆ: ನಟ ಪ್ರಭಾಸ್

#JagaveOnduNatakaRanga #AnilSiddu  #kannadafilm, #kannadamovie, #kannadanews

Tags