ಸುದ್ದಿಗಳು

ಕಲಿಯಲು ಕರುಣೆಯಿಲ್ಲದೆ ಬಿಡಬೇಕು!!

ಜಗ್ಗೇಶ್ ಟ್ವೀಟ್ ಏನು?

ಬೆಂಗಳೂರು,ನ.07: ಸದಾ ಟ್ವಿಟರ್ ನಲ್ಲಿ ಆ್ಯಕ್ಟಿವ್ ಇರುವ ಜಗ್ಗೇಶ್ ಈಗ ಪೋಷಕರಿಗೆ ಒಂದು ವಿಶೇಷ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಒಂದು ಕಿವಿ ಮಾತು ಹೇಳಿದ್ದಾರೆ.. ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳಸ ಬೇಡಿ. ಅವರಿಗೆ ಸ್ವತಂತ್ರವಾಗಿ ಬದುಕುವುದನ್ನು ಕಲಿಸಿ. ಅತಿಯಾದ ಪ್ರೀತಿ ಮುಂದೆ ಅವರ ಜೀವನಕ್ಕೆ ಅಡ್ಡಿಯಾಗುತ್ತದೆ..

ಇಂತಹ ಘಟನೆಗಳು ನಮ್ಮ ಕಣ್ಣ ಮುಂದೆ ಬಹಳಷ್ಟು ಆಗಿ ಹೋಗುವುದನ್ನು ನಾವು ನೋಡಿದ್ದೇವೆ.. ಸ್ವತಂತ್ರವಾಗಿ ಬದುಕಲು ಬಿಟ್ಟಾಗ ಅವರಿಗೆ ಜೀವನವೇನೆಂಬುದು ತಿಳಿಯುತ್ತದೆ.. ನನಗೂ ನಮ್ಮ ತಂದೆ ಹೀಗೆ ಮಾಡಿದ್ದರು, ಹಾಗೂ ನನ್ನ ಮಕ್ಕಳಿಗೆ ಹೀಗೆ ಜೀವನಕಲಿಯಲು ಬಿಟ್ಟಿರುವುದು.. ಇನ್ನು ಹಣ ಕೊಡುವ ಬದಲು ಮರವೇರಿ ಕಿತ್ತು ತಿನ್ನಲು ಕಲಿಸಬೇಕು.. ಎಂದು ಜಗ್ಗೇಶ್ ಹೇಳಿದ್ದಾರೆ..

Related image

ಜಗ್ಗೇಶ್ ಟ್ವೀಟ್

“ಮಕ್ಕಳ ಮುದ್ದುಮಾಡಿ ಭುಜದ ಮೇಲೆ ಹೊತ್ತು ತಿರುಗಿದರೆ ನಡೆಯ ಮಹತ್ವ ಅರಿಯಲಾರರು!
ಸ್ವತಂತ್ರವಾಗಿ ಕಲಿಯಲು ಕರುಣೆಯಿಲ್ಲದೆ ಬಿಡಬೇಕು!ಆ ಕಲಿಕೆ ಸಾರ್ಥಕ ತಲೆಮಾರು
ಶೃಷ್ಟಿಸುತ್ತದೆ!ಅಪ್ಪ ನನಗೆ ಇದೆ ಮಾಡಿದ್ದು ನಾನು ನನ್ನಮಕ್ಕಳಿಗೆ ಹೀಗೆ ಜೀವನಕಲಿಯಲು
ಬಿಟ್ಟಿರುವುದು! ಹಣ್ಣು ಕೊಡುವ ಬದಲು ಮರವೇರಿ ಕಿತ್ತುತಿನ್ನಲು ಕಲಿಸಬೇಕು!
ಅತಿಪ್ರೀತಿ ತಪ್ಪು!”

Tags