ಸುದ್ದಿಗಳು

ಎಸ್ಕೇಪ್ ಸುಂದರಿಯೇ ಮೊದಲು ಇದಕ್ಕೆ ಉತ್ತರಿಸು ಎಂದು ರಮ್ಯಾರನ್ನು ಪ್ರಶ್ನಿಸಿದ ಜಗ್ಗೇಶ್

ಬೆಂಗಳೂರು, ಮಾ.15:

ನಟಿ ಹಾಗೂ ಮಾಜಿ ಲೋಕಸಭಾ ಸದಸ್ಯೆ ರಮ್ಯಾ  ನಡುವಿನ ಶೀತಲ ಸಮರ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದಾಗಲೆಲ್ಲಾ ಜಗ್ಗೇಶ್ , ರಮ್ಯಾ ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮತ್ತೆ ರಮ್ಯಾ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು ಇದಕ್ಕೆ ಟ್ವೀಟರ್ ಮೂಲಕ ಉತ್ತರಿಸಿರುವ ಜಗ್ಗೇಶ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯವೈಖರಿ  ಹಾಗೂ ಹಿಂದಿನ ಹಾಗೂ ಇಂದಿನ ಸರ್ಕಾರಗಳ ಸರಿ ತಪ್ಪು, ಭಾರತದ 10 ವರ್ಷದ ದೇಶ-ವಿದೇಶಾಂಗ ನೀತಿಯನ್ನು ಅಂಕಿ –ಅಂಶ ಸಮೇತ ನೋಡಿ, ಮತದಾನವನ್ನು ಕಡ್ಡಾಯವಾಗಿ ಮಾಡಿ ಎಂದು ಹೇಳಿ ನಿವ್ಯಾಕೆ ಮಂಡ್ಯದಿಂದ ಪರಾರಿಯಾಗಿದ್ದೀರಾ ? ನಿಮ್ಮನ್ನು ಸಂಸದೆಯನ್ನಾಗಿ ಮಾಡಿದ ಮಂಡ್ಯವನ್ನು ಯಾಕೆ ಖಾಲಿ ಮಾಡಿದ್ರಿ? ನಿವೃತ್ತ ಸುಂದರಿ ಮೊದಲು ಇದಕ್ಕೆ ಉತ್ತರಿಸಿ ಬಳಿಕ ಪ್ರಧಾನಿ ನರೇಂದ್ರಮೋದಿ ಬಗ್ಗೆ ಟೀಕೆ ಮಾಡಿ ಎಂದು ಜಗ್ಗೇಶ್  ತಮ್ಮ ಟ್ಟೀಟ್ ಮೂಲಕ ರಮ್ಯಾರನ್ನು ಕೆಣಕಿದ್ದಾರೆ.

ನೀರ್ದೋಸೆಯಿಂದ ಶುರುವಾಯ್ತು ಶೀತಲ ಸಮರ

ಅಂದಹಾಗೆ ಜಗ್ಗೇಶ್ ಹಾಗೂ ಮೋಹಕ ತಾರೆ ರಮ್ಯಾ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ‘ನಿರ್ದೋಸೆ’ ಚಿತ್ರದ ನಂತರ ಇವರಿಬ್ಬರ ನಡುವೆ ಶೀತಲ ಸಮರ ಶುರುವಾಯ್ತು. ಅದಕ್ಕೆ ಕಾರಣವಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದ ಬಳಿಕ ನಟಿ ರಮ್ಯಾ ಚಿತ್ರದಿಂದ ಹೊರನಡೆದಿದ್ದು. ಇದು ಸಹಜವಾಗಿಯೇ ಚಿತ್ರದಲ್ಲಿ ನಟನಾಗಿ ಅಭಿನಯಿಸಿದ್ದ ಜಗ್ಗೇಶ್ ಅವರ ಕೋಪಕ್ಕ ಕಾರಣವಾಗಿತ್ತು. ಈ ಶೀತಲ ಸಮರ ಮುಂದುವರೆಯುತ್ತಲೇ ಇದ್ದು, ಪದೇ ಪದೇ ರಮ್ಯಾ ಕಾಲೆಳೆಯುವ ಪ್ರಯತ್ನವನ್ನು ಜಗ್ಗೇಶ್  ಮಾಡುತ್ತಲೇ ಇರುತ್ತಾರೆ.

ಸಹವಾಸ ದೋಷದಲ್ಲಿ ಸನ್ಯಾಸಿಕೆಟ್ಟ ಎಂಬ ಗಾದೆಮಾತು ನೆನಪಿದೆಯಾ? ಸಹವಾಸ ಯಾರದ್ದು? ಸನ್ಯಾಸಿ ಯಾರು? ಯಜಮಾನಿಗೆ ಮಾತಾಡಲು ಬರುವುದಿಲ್ಲ ಅಂದಮೇಲೆ ಅವರ ಮನೆ ಮುಸುರೆ ತಿಕ್ಕುವವರಿಗೆ ಬರುತ್ತದೆಯೇ? ರಾಜನಂತೆ ಪ್ರಜೆ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿರುವ ಜಗ್ಗೇಶ್, ಪರೋಕ್ಷವಾಗಿ ರಾಹುಲ್ ಗಾಂಧಿ ಹಾಗೂ ರಮ್ಯಾರಿಗೆ ಟಾಂಗ್ ನೀಡಿದ್ದಾರೆ.

ಇನ್ನೂ ಜಗ್ಗೇಶ್ ಹಾಗೂ ರಮ್ಯಾ ಅವರ ಸಮರ ಇಂದು ನಿನ್ನೆಯದಲ್ಲ. ‘ನಿರ್ದೋಸೆ’ ಯಿಂದ ರಮ್ಯಾ ಹೊರಬಂದ ನಂತರ ಪರೋಕ್ಷವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಗ್ಗೇಶ್ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ಈ ಹಿಂದೆ ರಮ್ಯಾ ಮೋದಿಯವರು ಡ್ರಗ್ಸ್ ಸೇವಿಸಿ ಭಾಷಣ ಮಾಡುತ್ತಾರೆ ಎಂದು ಟೀಕಿಸಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಗ್ಗೇಶ್, ನರೇಂದ್ರಮೋದಿಯವರಿಗೆ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಗೌರವವಿದೆ. ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ಮಾತಾಡುವ ಮಂದಿಗೆ ವಯಸ್ಸು, ಅನುಭವ, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನು ತರ್ಕ ಎಂದು ಒಪ್ಪಿ ವಿಮರ್ಶೆ ನಿರ್ಣಯಿಸುತ್ತಾರೆ ಜನ. ವಿಶ್ವದ ಬಲಿಷ್ಠ ರಾಷ್ಟ್ರದ ನಾಯಕರೇ ಮೋದಿ ಅವರನ್ನು ಒಪ್ಪಿ ಮೆಚ್ಚಿದ್ದಾರೆ. ಅಂತಹದರಲ್ಲಿ ರಮ್ಯಾ ಯಾರು. ರಮ್ಯಾ ಮಾಡಿರುವ ಸಾಧನೆಯಾದರೂ ಏನು. ನೆಟ್ಟಗೆ ಕನ್ನಡ ಮಾತನಾಡಲು ಬಾರದ ಕಾಡುಪಾಪದಂತೆ ಈಕೆ ಎಂದು ಟೀಕಿಸಿದ್ದರು.  ಅಷ್ಟೇ ಅಲ್ಲದೆ ಸ್ಟಾರ್ ಹೊಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟ ಪಾರ್ಟು ಗಿಟ್ಟಿಸಿ, ಪ್ರತಿ ಚಿತ್ರದ ಕ್ಯಾಚ್ಗೆ ಅದೆ ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್, ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ , ಹಾಕ್ದೋರ್ಗೆ ಮೋದಿ ಆದರೇನು ಗಾಂದಿ ಆದರೇನು, ಯಾರಿಗೆ ಬೇಕಾದರೂ ಹಂಗಿಸುತ್ತಾರೆ. ಕಾರಣ ಶ್ರಮವಿಲ್ಲದ ಪಲ್ಲಂಗ ಎರ್ದೋರಲ್ಲವೇ ಎಂದು ಟೀಕಿಸಿದ್ದರು.

ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!

#ramya #ramyatwitter #jaggesh #jaggeshmovies #balkaninews #sandalwood #twitter #ramyaandjaggesh

Tags