ಸುದ್ದಿಗಳು

ಹುಟ್ಟೂರಲ್ಲಿ ಕುಲ ದೈವ ಕಾಲಭೈರವನ ಪುರಾತನ ದೇವಸ್ಥಾನಕ್ಕೆ ಕಾಯಕಲ್ಪ ನೀಡಿದ ನವರಸ ನಾಯಕ ಜಗ್ಗೇಶ್

ಈ ದೇವಾಲಯದ ಉದ್ಘಾಟನೆಗೆ ಮೈಸೂರು ರಾಜವಂಶಸ್ಥರೂ ಬಂದಿದ್ದರು

ಬೆಂಗಳೂರು.ಫೆ.09

ಸುಮಾರು ಒಂದು ವರ್ಷದಿಂದ ನಟ ಜಗ್ಗೇಶ್ ವ್ರತದಲ್ಲಿದ್ದರು. ಅದು ಯಾವ ವೃತ ಅಂತ ಹೇಳಬೇಕಾಗಿಲ್ಲ. ಅವರು ಈ ಹಿಂದೆ ತಮ್ಮ ಸ್ವಗ್ರಾಮದಲ್ಲಿ ಕಾಲಭೈರವನ ದೇವಾಲಯವೊಂದನ್ನು ಪುನರುಜ್ಜೀವನಗೊಳಿಸುವುದರ ಬಗ್ಗೆ ಹೇಳಿಕೊಂಡಿದ್ದರು. ಏಕೆಂದರೆ, ಅವರ ತಾಯಿ ನಂಜಮ್ಮನವರು ದೈವಭಕ್ತೆಯಾಗಿದ್ದರು. ತನ್ನ ಮಗ ಸಾರ್ವಜನಿಕರಿಗೆ ಉಪಯೋಗವಾಗುವ ಸಮುದಾಯ ಭವನ, ದೇವಾಲಯಗಳನ್ನು ಕಟ್ಟಿಸಬೇಕೆಂಬುದು ಅವರ ಆಸೆಯಾಗಿತ್ತು.

ದೇವಸ್ಥಾನಕ್ಕೆ ಕಾಯಕಲ್ಪ ನೀಡಿದ ಜಗ್ಗೇಶ್

ಸದ್ಯ ಈ ದೇವಸ್ಥಾನ ಉದ್ಘಟನೆಯಾಗಿದೆ. ಉದ್ಘಾಟನೆಗೆ ಮೈಸೂರು ರಾಜವಂಶಸ್ಥ ಯದುವೀರ ಶ್ರೀಕೃಷ್ಣದತ್ತ ನರಸಿಂಹರಾಜ ಒಡೆಯರ್ ಆಗಮಿಸಿದ್ದರು. ಜಗ್ಗೇಶ್ ಹುಟ್ಟೂರಿಗೆ ಆಗಮಿಸಿದ ಒಡೆಯರ್ ಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಅಲ್ಲದೇ ಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಯೂ ಆಗಮಿಸಿ ದೇವಾಲಯದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.

ದೇವಸ್ಥಾನದ ಬಗ್ಗೆ

ಜಗ್ಗೇಶ್ ರ ಹುಟ್ಟೂರಾದ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿಲಾಗಿದೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಈ ದೇವಸ್ಥಾನವನ್ನು ಕಟ್ಟಿಸಲು ಜ್ಯೋತಿಷಿಗಳ ಮಾರ್ಗದರ್ಶನದಂತೆ ಕಾಶಿ ಪಟ್ಟಣಕ್ಕೆ ಹೋಗಿ ಬಂದಿದ್ದರು ಜಗ್ಗೇಶ್. ಕಳೆದ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ವಿವಿಧ ಪೂಜಾ ವಿಧಿ-ವಿಧಾನಗಳು ಕಳಶಾರೋಹಣ ಮಾಡಿ ದೇವಾಲಯವನ್ನು ಉದ್ಘಾಟಿಸಲಾಗಿದೆ.

ಹೀಗೆ ಸಿನಿಮಾ ಮತ್ತು ರಾಜಕೀಯ.. ಎರಡೂ ಕ್ಷೇತ್ರಗಳಲ್ಲಿ ನಿರತರಾಗಿರುವ ಜಗ್ಗೇಶ್ ತಮ್ಮ ಹುಟ್ಟೂರಿನಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಮೂಲಕ ಭಕ್ತಿ ಹಾಗೂ ಆಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ ಅಂತ ಹೇಳಬಹುದು.

ಈಗಿನ ಹೊಸ ಟ್ರೆಂಡ್ ಗೆ ಸನ್ ಗ್ಲಾಸ್!!

#jaggesh, #balkaninews #filmnews, #kannadasuddigalu, #kalabhairava

Tags

Related Articles