ಸುದ್ದಿಗಳು

ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ: ನವರಸ ನಾಯಕ ಜಗ್ಗೇಶ್

ಬೇಕಿರುವುದು ಪ್ರೀತಿಯ ಆತ್ಮಗಳು ಎನ್ನುತ್ತಾರೆ ಜಗ್ಗೇಶ್

ಬೆಂಗಳೂರು.ಫೆ.21 ಚಂದನವನದ ಕೆಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿದ್ದು, ಆಗಾಗ ತಮ್ಮ ವಯಕ್ತಿಕ ಹಾಗೂ ಸಿನಿಮಾ ಜೀವನದ ಬಗ್ಗೆ ಬರೆದುಕೊಂಡು ಪ್ರೇಕ್ಷಕರೊಂದಿಗೆ ಹೇಳಿಕೊಳ್ಳುತ್ತಾ ಸದಾ ಹತ್ತಿರವಾಗಿರುತ್ತಾರೆ.

ಇನ್ನು ನಟ ನವರಸ ನಾಯಕ ಜಗ್ಗೇಶ್ ಅದೆಷ್ಟೇ ಎತ್ತರಕ್ಕೆ ತಲುಪಿದರೂ, ಏನೇ ಸಾಧನೆ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಟ್ಟಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇದೀಗ ಅವರು ಇನ್ನೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರೀತಿಯ ಆತ್ಮಗಳು

ಇದೀಗ ಟ್ವೀಟರ್ ಖಾತೆಯ ನಕಲಿ ಫಾಲೋವರ್ ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜಗ್ಗೇಶ್. ಹಾಗೆಯೇ “ನನಗೆ ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಹೌದು, ಇತ್ತೀಚೆಗೆ ಜಗ್ಗೇಶ್, ಟ್ವೀಟರ್ ಖಾತೆಯನ್ನು ಫಾಲೋ ಮಾಡುತ್ತಿರುವ ಕೆಲವರು ಅವರ ಪ್ರತಿಯೊಂದು ಪೋಸ್ಟ್ ಬಗ್ಗೆಯೂ ಕುಹುಕದ ಮಾತುಗಳು ಮತ್ತು ವ್ಯರ್ಥ ಚರ್ಚೆ ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಈ ಬಗ್ಗೆ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.

“ನಾನು ಸಾಮಾಜಿಕ ಜಾಲತಾಣ 2014ರಿಂದ ಬಳಸುತ್ತಿರುವೆ! ಉದ್ದೇಶ ನನ್ನ ಪ್ರೀತಿಸುವ ಆತ್ಮಗಳ ಅನ್ವೇಷಣೆಗೆ! ರಾಯರ ದಯೇ 4.8k ದೊರೆಕಿದ್ದಾರೆ ಧನ್ಯ! ಇವರ ಮದ್ಯೇ ಯಾರೋ fakeಗಳು ಸೇರಿ ನನ್ನಪ್ರತಿ twitಗೂ..! ಅರ್ಥ! ಅಪಹಾಸ್ಯ! timepassಗೆ ಯತ್ನಿಸುತ್ತಾರೆ!

ಈಗ ನನ್ನ ಆಯ್ಕೆ ಆತ್ಮೀಯರ ಉಳಿವಿಕೆ! timepassಗಳಿಂದ ದೂರ ಉಳಿಯೋದು! ಹಾಗಾಗಿ mute! Block ಬಳಸುವೆ. ಬೇಕಿರುವುದು ಪ್ರೀತಿಯ ಆತ್ಮಗಳು ಮಾತ್ರ! ಅವು ನೂರಿದ್ದರು ಸಾಕು! ಕೋಟಿ ಯಾಕೆ ಬೇಕು! ಅಲ್ಲವೇ! ದುಡ್ಡು ಕೊಟ್ಟರೆ ಏನು ಬೇಕಾದರು ಸಿಗುತ್ತದೆ ! ಪ್ರೀತಿ ಒಂದುಬಿಟ್ಟು! ನನಗೆ ಬೇಕಿರುವುದು ಪ್ರೀತಿ ಮಾತ್ರ! ದುಡ್ಡು ತುಂಬ ನೋಡಿರುವೆ! ಸಂತೋಷ ಹುಡುಕುವ!!’ ಎಂದು ಜಗ್ಗೇಶ್ ಹೇಳಿದ್ದಾರೆ.

ಎಂ.ಕಾಮ್ ಅಂದ್ರೆ ಮಾಸ್ಟರ್ ಆಫ್ ಕಾಮರಸ: ಪಡ್ಡೆ ಹುಡುಗರ ಮನ ಗೆದ್ದ ‘ಐ ಲವ್ ಯೂ’ ಟಿ ಟ್ವೆಂಟಿ’ ಸಾಂಗ್..!!!

#jaggesh, #balkaninews #lifenews, #fans, #kannadasuddigalu

Tags

Related Articles